ಛತ್ತೀಸ್ಗಢ್: ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ (Sonia Gandhi) ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆ ಕಂಡುಬಂದಿದೆ. ನಿಮಗೆ ಗೊತ್ತಿರಬಹುದು, ಕಳೆದ ಎರಡು ಮೂರು ತಿಂಗಳಿಂದ ಅವರ ಆರೋಗ್ಯ ಸರಿಯಿರಲಿಲ್ಲ. ಕೋವಿಡ್-19 ಸೋಂಕಿಗೊಳಗಾಗಿ ಚೇತರಿಸಿಕೊಂಡ ಬಳಿಕ ಅವರನ್ನು ಎರಡು ಬಾರಿ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಛತ್ತೀಸ್ ಗಢ್ ರಾಯ್ಪುರ್ ನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಅಧಿವೇಶನದಲ್ಲಿ (Congress convention) ಪಾಲ್ಗೊಳ್ಳಲು ಅವರು ತಮ್ಮ ಮಗ ಹಾಗೂ ಸಂಸದ ರಾಹುಲ್ ಗಾಂಧಿಯವರೊಂದಿಗೆ (Rahul Gandhi) ಆಗಮಿಸಿದಾಗ ಗೆಲುವಾಗಿ ಕಂಡರು. ಭದ್ರತಾ ಸಿಬ್ಬಂದಿ ಅವರಿಬ್ಬರನ್ನು ಸುತ್ತುವರಿದಿರುವುದರಿಂದ ಸೋನಿಯಾರನ್ನು ಸರಿಯಾಗಿ ನೋಡುವುದು ಸಾಧ್ಯವಾಗದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ