ಪಿಯು ಫಲಿತಾಂಶ: ರಬಕವಿ-ಬನಹಟ್ಟಿಯ ಈ ಹುಡುಗ ತಂದೆತಾಯಿ ತನಗಿಟ್ಟ ಹೆಸರನ್ನು ಸಾಧನೆ ಮೂಲಕ ಸಾರ್ಥಕಪಡಿಸಿದ್ದಾನೆ!!

Edited By:

Updated on: Jun 18, 2022 | 5:51 PM

ಪ್ರಥಮೇಶ ಶ್ರೀಕಾಂತ್ ಕರವೇಕರ್ ರಬಕವಿ ಬನಹಟ್ಟಿ ಹತ್ತಿರದ ರಾಂಪುರದ ನಿವಾಸಿಯಾಗಿದ್ದು ಇವನ ತಂದೆ ಶ್ರೀಕಾಂತ್ ಕರವೇಕರ್ ಒಬ್ಬ ನೇಕಾರನಾಗಿದ್ದಾರೆ. ಅವನ ಕುಟುಂಬ ಹರ್ಷೋಲ್ಲಾಸದಲ್ಲಿ ತೇಲಾಡುತ್ತಿದೆ.

Bagalkot: ಈ ಹುಡುಗ, ಪ್ರಥಮೇಶ್ ಮಾಡಿರುವ ಸಾಧನೆ ನಮ್ಮನ್ನು ರೋಮಾಂಚಿತರಾಗಿಸುತ್ತದೆ ಮಾರಾಯ್ರೇ. ಪಿಯು ಫಲಿತಾಂಶಗಳು ಶನಿವಾರ ಹೊರಬಿದ್ದಿದ್ದು ರಬಕವಿ ಬನಹಟ್ಟಿಯ ಎಸ್ ಆರ್ ಎ ಕಾಲೇಜಿನಲ್ಲಿ ಓದುತ್ತಿದ್ದ ಇವನು ಸೈನ್ಸ್ ಸ್ಟ್ರೀಮ್ ನಲ್ಲಿ 594/600 ಅಂಕ ಗಳಿಸಿದ್ದಾನೆ. ಎಸ್ ಎಸ್ ಎಲ್ ಸಿ ಯಲ್ಲೂ ಇವನು 97.2 ಪರ್ಸೆಂಟ್ ಸ್ಕೋರ್ ಮಾಡಿದ್ದನಂತೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಪ್ರಥಮೇಶ ಶ್ರೀಕಾಂತ್ ಕರವೇಕರ್ ರಬಕವಿ ಬನಹಟ್ಟಿ ಹತ್ತಿರದ ರಾಂಪುರದ ನಿವಾಸಿಯಾಗಿದ್ದು ಇವನ ತಂದೆ ಶ್ರೀಕಾಂತ್ ಕರವೇಕರ್ ಒಬ್ಬ ನೇಕಾರನಾಗಿದ್ದಾರೆ. ಅವನ ಕುಟುಂಬ ಹರ್ಷೋಲ್ಲಾಸದಲ್ಲಿ ತೇಲಾಡುತ್ತಿದೆ.

ಪ್ರಥಮೇಶ್ ಸಾಧನೆಗೆ ನಮ್ಮದೊಂದು ಸಲಾಂ!

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.