AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿಯಲ್ಲಿ ಗಾಳಿಪಟ ಉತ್ಸವ; ಪಟ ಹಾರಿಸಿ ಮೆರಗು ಹೆಚ್ಚಿಸಿದ ಸಚಿವ ಪ್ರಹ್ಲಾದ ಜೋಶಿ

5ನೇ ಸಾಲಿನ ಹುಬ್ಬಳ್ಳಿ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ ಹಾಗೂ ಸಾಂಸ್ಕೃತಿಕ ಮಹೋತ್ಸವಕ್ಕೆ ಅದ್ದೂರಿ ಚಾಲನೆ ಸಿಕ್ಕಿದ್ದು ಅಂತರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಸಚಿವ ಪ್ರಹ್ಲಾದ ಜೋಶಿ ಅವರು ಗಾಳಿಪಟ ಹಾರಿಬಿಡುವ ಮೂಲಕ ಮೆರುಗು ನೀಡಿದರು. ದೇಶ- ವಿದೇಶಗಳ 45ಕ್ಕೂ ಹೆಚ್ಚು ಗಾಳಿಪಟ ಸ್ಪರ್ಧಿಗಳು ಭಾಗವಹಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಗಾಳಿಪಟ ಉತ್ಸವ; ಪಟ ಹಾರಿಸಿ ಮೆರಗು ಹೆಚ್ಚಿಸಿದ ಸಚಿವ ಪ್ರಹ್ಲಾದ ಜೋಶಿ
ಹುಬ್ಬಳ್ಳಿಯಲ್ಲಿ ಗಾಳಿಪಟ ಉತ್ಸವ
TV9 Web
| Updated By: ಆಯೇಷಾ ಬಾನು|

Updated on: Jan 28, 2024 | 9:50 AM

Share

ಹುಬ್ಬಳ್ಳಿ, ಜ.28: ವಾಣಿಜ್ಯ ನಗರಿ ಹುಬ್ಬಳ್ಳಿ ಅದ್ಧೂರಿ ಸಾಂಸ್ಕ್ರತಿಕ ಮಹೋತ್ಸವ ಮತ್ತು ಕ್ರೀಡೋತ್ಸವಕ್ಕೆ ಸಾಕ್ಷಿಯಾಗಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi) ಅವರು ಪ್ರತಿವರ್ಷದಂತೆ ‘ಸಂಸದ ಸಾಂಸ್ಕೃತಿಕ ಮಹೋತ್ಸವ–24’ ಅಂಗವಾಗಿ 5ನೇ ಸಾಲಿನ ಹುಬ್ಬಳ್ಳಿ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ (Kite Festival) ಹಾಗೂ ಸಾಂಸ್ಕೃತಿಕ ಮಹೋತ್ಸವವನ್ನು ಏರ್ಪಡಿಸಿದ್ದು ನಿನ್ನೆ ಅದ್ದೂರಿ ಚಾಲನೆ ಸಿಕ್ಕಿದೆ. ಚೋಟಾ ಮುಂಬೈಯಲ್ಲಿ ಐತಿಹಾಸಿಕ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದ ಕಲರವ ಹರಡಿದೆ.

ಹುಬ್ಬಳ್ಳಿ ಶಹರದಲ್ಲಿ ಸಂಸದ ಸಾಂಸ್ಕ್ರತಿಕ ಮಹೋತ್ಸವ, ಸಂಗೀತ ಮತ್ತು ಗಾಳಿಪಟ ಉತ್ಸವ, ಮಲ್ಲಗಂಬ ಕ್ರೀಡೆ, ಚಿತ್ರಕಲೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ನಗರದ ಕೇಶ್ವಪುರ ಕುಸುಗಲ್ ರಸ್ತೆಯಲ್ಲಿರುವ ಆಕ್ಸಫರ್ಡ್ ಕಾಲೇಜು ಮೈದಾನದಲ್ಲಿ ಸಾಂಸ್ಕ್ರತಿಕ, ಕ್ರೀಡೆ, ಸಂಗೀತೋತ್ಸವ ಝೇಂಕರಿಸುತ್ತಿದೆ.

ನಿನ್ನೆ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದ್ದು ಇಂದು ಕೂಡ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಚಾಲನೆಗೊಂಡಿರುವ ಅಂತರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಸಚಿವ ಪ್ರಹ್ಲಾದ ಜೋಶಿ ಅವರು ಗಾಳಿಪಟ ಹಾರಿಬಿಡುವ ಮೂಲಕ ಮೆರುಗು ನೀಡಿದರು. ದೇಶ- ವಿದೇಶಗಳ 45ಕ್ಕೂ ಹೆಚ್ಚು ಗಾಳಿಪಟ ಸ್ಪರ್ಧಿಗಳು ಭಾಗವಹಿಸಿದ್ದಾರೆ. ಇಂಗ್ಲೆಂಡ್, ಇಂಡೋನೇಷ್ಯಾ, ನೆದರ್6 ಲ್ಯಾಂಡ್, ಗ್ರೀಸ್, ಹಾಲೆಂಡ್ ಪಟುಗಳು ಹಾಗೂ ಭಾರತದ ನಾಗ್ಪುರ, ಸೂರತ್, ರಾಜಸ್ತಾನ, ಪಂಜಾಬ್, ಪುಣೆ, ವಡೋದರಾ ಮತ್ತು ಕರ್ನಾಟಕದ ಬೆಂಗಳೂರು, ಬೆಳಗಾವಿ, ದೊಡ್ಡಬಳ್ಳಪುರ ಭಾಗದ ಗಾಳಿಪಟ ಪಟುಗಳು ಆಗಸದತ್ತ ಕಲರವ ಪ್ರದರ್ಶಿಸಿದ್ದರು.

ಇದನ್ನೂ ಓದಿ: ಮೋದಿಗೆ ಮತ ಹಾಕಿದರೆ ಮಾತ್ರ ದೇಶ ನಂಬರ್ ಒನ್ ಆಗಲಿದೆ; ಗಾಳಿಪಟ ಉತ್ಸವದಲ್ಲಿ ಮೋದಿಯವರನ್ನು ಹಾಡಿ ಹೊಗಳಿದ ಪ್ರಹ್ಲಾದ್ ಜೋಶಿ

ಆಗಸದಲ್ಲಿ ಐ ಲವ್ ಇಂಡಿಯಾ, ಬೇಟಿ ಬಚಾವೋ- ಬೇಟಿ ಪಡಾವೋ, ಟೈಗರ್, ಫಿಶ್, ಗರುಡ, ಸೈನಿಕ, ಕಾಂತರ ಸಿನಿಮಾದ ಪಂಜುರ್ಲಿ ಹೀಗೆ ಬಣ್ಣ ಬಣ್ಣದ ಅತ್ಯಾಕರ್ಷಕ ಗಾಳಿಪಟಗಳು ಹಾರಾಡುತ್ತ ಪ್ರೇಕ್ಷಕರನ್ನು ರಂಜಿಸಿವೆ. ಇನ್ನು, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ತಂಡ, ಬಾಲಿವುಡ್ ನ ಖ್ಯಾತ ಗಾಯಕ ಜುಬಿನ್ ನೌಟಿಯಲ್ ಅವರಿಂದ ಸಂಗೀತ ಸುಧೆ, ಇದರ ಜತೆಗೆ ಮಲ್ಲಗಂಬ ಕ್ರೀಡೆ ಸಹ ಎಲ್ಲರ ಮಾನಸೆಳೆಯಿತು.

ಸಚಿವ ಜೋಶಿ ಅವರೇ ರೂವಾರಿ

ಇದೆಲ್ಲದರ ರೂವಾರಿ ಕೇಂದ್ರ ಸಂಸದೀಯ ಮತ್ತು ಕಲ್ಲಿದ್ದಲು ಸಚಿವ ಹಾಗೂ ಧಾರವಾಡ ಸಂಸದ ಪ್ರಹ್ಲಾದ ಜೋಶಿ ಅವರು. ಕಳೆದ ಅನೇಕ ವರ್ಷಗಳಿಂದಲೂ ಜೋಶಿ ಅವರು ಸಾಂಸ್ಕ್ರತಿಕ ಮತ್ತು ಕ್ರೀಡಾಕೂಟಗಳಿಗೆ ಉತ್ತೇಜನ ನೀಡುತ್ತಲೇ ಬಂದಿದ್ದಾರೆ. ಹೀಗಾಗಿ ಈಗ ಹುಬ್ಬಳ್ಳಿ- ಧಾರವಾಡ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದಲ್ಲೂ ಇವರ ಹೆಸರು ರಿಂಗಣಿಸುತ್ತಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ