AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VIDEO: ದಿ ಹಂಡ್ರೆಡ್​ನಲ್ಲಿ ಹ್ಯಾಟ್ರಿಕ್ ವಿಕೆಟ್

VIDEO: ದಿ ಹಂಡ್ರೆಡ್​ನಲ್ಲಿ ಹ್ಯಾಟ್ರಿಕ್ ವಿಕೆಟ್

ಝಾಹಿರ್ ಯೂಸುಫ್
|

Updated on: Aug 18, 2025 | 9:59 AM

Share

The Hundred:172 ರನ್​ಗಳ ಗುರಿ ಬೆನ್ನತ್ತಿದ ನಾದರ್ನ್ ಸೂಪರ್ ಚಾರ್ಜರ್ಸ್​ ತಂಡವು 50 ಎಸೆತಗಳಲ್ಲಿ ಕಲೆಹಾಕಿದ್ದು ಕೇವಲ 63 ರನ್​ಗಳು ಮಾತ್ರ. ಅದರಲ್ಲೂ 50ನೇ ಓವರ್​ನ ಕೊನೆಯ ಎಸೆತದಲ್ಲಿ ಸೋನಿ ಬೇಕರ್ ಡೇವಿಡ್ ಮಲಾನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ್ದರು. ಇದಾದ ಬಳಿಕ 86ನೇ ಮತ್ತು 87ನೇ ಎಸೆತಗಳಲ್ಲಿ ಟಾಮ್ ಲಾವ್ಸ್ ಹಾಗೂ ಜೇಕಬ್ ಡಫಿ ವಿಕೆಟ್ ಕಬಳಿಸುವ ಮೂಲಕ ಸೋನಿ ಬೇಕರ್ ಹ್ಯಾಟ್ರಿಕ್ ವಿಕೆಟ್​ಗಳ ಸಾಧನೆ ಮಾಡಿದರು.

ದಿ ಹಂಡ್ರೆಡ್ ಲೀಗ್​ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಬೌಲರ್​ಗಳ ಪಟ್ಟಿಗೆ ಹೊಸ ಸೇರ್ಪಡೆ ಸೋನಿ ಬೇಕರ್. ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಈ ಟೂರ್ನಿಯ 17ನೇ ಪಂದ್ಯದಲ್ಲಿ ಬೇಕರ್ ಮೂರು ಎಸೆತಗಳಲ್ಲಿ ಮೂರು ವಿಕೆಟ್ ಕಬಳಿಸಿ ಇತಿಹಾಸ ನಿರ್ಮಿಸಿದ್ದಾರೆ. ಮ್ಯಾಚೆಂಸ್ಟರ್​ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮ್ಯಾಚೆಂಸ್ಟರ್ ಒರಿಜಿನಲ್ಸ್ ತಂಡವು 100 ಎಸೆತಗಳಲ್ಲಿ 3 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು.

172 ರನ್​ಗಳ ಗುರಿ ಬೆನ್ನತ್ತಿದ ನಾದರ್ನ್ ಸೂಪರ್ ಚಾರ್ಜರ್ಸ್​ ತಂಡವು 50 ಎಸೆತಗಳಲ್ಲಿ ಕಲೆಹಾಕಿದ್ದು ಕೇವಲ 63 ರನ್​ಗಳು ಮಾತ್ರ. ಅದರಲ್ಲೂ 50ನೇ ಓವರ್​ನ ಕೊನೆಯ ಎಸೆತದಲ್ಲಿ ಸೋನಿ ಬೇಕರ್ ಡೇವಿಡ್ ಮಲಾನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ್ದರು. ಇದಾದ ಬಳಿಕ 86ನೇ ಮತ್ತು 87ನೇ ಎಸೆತಗಳಲ್ಲಿ ಟಾಮ್ ಲಾವ್ಸ್ ಹಾಗೂ ಜೇಕಬ್ ಡಫಿ ವಿಕೆಟ್ ಕಬಳಿಸುವ ಮೂಲಕ ಸೋನಿ ಬೇಕರ್ ಹ್ಯಾಟ್ರಿಕ್ ವಿಕೆಟ್​ಗಳ ಸಾಧನೆ ಮಾಡಿದರು.

ಅಲ್ಲದೆ ಈ ಪಂದ್ಯದಲ್ಲಿ 17 ಎಸೆತಗಳನ್ನು ಎಸೆದ ಸೋನಿ ಬೇಕರ್ ಕೇವಲ 21 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದರು. ಪರಿಣಾಮ ನಾರ್ದರ್ನ್ ಸೂಪರ್ ಚಾರ್ಜರ್ಸ್ ತಂಡವು 87 ಎಸೆತಗಳಲ್ಲಿ 114 ರನ್​ಗಳಿಗೆ ಆಲೌಟ್ ಆಗಿ 57 ರನ್​ಗಳಿಂದ ಸೋಲೊಪ್ಪಿಕೊಂಡಿತು.