ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಯಶಸ್ವೀ ರಾಜಕಾರಣಿ ಮಾತ್ರವಲ್ಲ ಬಹುಮುಖ ಪ್ರತಿಭೆಯ ವ್ಯಕ್ತಿ ಅಂತ ಗೊತ್ತೇ? ವಿಡಿಯೋ ನೋಡಿ
ಕೈಲಾಶ್ ಖೇರ್ ಅವರನ್ನು ತಾವು ಮೊದಲ ಬಾರಿಗೆ ಅಹ್ಮದಾಬಾದ್ನಲ್ಲಿ ನೋಡಿದ್ದು ಎಂದು ಹೇಳುವ ಸಚಿವ ಪ್ರಲ್ಹಾದ್ ಜೋಶಿ, ಕೇವಲ 43 ನೇ ವಯಸ್ಸಿಗೆ ಪದ್ಮಶ್ರೀ ಪ್ರಶಸ್ತಿಯಿಂದ ಪುರಸ್ಕೃತರಾಗೋದು ಅವರಲ್ಲಿರುವ ಅಪಾರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ ಎನ್ನುತ್ತಾರೆ. ಕೇವಲ 14ನೇ ವಯಸ್ಸಿಗೆ ಮನೆಬಿಟ್ಟ ಖೇರ್ ಯುಪಿಗೆ ಬಂದು ಸಂಗೀತದಲ್ಲಿ ಸಾಧನೆ ಮಾಡಿ ತನ್ನ ಕೀರ್ತಿಯನ್ನು ಹಿಮಾಲಯದೆತ್ತರಕ್ಕೆ ಏರಿಸಿಕೊಂಡಿದ್ದಾರೆ ಎಂದು ಜೋಶಿ ಹೇಳಿದರು.
ಬೆಂಗಳೂರು: ನಿನ್ನೆ ಹುಬ್ಬಳ್ಳಿ ನಗರದಲ್ಲಿ ಆರಂಭವಾದ ಎರಡು ದಿನಗಳ ಅಂತರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಉದ್ಘಾಟಿಸಿದ್ದಲ್ಲದೆ ಸಾಯಂಕಾಲ ವಿಖ್ಯಾತ ಗಾಯಕ ಕೈಲಾಶ್ ಖೇರ್ ಅವರು ನಡೆಸಿಕೊಟ್ಟ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ತಮ್ಮಲ್ಲಿ ಹುದುಗಿರುವ ಹಲವು ಪ್ರತಿಭೆಗಳನ್ನು ಅನಾವರಣಗೊಳಿಸಿದರು. ಜೋಶಿ ಒಬ್ಬ ಹೆಸರಾಂತ ರಾಜಕಾರಣಿ ಮಾತ್ರ ಅಲ್ಲ, ಉತ್ತಮ ಗಾಯಕ ಮತ್ತು ಅತ್ಯುತ್ತಮ ಕಾರ್ಯಕ್ರಮ ನಿರೂಪಕ ಅನ್ನೋದನ್ನು ನಿರೂಪಿಸಿದರು. ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಅವರು ವಿಶ್ವವಿಖ್ಯಾತ ಗಾಯಕ ಕೈಲಾಶ್ ಖೇರ್ ಬಗ್ಗೆ ದಣಿವರಿಯದೆ ಮಾತಾಡಿದ್ದು ಮತ್ತು ಅವರೊಂದಿಗೆ ಗುರುವೇ ನಿನ್ನ ಆಟ ಬಲ್ಲವರಾರು ಹಾಡಿದ್ದು ನೆರೆದಿದ್ದ ಲಕ್ಷಾಂತರ ಜನರನ್ನು ರೋಮಾಂಚನಗೊಳಿಸಿತು. ಸಚಿವ ಹಿಂದಿ ಭಾಷೆಯನ್ನು ಬಹಳ ಸುಂದರವಾಗಿ ಮಾತಾಡುತ್ತಾರೆ ಮತ್ತು ಅವರ ಪದಗಳ ಆಯ್ಕೆ ಅದ್ಭುತವಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಗಾಳಿಪಟ ಉತ್ಸವ; ಪಟ ಹಾರಿಸಿ ಮೆರಗು ಹೆಚ್ಚಿಸಿದ ಸಚಿವ ಪ್ರಹ್ಲಾದ ಜೋಶಿ