Video: ಒಬ್ಬ ಮಗ ವಕೀಲ, ಮತ್ತೊಬ್ಬ ಲಂಡನ್ನಲ್ಲಿ ಸೆಟಲ್, ಆದ್ರೆ ಫುಟ್ ಪಾತ್ನಲ್ಲಿ ತಂದೆ ವಾಸ
ಮಗು ಹುಟ್ಟಿದಾಗಿನಿಂದ ಹಿಡಿದು ಬೆಳೆದು ದೊಡ್ಡವನಾಗಿ ತನ್ನ ಕಾಲ ಮೇಲೆ ತಾನು ನಿಂತುಕೊಳ್ಳುವಂತೆ ಆಗುವವರೆಗೂ ಮಕ್ಕಳಿಗಾಗಿ ತಂದೆ ಇಡೀ ಜೀವನವನ್ನೇ ಸವೆಸುತ್ತಾನೆ. ಅಷ್ಟೇ ಅಲ್ಲದೆ ಮೊದಮೊದಲು ಕಡಿಮೆ ಸಂಬಳವಿದ್ದರೆ ಮಗನ ಖರ್ಚಿಗಾಗಿ ಹಣ ಹೊಂದಿಸುತ್ತಾರೆ. ಮದುವೆ ಮಾಡಿಸುತ್ತಾರೆ. ಆದರೆ ಕೆಲವು ಕ್ರೂರ ಮಕ್ಕಳು ತಾವು ಹತ್ತಿ ಬಂದ ಏಣಿಯನ್ನೇ ಒದ್ದು ಹೋಗಿಬಿಡುತ್ತಾರೆ. ಅಂಥದ್ದೇ ಘಟನೆ ಮುಂಬೈನಲ್ಲಿ ನಡೆದಿದೆ.
ಮಗು ಹುಟ್ಟಿದಾಗಿನಿಂದ ಹಿಡಿದು ಬೆಳೆದು ದೊಡ್ಡವನಾಗಿ ತನ್ನ ಕಾಲ ಮೇಲೆ ತಾನು ನಿಂತುಕೊಳ್ಳುವವರೆಗೂ ಮಕ್ಕಳಿಗಾಗಿ ತಂದೆ ಇಡೀ ಜೀವವನ್ನೇ ಸವೆಸುತ್ತಾನೆ. ಅಷ್ಟೇ ಅಲ್ಲದೆ ಮೊದಮೊದಲು ಕಡಿಮೆ ಸಂಬಳವಿದ್ದರೆ ಮಗನ ಖರ್ಚಿಗಾಗಿ ಹಣ ಹೊಂದಿಸುತ್ತಾರೆ. ಮದುವೆ ಮಾಡಿಸುತ್ತಾರೆ. ಆದರೆ ಕೆಲವು ಕ್ರೂರ ಮಕ್ಕಳು ತಾವು ಹತ್ತಿ ಬಂದ ಏಣಿಯನ್ನೇ ಒದ್ದು ಹೋಗಿಬಿಡುತ್ತಾರೆ. ಅಂಥದ್ದೇ ಘಟನೆ ಮುಂಬೈನಲ್ಲಿ ನಡೆದಿದೆ.
ಒಬ್ಬ ಮಗ ವಕೀಲ, ಇನ್ನೊಬ್ಬ ಮಗ ಲಂಡನ್ನಲ್ಲಿ ಸೆಟಲ್ ಆಗಿದ್ದಾನೆ ಆದರೆ ತಂದೆಯ ಜೀವನ ಮಾತ್ರ ಫುಟಪಾತ್ನಲ್ಲಿ, ಈ ದೃಶ್ಯವನ್ನು ನೋಡಿ ಜನರು ಸಂಕಟಪಟ್ಟಿದ್ದಲ್ಲದೇ ಕರ್ಮ ಯಾರನ್ನೂ ಬಿಡುವುದಿಲ್ಲ, ತಂದೆ-ತಾಯಿಯನ್ನು ರಸ್ತೆಯಲ್ಲಿ ಬಿಟ್ಟು ಹೋದವರು ಎಂದೂ ಏಳಿಗೆ ಕಾಣಲು ಸಾಧ್ಯವಿಲ್ಲ ಎಂದು ಹಿಡಿ ಶಾಪ ಹಾಕಿದ್ದಾರೆ.
ವೃದ್ಧ ತಂದೆಯೊಬ್ಬರು ಫುಟ್ ಪಾತ್ನಲ್ಲಿ ಮಲಗಿದ್ದರು, ಅಲ್ಲಿದ್ದವರು ಅವರನ್ನು ಎಬ್ಬಿಸಿ ಮಾತನಾಡಿಸಿದಾಗ ಮಕ್ಕಳೆಲ್ಲರೂ ಒಳ್ಳೆಯ ರೀತಿಯಲ್ಲೇ ಬದುಕುತ್ತಿದ್ದು, ತನ್ನನ್ನು ನೋಡಿಕೊಳ್ಳಲು ಸಾಧ್ಯವಿಲ್ಲವೆಂದು ಬೀದಿಯಲ್ಲಿ ಬಿಟ್ಟಿದ್ದಾಗಿ ತಿಳಿಸಿದ್ದಾರೆ. ಅದೃಷ್ಟವಶಾತ್ ಎನ್ಜಿಒವೊಂದು ಆ ವೃದ್ಧರನ್ನು ಕರೆದೊಯ್ದು, ಊಟ, ವಸತಿಯ ವ್ಯವಸ್ಥೆ ಮಾಡಿದೆ.
ತಂದೆಗೆ ಇಂತಹ ದೌರ್ಜನ್ಯ ಎಸಗುವವರು ತಮ್ಮ ನಂತರದ ಜೀವನದಲ್ಲಿ ತಮ್ಮ ಸ್ವಂತ ಮಕ್ಕಳಿಂದಲೂ ಅದೇ ಗತಿಯನ್ನು ಎದುರಿಸಬೇಕಾಗುತ್ತದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ