ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಅಲರ್ಟ್; ಜಗದೀಶ್ ಶೆಟ್ಟರ್ ಬೆಂಬಲಿಗ ಕಾಂಗ್ರೆಸ್​ ಸೇರ್ಪಡೆ

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್​ನಿಂದ ಮರಳಿ ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ಹುಬ್ಬಳ್ಳಿ-ಧಾರವಾಡ ರಾಜಕಾರಣದಲ್ಲಿ ತಲ್ಲಣ ಉಂಟಾಗಿದೆ. ಇದರ ಬೆನ್ನಲ್ಲೇ ಅಲರ್ಟ್ ಆದ ಕಾಂಗ್ರೆಸ್, ವಿಧಾನಸಭೆ ಚುನಾವಣೆಯಲ್ಲಿ ಶೆಟ್ಟರ್ ಬೆಂಬಲಿಸಿದ್ದ ಪಾಲಿಕೆಯ ಪಕ್ಷೇತರ ಸದಸ್ಯ ಚೇತನ‌ ಹಿರೇಕೆರೂರ್ ಅವರಿಗೆ ಗಾಳ ಹಾಕಿದೆ. ಇಂದು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಅಲರ್ಟ್; ಜಗದೀಶ್ ಶೆಟ್ಟರ್ ಬೆಂಬಲಿಗ ಕಾಂಗ್ರೆಸ್​ ಸೇರ್ಪಡೆ
ಜಗದೀಶ್ ಶೆಟ್ಟರ್ ಬೆಂಬಲಿಗ ಚೇತನ ಹಿರೇಕೆರೂರ್ ಕಾಂಗ್ರೆಸ್​ ಸೇರ್ಪಡೆ
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: Rakesh Nayak Manchi

Updated on:Jan 27, 2024 | 6:12 PM

ಹುಬ್ಬಳ್ಳಿ, ಜ.27: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ಅವರು ಬಿಜೆಪಿಗೆ ಘರ್​ವಾಪ್ಸಿ ಆದ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ (Hubballi) ಅಲರ್ಟ್ ಆದ ಕಾಂಗ್ರೆಸ್, ವಿಧಾನಸಭೆ ಚುನಾವಣೆಯಲ್ಲಿ ಶೆಟ್ಟರ್​ಗೆ ಬೆಂಬಲಿಸಿದ್ದ ಪಾಲಿಕೆಯ ಪಕ್ಷೇತರ ಸದಸ್ಯನಿಗೆ ಗಾಳ ಹಾಕುವಲ್ಲಿ ಯಶಸ್ವಿಯಾಗಿದೆ. ಚೇತನ‌ ಹಿರೇಕೆರೂರ್ ಅವರು ಇಂದು ಅಧಿಕೃತವಾಗಿ ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆಯ ವಾರ್ಡ್ ನಂಬರ್ 52ರ ಪಕ್ಷೇತರ ಸದಸ್ಯ ಚೇತನ‌ ಹಿರೇಕೆರೂರ್ ಅವರು ಕಳೆದ ವಿಧಾನಸಭೆ ಚುನಾವಣೆ ವೇಳೆ ಶೆಟ್ಟರ್ ಪರ ಕ್ಯಾಂಪೇನ್ ಮಾಡಿದ್ದರು. ಆದರೆ, ಶೆಟ್ಟರ್ ಮತ್ತೆ ಬಿಜೆಪಿ ಸೇರ್ಪಡೆಯಾಗುತ್ತಿದ್ದಂತೆ ಕಾಂಗ್ರೆಸ್ ಚೇತನ ಹಿರೇಕೆರೂರ್ ಅವರಿಗೆ ಗಾಳ ಹಾಕಿದೆ. ಇಂದು ಹುಬ್ಬಳ್ಳಿಯ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಸಮ್ಮುಖದಲ್ಲಿ ಚೇತನ ಹಿರೇಕೆರೂರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್​ ಕೈತಪ್ಪಿದ ಹಿನ್ನೆಲೆ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಅದರಂತೆ ಚುನಾವಣೆಯಲ್ಲಿ ಶೆಟ್ಟರ್ ಅವರನ್ನು ಬೆಂಬಲಿಸಿದ ಮರುದಿನವೇ ಚೇತನ ಹಿರೇಕೆರೂರ್ ಅವರನ್ನು ಗಡಿಪಾರು ಮಾಡಲಾಗಿತ್ತು. ಚೇತನ ಹಿರೇಕೆರೂರ್ ಗಡಿಪಾರನ್ನು ಜಗದೀಶ್ ಶೆಟ್ಟರ್ ಖಂಡಿಸಿದ್ದರು.

ಇದನ್ನೂ ಓದಿ: ಕಾಂಗ್ರೆಸ್​​​ಗೆ ಕೈಕೊಟ್ಟ ಜಗದೀಶ್​ ಶೆಟ್ಟರ್​​ ಮಾತೃಪಕ್ಷ ಬಿಜೆಪಿಗೆ ಘರ್​ವಾಪಸಿ ಆದರು

ಸಭೆಯಲ್ಲಿ ಮಾತನಾಡಿದ ಸಂತೋಷ್ ಲಾಡ್, ರಾಮನ ಹೆಸರಲ್ಲಿ ಬಿಜೆಪಿ ದೇಶವನ್ನು ಲೂಟಿ ಮಾಡುತ್ತಿದೆ. ಕಾಂಗ್ರೆಸ್ ಸಿದ್ಧಾಂತದ ಬಗ್ಗೆ ಮೊದಲು ತಿಳುವರಿಕೆ ಇರಬೇಕು. ಹಿಂದೂಗಳ ಸಮಸ್ಯೆ ಪರಿಹಾರ ಮಾಡುತ್ತೇವೆ ಅಂತ ಬಿಜೆಪಿ ಅವರು ಮುಂದೇ ಬರುತ್ತಾರೆ. ರಾಮ ಮಂದಿರದ ಹೆಸರಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಾರೆ. ನಾವು ನಮ್ಮ ಕಾರ್ಯಕ್ರಮಗಳ ಬಗ್ಗೆ ಮಾತನಾಡೋಣ. ಬಿಜೆಪಿ ಅವರು ಬಹಿರಂಗವಾಗಿ ಚರ್ಚೆಗೆ ಬರಲಿ ಎಂದರು.

ಬಿಜೆಪಿ ಏನೇ ಬೆಂಕಿ ಹಚ್ಚಲಿ, ನಾವು ಬೆಂಕಿ ಆರಿಸೋಣ. ದೇಶದಲ್ಲಿ 33 ಕೋಟಿ ದೇವರುಗಳಿವೆ. ಆದರೆ ಬಿಜೆಪಿಯವರು ಕಟ್ಟಿಸಿದ್ದು ಕೇವಲ ಒಂದು ರಾಮನ ಗುಡಿ. ಬಿಜೆಪಿ ಬರಿ ಹಿಂದೂ ಮುಸ್ಲಿಂ ಬಗ್ಗೆ ಮಾತಾಡುತ್ತಾರೆ. ಅಂಬೇಡ್ಕರ್ ಮತ್ತು ಬಸವಣ್ಣರೊಂದಿಗೆ ಬಿಜೆಪಿಗೆ ಕೌಂಟರ್ ಕೊಡಬೇಕು. ಅಂಬೇಡ್ಕರ್ ಪರಿಶಿಷ್ಟರಿಗೆ ಮಾತ್ರ ನೆರವು ನೀಡಲಿಲ್ಲ. ಎಲ್ಲರ ಹಿತ ಬಯಸಿದರು. ಬಿಜೆಪಿಗೆ ದಲಿತರ ಮೇಲೆ ಅಷ್ಟು ಇಷ್ಟವಿದ್ದರೆ ಎಲ್ಲ ದೇವಾಲಯಗಳಲ್ಲಿ ಪೂಜೆ ಮಾಡಲು ಅವಕಾಶ ಕೊಡಲಿ ಎಂದರು.

ಎಂಟು ತಿಂಗಳ ಹಿಂದೆ ಟಿಕೆಟ್‌ ಕೊಡದೆ ಸ್ವಾಭಿಮಾನಕ್ಕೆ ಧಕ್ಕೆಯಾಯ್ತು ಎಂದು ಬಿಜೆಪಿ ಗುಡ್‌ಬೈ ಹೇಳಿದ್ದ ಶೆಟ್ಟರ್‌ ಮತ್ತೆ ಕೇಸರಿ ಪಡೆಗೆ ಸೇರಿಕೊಂಡಿದ್ದಾರೆ. ಉತ್ತರಕ ರ್ನಾಟಕದಲ್ಲಿ ತಕ್ಕಮಟ್ಟಿಗೆ ಒಂದಿಷ್ಟು ಸಮುದಾಯದ ಹಿಡಿತ ಹೊಂದಿರುವ ಶೆಟ್ಟರ್‌ ಮರಳಿ ಗೂಡಿಗೆ ಬರಲು ಇರುವ ಕಾರಣಗಳಲ್ಲಿ ಕಾಂಗ್ರೆಸ್ ಸ್ಥಳೀಯ ನಾಯಕರ ವಿರೋಧವೂ ಒಂದಾಗಿದೆ.

ಕಾಂಗ್ರೆಸ್ ಸ್ಥಳೀಯ ಮುಖಂಡರಿಂದ ಜಗದೀಶ್ ಶೆಟ್ಟರ್‌ಗೆ ವಿರೋಧವಿತ್ತು. ಶೆಟ್ಟರ್ ವಿರುದ್ಧ ಸ್ಥಳೀಯ ಕಾಂಗ್ರೆಸ್ ಮುಖಂಡರು ಅಪಪ್ರಚಾರ ಮಾಡಿರುವ ಆರೋಪವೂ ಇದೆ. ಇನ್ನೊಂದು ಕಾರಣ ನೋಡುವುದಾದರೆ, ಬಿಜೆಪಿಯಲ್ಲಿ ಬಿ.ಎಲ್.ಸಂತೋಷ್ ಹಿಡಿತ ಕಡಿಮೆಯಾಗಿರುವುದರಿಂದ ಬಿಜೆಪಿಗೆ ವಾಪಸ್ ಆಗಿದ್ದಾರೆ ಎನ್ನಲಾಗುತ್ತಿದೆ.

ಹಿರಿಯ ಲಿಂಗಾಯತ ಸಚಿವರೊಬ್ಬರಿಂದ ಶೆಟ್ಟರ್ ತುಳಿಯಲು ಯತ್ನ ನಡೆದಿತ್ತಂತೆ. ಮತ್ತೊಬ್ಬ ಶೆಟ್ಟರು ಬೆಳೆಯಲು ಬಿಡಬಾರದೆಂಬ ಉದ್ದೇಶ ಆ ನಾಯಕನಿಗಿತ್ತಂತೆ. ಇದರಿಂದಾಗಿ ಉತ್ತರ ಕರ್ನಾಟಕದ ಹಿರಿಯ ಸಚಿವರೊಬ್ಬರ ಮೇಲೆ ಶೆಟ್ಟರ್ ಬೇಸರ ವ್ಯಕ್ತಪಡಿಸಿದ್ದರು ಎಂದು ತಿಳಿದುಬಂದಿದೆ. ಇದಿಷ್ಟೇ ಅಲ್ಲ, ಕಾಂಗ್ರೆಸ್‌ಗಿಂತ ತಮ್ಮ ಭವಿಷ್ಯ ಬಿಜೆಪಿಯಲ್ಲಿ ಗೋಚರಿಸಿದಂತಿದೆ. ಆ ದೂರದೃಷ್ಟಿಯೂ ಬಿಜೆಪಿಗೆ ಘರ್​ವಾಪ್ಸಿ ಆಗಲು ಕಾರಣ ಎನ್ನಲಾಗುತ್ತಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:07 pm, Sat, 27 January 24

ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ