‘ಗಿಲ್ಲಿಯನ್ನು ನೆಗೆಟಿವ್ ಆಗಿ ತೋರಿಸಲು ಪಿಆರ್ ಏಜೆಂಟ್​ಗಳು ಕೆಲಸ ಮಾಡುತ್ತಿದ್ದಾರೆ’; ವಿನಯ್ ಗೌಡ

Edited By:

Updated on: Dec 18, 2025 | 8:04 AM

ವಿನಯ್ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದು ಬಂದವರು. ಅವರು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು. ಈಗ ಅವರು ಒಂದು ವಿಷಯವನ್ನು ರಿವೀಲ್ ಮಾಡಿದ್ದಾರೆ. ಇದನ್ನು ಕೇಳಿ ಅನೇಕರಿಗೆ ಶಾಕ್ ಆಗಿದೆ. ಅಷ್ಟಕ್ಕೂ ಏನು ಆ ವಿಷಯ. ವಿನಯ್ ಹೇಳಿದ ಪಿಆರ್ ಸ್ಟೋರಿ ಏನು? ಆ ಬಗ್ಗೆ ಇಲ್ಲಿದೆ ವಿವರ.

ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳು ಪಬ್ಲಿಸಿಟಿಗಾಗಿ ಪಿಆರ್ ಮಾಡುತ್ತಿದ್ದಾರೆ ಎನ್ನುವ ಆರೋಪ ಇದೆ. ಇದನ್ನು ವಿನಯ್ ಗೌಡ ಕೂಡ ಹೇಳಿದರು. ‘ಕೆಲವರು ಇದನ್ನು ಮಾಡುತ್ತಿದ್ದಾರೆ. ತಮ್ಮ ಕ್ಲೈಂಟ್​ನ ಹೈಲೈಟ್ ಮಾಡಲು ಇತರರನ್ನು ಕೆಳ ಹಾಕಲಾಗುತ್ತಿದೆ. ಗಿಲ್ಲಿಯನ್ನು ನೆಗೆಟಿವ್ ಆಗಿ ತೋರಿಸಲು ಕೆಲವು ಪಿಆರ್ ಏಜೆಂಟ್​​ಗಳು ಕೆಲಸ ಮಾಡುತ್ತಿದ್ದಾರೆ. ಅವನು ಪಿಆರ್​ ಇಟ್ಟುಕೊಂಡಿದ್ದಾನೆ ಎಂದು ನನಗೆ ಅನಿಸುತ್ತಿಲ್ಲ. ಅವನ ಆ್ಯಕ್ಷನ್​ನ ಜನರು ಇಷ್ಟಪಡುತ್ತಿದ್ದಾರೆ ಅಷ್ಟೇ’ ಎಂದಿದ್ದಾರೆ ವಿನಯ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.