ಹೋದಷ್ಟೇ ವೇಗವಾಗಿ ವಾಪಸಾದ ಜಗದೀಶ್ ಶೆಟ್ಟರ್ ಲಿಂಗಾಯತ ಕಾರ್ಡ್ ಹಿಡೀತಾರಾ! ಪ್ರಲ್ಹಾದ್ ಜೋಶಿ ಉರುಳಿಸೋ ಬ್ರಹ್ಮಾಸ್ತ್ರ ಏನು?
ಶೆಟ್ಟರ್ ಘರವಾಪ್ಸಿಯಿಂದ ಇಡೀ ಧಾರವಾಡ ಲೋಕಸಭೆ ರಣಕಣವೇ ಬದಲಾಗಿ ಹೋಗಿದೆ. ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಯಾಕೆ ಘರವಾಪ್ಸಿ ಯಾದರೂ, ಶೆಟ್ಟರ್ ಮತ್ತೆ ಲಿಂಗಾಯತ ದಾಳ ಉರುಳಿಸ್ತಾರಾ? ಏನಿದು ಶೆಟ್ಟರ್ ಘರವಾಪ್ಸಿ ಹಿಂದಿನ ಲಿಂಗಾಯತ ದಾಳ? ಈ ಲಿಂಗಾಯತ ದಾಳಕ್ಕೆ ಮತ್ತೊಬ್ಬ ಪ್ರಭಾವಿ, ಕೇಂದ್ರ ಮಂತ್ರಿ ಉರುಳಿಸಿರೋ ಬ್ರಹ್ಮಾಸ್ತ್ರ ಏನು ಅನ್ನೋದರ ರಾಜಕೀಯ ವಿಶ್ಲೇಷಣೆ ಇಲ್ಲಿದೆ ನೋಡಿ.
ಶೆಟ್ಟರ್ ಘರವಾಪ್ಸಿಯಿಂದ ಇಡೀ ಧಾರವಾಡ ಲೋಕಸಭೆ ರಣಕಣವೇ ಬದಲಾಗಿ ಹೋಗಿದೆ. ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಯಾಕೆ ಘರವಾಪ್ಸಿ ಯಾದರೂ, ಶೆಟ್ಟರ್ ಮತ್ತೆ ಲಿಂಗಾಯತ ದಾಳ ಉರುಳಿಸ್ತಾರಾ? ಏನಿದು ಶೆಟ್ಟರ್ ಘರವಾಪ್ಸಿ ಹಿಂದಿನ ಲಿಂಗಾಯತ ದಾಳ? ಈ ಲಿಂಗಾಯತ ದಾಳಕ್ಕೆ ಮತ್ತೊಬ್ಬ ಪ್ರಭಾವಿ, ಕೇಂದ್ರ ಮಂತ್ರಿ ಉರುಳಿಸಿರೋ ಬ್ರಹ್ಮಾಸ್ತ್ರ ಏನು ಅನ್ನೋದರ ರಾಜಕೀಯ ವಿಶ್ಲೇಷಣೆ ಇಲ್ಲಿದೆ ನೋಡಿ.
ವಿಧಾನಸಭೆ ಚುನಾವಣೆ ವೇಳೆ ಸಾಕಷ್ಟು ಸುದ್ದಿಯಾಗಿದ್ದ ಹುಬ್ಬಳ್ಳಿ ಮತ್ತೆ ರಾಜಕೀಯ ಕಾರಣಕ್ಕೆ ಮುನ್ನೆಲೆಗೆ ಬಂದಿದೆ. ಕಳೆದ ವಿಧಾನಸಬೆ ಚುನಾವಣೆ ವೇಳೆ ಬಿಜೆಪಿ ತೊರೆದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿದ್ರು. ಕಾಂಗ್ರೆಸ್ ನಿಂದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಸೋತಿದ್ದು ಇದೀಗ ಇತಿಹಾಸ. ಸೋತ ಜಗದೀಶ್ ಶೆಟ್ಟರ್ ಬೆನ್ನಿಗೆ ಕಾಂಗ್ರೆಸ್ ನಿಂತಿತ್ತು. ಶೆಟ್ಟರ್ ಸೋತರೂ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿತ್ತು. ಆದ್ರೆ ಧೀಡಿರ್ ರಾಜಕೀಯ ಬೆಳವಣಿಗೆಯಲ್ಲಿ ಮಾಜಿ ಸಿಎಂ ಶೆಟ್ಟರ್ ವಾಪಸ್ ಕಮಲದ ಕೈ ಹಿಡಿದಿದ್ದಾರೆ.
ಕಾಂಗ್ರೆಸ್ ನಿಂದ ಬಿಜೆಪಿಗೆ ಘರ್ವಾಪ್ಸಿ ಯಾಗಿರೋ ಜಗದೀಶ್ ಶೆಟ್ಟರ್ ನಡೆ ಇದೀಗ ಸಾಕಷ್ಟು ಕೂತುಹಲಕ್ಕೆ ಕಾರಣವಾಗಿದೆ. ಘರವಾಪ್ಸಿಯಾಗಿರೋ ಶೆಟ್ಟರ್ ಮುಂದಿನ ನಡೆ ಏನೂ ಅನ್ನೋದು ಸದ್ಯದ ಕೂತುಹಲ. ಅಷ್ಟಕ್ಕೂ ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಯಾಕೆ ಘರವಾಪ್ಸಿ ಯಾದರೂ, ಶೆಟ್ಟರ್ ಮತ್ತೆ ಲಿಂಗಾಯತ ದಾಳ ಉರುಳಿಸ್ತಾರಾ? ಏನಿದು ಶೆಟ್ಟರ್ ಘರವಾಪ್ಸಿ ಹಿಂದಿನ ಲಿಂಗಾಯತ ದಾಳ? ಈ ಲಿಂಗಾಯತ ದಾಳಕ್ಕೆ ಮತ್ತೊಬ್ಬ ಪ್ರಭಾವಿ ಮಂತ್ರಿ ಉರುಳಿಸಿರೋ ಬ್ರಹ್ಮಾಸ್ತ್ರ ಏನೂ ಅನ್ನೋದರ ರಾಜಕೀಯ ವಿಶ್ಲೇಷಣೆ ಇಲ್ಲಿದೆ ನೋಡಿ.
ನಿನ್ನೆ ರಾಜ್ಯ ರಾಜಕಾರಣದಲ್ಲಿ ಯಾರೂ ಉಹೇ ಮಾಡದಿರೋ ಲೆಕ್ಕಾಚಾರವೊಂದು ನಡೆದುಹೋಗಿದೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಜಗದೀಶ್ ಶೆಟ್ಟರ್ ನಿನ್ನೆ ದೆಹಲಿಯಲ್ಲಿ ಮತ್ತೆ ಬಿಜೆಪಿ ಬಾವುಟ ಹಿಡಿದಿದ್ದಾರೆ. ಶೆಟ್ಟರ್ ಏಕಾಏಕಿ ಘರವಾಪ್ಸಿ ಹಿಂದಿನ ಕಥೆ ಏನೂ. ಅಷ್ಟಕ್ಕೂ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಹೊರಬಂದ ಶೆಟ್ಟರ್ ಬಿಜೆಪಿ ನಾಯಕರ ವಿರುದ್ದ ಬೆಂಕಿ ಉಗುಳಿದ್ರು. ಬಿಜೆಪಿ ಲಿಂಗಾಯತರಿಗೆ ಅನ್ಯಾಯ ಮಾಡಿದೆ, ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದಿದ್ರು. ಜಸ್ಟ್ 10 ತಿಂಗಳಲ್ಲಿ ಇಡೀ ರಾಜಕೀಯ ಚಿತ್ರಣವೇ ಬದಲಾಗಿ ಹೋಗಿದೆ.
ಕೆಲ ನಾಯಕರನ್ನು ಕರೆದುಕೊಂಡು ಹೋಗಿ ಕಾಂಗ್ರೆಸ್ ಸೇರಿಸಿದ್ದ ಶೆಟ್ಟರ್ ಇದೀಗ ಆಪರೇಶನ್ ಕಮಲಕ್ಕೆ ಒಳಗಾಗಿದ್ದಾರೆ. ಶೆಟ್ಟರ್ ಘರವಾಪ್ಸಿ ಹಿಂದೆ ಸಾಕಷ್ಟು ಲೆಕ್ಕಾಚಾರವೂ ಇದೆ,ಇದಲ್ಲದೆ ಇದು ಕೇವಲ ಒಂದು ದಿನದ ಆಪರೇಶನ್ ಅಲ್ಲ.ಶೆಟ್ಟರ್ ಘರವಾಪ್ಸಿ ಯಲ್ಲಿ ಹಲವು ಪ್ರಭಾವಿ ನಾಯಕರ ಶ್ರಮವೂ ಇದೆ.ವಿಧಾನಸಭೆ ಚುನಾವಣೆ ವೇಳೆ ಒಂದೇ ಒಂದು ಟಿಕೆಟ್ ಗಾಗಿ ಕಾಂಗ್ರೆಸ್ ಸೇರಿದ್ದ ಶೆಟ್ಟರ್ ಲೋಕಸಮರಕ್ಕೂ ಮುನ್ನ ಘರವಾಪ್ಸಿಯಾಗಿರೋದು ಹಲವು ಲೆಕ್ಕಾಚಾರಕ್ಕೆ ನಾಂದಿ ಹಾಡಿದೆ.
ಶೆಟ್ಟರ್ ಘರವಾಪ್ಸಿಯಿಂದ ಇಡೀ ಧಾರವಾಡ ಲೋಕಸಭೆ ರಣಕಣವೇ ಬದಲಾಗಿ ಹೋಗಿದೆ. ಜೋಶಿ ವಿರುದ್ದ ಶೆಟ್ಟರ್ ಕಣಕ್ಕಿಳಿಸೋ ತಯಾರಿಯಲ್ಲಿದ್ದ ಕಾಂಗ್ರೆಸ್ ಗೆ ಶೆಟ್ಟರ್ ಮುಟ್ಟಿ ನೋಡುವಂತಹ ಶಾಕ್ ಕೊಟ್ಟಿದ್ದಾರೆ.ಅಷ್ಟಕ್ಕೂ ಶೆಟ್ಟರ್ ಲೋಕಸಭೆ ಹೊತ್ತಲ್ಲಿ ಘರವಾಪ್ಸಿಯಾಗಿದ್ದು ಯಾಕೆ ಅನ್ನೋದರ ಹಿಂದಿನ ಗುಟ್ಟು ಇಲಿದೆ.
ಲೋಕಸಭೆ ಚುನಾವಣೆ ಗೆ ಕೆಲವು ತಿಂಗಳು ಬಾಕಿ ಇರೋವಾಗಲೇ ಶೆಟ್ಟರ್ ವಾಪಸ್ ಆಗಿರೋದು ರಾಜಕೀಯ ಪಡಸಾಲೆಯಲ್ಲಿ ಹೊಸದೊಂದು ಚರ್ಚೆ ಹುಟ್ಟು ಹಾಕಿದೆ.ಅದು ಧಾರವಾಡ ಲೋಕಸಭಾ ಕ್ಷೇತ್ರದ ವಿಚಾರವಾಗಿ ಬಹು ದೊಡ್ಡದೊಂದು ಬದಲಾವಣೆಯಾಗೋ ಮುನ್ಸೂಚನೆ ಎನ್ನಲಾಗಿದೆ.
ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಈಗ ಪ್ರಭಾವಿ ನಾಯಕ ಸಂಸದ ಪ್ರಲ್ಹಾದ್ ಜೋಶಿ.. ಕಳೆದ 20 ವರ್ಷಗಳಿಂದ ಜೋಶಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 2004 ರಿಂದ ಜೋಶಿ ಸಂಸದರಾಗಿದ್ದಾರೆ.ಮೋದಿ ಹಾಗೂ ಅಮಿತ್ ಶಾ ಅವರೊಂದಿಗೆ ಜೋಶಿ ನಿಕಟ ಸಂಪರ್ಕ ಹೊಂದಿದ್ದಾರೆ,ಇದರಲ್ಲಿ ಯಾವದೇ ಅನುಮಾನವೇ ಇಲ್ಲ.
ಆದ್ರೆ ಈ ಬಾರಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಹೊಸದೊಂದು ಚರ್ಚೆಯಾಗಿದೆ.ಅದೇ ಕಾರಣಕ್ಕೆ ಶೆಟ್ಟರ್ ಘರವಾಪ್ಸಿಯಾಗಿದಾರೆ ಎನ್ನಲಾಗಿದೆ. ಅಷ್ಟಕ್ಕೂ ಹೊಸ ಚರ್ಚೆ ಏನಂದ್ರೆ ಈ ಬಾರಿ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಲಿಂಗಾಯತರಿಗೆ ಟಿಕೆಟ್ ಕೊಡಬೇಕು ಅನ್ನೋದು,ಲಿಂಗಾಯತ ನಾಯಕರಿಗೆ ಟಿಕೆಟ್ ಕೊಡಬೇಕು ಅನ್ನೋ ಕೂಗು ಎದ್ದಿದೆ.
ಇದೇ ಕಾರಣಕ್ಕೆ ಕಳೆದ ಕೆಲ ದಿನಗಳ ಹಿಂದೆ ಜೋಶಿ ಕ್ಷೇತ್ರ ಬದಲಾವಣೆ ಮಾಡ್ತಾರೆ ಅನ್ನೋ ಸುದ್ದಿ ಜೋರಾಗಿತ್ತು.ಇದಲ್ಲದೆ ಈ ಬಾರಿ ಜೋಶಿ ಚುನಾವಣೆಗೆ ಸ್ಪರ್ಧೆ ಮಾಡಲ್ಲ ಅನ್ನೋ ವಿಷಯವನ್ನು ತೇಲಿ ಬೀಡಲಾಗಿತ್ತು.ಇದಲ್ಲದಕ್ಕೂ ಜೋಶಿ ನಾನು ಧಾರವಾಡ ದಿಂದಲೇ ಸ್ಪರ್ಧೆ ಮಾಡೋದು ಎಂದು ಫುಲ್ ಸ್ಟಾಪ್ ಹಾಕಿದ್ರು.
ಆದ್ರೆ ಇದೀಗ ಮತ್ತೆ ಶೆಟ್ಟರ್ ಘರವಾಪ್ಸಿ ಯಾಗಿರೋದು ನೋಡಿದ್ರೆ ಲಿಂಗಾಯತ ದಾಳ ಉರುಳಿಸಿದ್ದು ಸ್ಪಷ್ಟ.ಶೆಟ್ಟರ್ ಪಕ್ಷ ತೊರೆದು ಹೋದಾಗ ಪರೋಕ್ಷವಾಗಿ ಬಹಿರಂಗವಾಗಿ ಜೋಶಿ ವಿರುದ್ದ ಅಸಮಾಧಾನ ಹೊರಹಾಕಿದ್ರು.ಕೇವಲ ಶೆಟ್ಟರ್ ಮಾತ್ರ ಅಲ್ಲ,ಮಾಜಿ ಸಚಿವ ಮುನೇನಕೊಪ್ಪ ಕೂಡಾ ಪರೋಕ್ಷವಾಗಿ ಜೋಶಿ ವಿರುದ್ದ ಅಸಮಾಧಾನ ಹೊರಹಾಕಿದ್ರು.ಇದೀಗ ಅದೇ ಮುನೇನಕೊಪ್ಪ ಶೆಟ್ಟರ್ ಅವರನ್ನು ವಾಪಸ್ ಪಕ್ಷಕ್ಕೆ ಕರೆತರಲು ಮುಂದಾಳತ್ವ ವಹಿಸಿರೋದು ಲಿಂಗಾಯತ ಅಸ್ತ್ರಕ್ಕೆ ಮತ್ತಷ್ಟು ಪುಷ್ಟಿ ನೀಡಿದಂತಿದೆ.
ಅಕಸ್ಮಾತ್ ಜೋಶಿ ಇದೊಂದು ಸಾರಿ ಗೆದ್ದು ಬಿಟ್ಟರೆ ಬಹುತೇಕ ನಾಯಕರ ರಾಜಕೀಯ ಜೀವನ ಅಂತ್ಯವಾಗ್ತಿತ್ತು.ಹೀಗಾಗಿ ಶೆಟ್ಟರ್ ಘರವಾಪ್ಸಿ ಯಾಗಿ ಮತ್ತೆ ಲಿಂಗಾಯತ ದಾಳ ಉರುಳಿಸಿದ್ದಾರೆ ಎನ್ನಲಾಗಿದೆ. ಅದು ಧಾರವಾಡ ಲೋಕಸಭೆಯಿಂದ ಶೆಟ್ಟರ್ ಸ್ಪರ್ಧೆ ಮಾಡಬಹುದು, ಇಲ್ಲ ಶಿಷ್ಯ ಮುನೇನಕೊಪ್ಪ ಸ್ಪರ್ಧೆ ಮಾಡಬಹುದು ಎನ್ನಲಾಗಿದೆ.ಇನ್ನು ಇದಲ್ಲದೆ ಬೆಳಗಾವಿ ಅಥವಾ ಹಾವೇರಿಯಿಂದಲೂ ಶೆಟ್ಟರ್ ಸ್ಪರ್ಧೆ ಮಾಡೋ ಲೆಕ್ಕಾಚಾರ ಇದೆ.ಆದ್ರೆ ಇದೆಲ್ಲವೂ ರಾಜಕೀಯ ಚರ್ಚೆ,ಅದಕ್ಕೆ ಅಧಿಕೃತ ಮುದ್ರೆ ಬಿದ್ದಿಲ್ಲ.
ಧಾರವಾಡ ಲೋಕಸಭಾ ಕ್ಷೇತ್ರವು ಒಟ್ಟು 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಹೊಂದಿದೆ- ಧಾರವಾಡ ಗ್ರಾಮೀಣ, ಹುಬ್ಬಳ್ಳಿ ಧಾರವಾಡ ಪಶ್ಚಿಮ, ಹುಬ್ಬಳ್ಳಿ ಧಾರವಾಡ ಪೂರ್ವ, ಹುಬ್ಬಳ್ಳಿ ಧಾರವಾಡ ಕೇಂದ್ರ, ನವಲಗುಂದ, ಕುಂದಗೋಳ ಮತ್ತು ಕಲಘಟಗಿ. ಹಾವೇರಿ ಜಿಲ್ಲೆಯಲ್ಲಿ ಶಿಗ್ಗಾವ ವಿಧಾನ ಸಭಾ ಕ್ಷೇತ್ರವನ್ನು ಹೊಂದಿಕೊಂಡು ಲೋಕಸಭಾ ಕ್ಷೇತ್ರ ಒಟ್ಟು 8 ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯನ್ನು ಹೊಂದಿದೆ.
ಧಾರವಾಡ ಲೋಕಸಭಾ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 15,38603 ಪುರುಷ ಮತದಾರರು 7,71719, ಮಹಿಳಾ ಮತದಾರರು 7,66,798 ಲಿಂಗಾಯತ -5,70000 ಮುಸ್ಲಿಂ – 3,38000 ಕುರುಬ – 1,50000 ಬ್ರಾಹ್ಮಣ – 90,000 ಮರಾಠ – 1,20000 ಎಸ್ಸಿ, ಎಸ್ಟಿ – 2,60000 ಇತರೆ -2,45000 (ಇದರಲ್ಲಿ ಕ್ರಿಶ್ಚಿಯನ್, ಜೈನ್, ಸಾವಜಿ ಸೇರಿ ಇತರೆ)
ಧಾರವಾಡ ಲೋಕಸಭೆ ಅಖಾಡ ಶೆಟ್ಟರ್ ಘರವಾಪ್ಸಿ ಹಿನ್ನೆಲೆಯಲ್ಲಿ ಮತ್ತೊಂದು ಮಗ್ಗುಲಿಗೆ ತಿರುಗಿದೆ.ಶೆಟ್ಟರ್ ಘರವಾಪ್ಸಿಯಾದರೂ ಜಿಲ್ಲೆಯಲ್ಲಿ ಬಣಗಳು ಆಗೋದು ಪಕ್ಕ..ಸತತ 30 ವರ್ಷಗಳ ಕಾಲ ಜೋಡೆತ್ತಿನಂತೆ ಇದ್ದ ಶೆಟ್ಟರ್ ಹಾಗೂ ಜೋಶಿ ಕಳೆದ 10 ತಿಂಗಳ ಹಿಂದೆ ದೂರವಾಗಿದ್ರು.ಟಿಕೆಟ್ ತಪ್ಪಿಸಲು ಜೋಶಿ ಕಾರಣ ಅನ್ನೋ ಬೇಸರ ಜಗದೀಶ್ ಶೆಟ್ಟರ್ ಮನಸೊಳಗೆ ಸದಾ ಕಾಡುತ್ತಿತ್ತು. ಈ ಬಾರಿ ಹೇಗಾದರೂ ಮಾಡಿ ಜೋಶಿ ಅವರನ್ನು ಹೊರಗೆ ಇಡಬೇಕು ಅನ್ನೋದು ಲಿಂಗಾಯತ ನಾಯಕರ ಲೆಕ್ಕಾಚಾರ..
ಸದ್ಯ ಧಾರವಾಡ ಜಿಲ್ಲೆಯಲ್ಲಿ ಮೂವರು ಬಿಜೆಪಿ ಶಾಸಕರಿದ್ದರೂ ಅವರೆಲ್ಲ ಲಿಂಗಾಯತ ಸಮುದಾಯಕ್ಕೆ ಸೇರಿದವರು ಅನ್ನೋದು ವಿಶೇಷ. ಅದಕ್ಕಿಂತ ಮಿಗಿಲಾಗಿ ಅವೆಲ್ಲರೂ ಜೋಶಿ ಫಾಲೋವರ್ಸ್. ಇನ್ನು ನವಲಗುಂದ ಮಾಜಿ ಶಾಸಕ ಮುನೇನಕೊಪ್ಪ ಹಾಗೂ ಕುಂದಗೋಳ ಮಾಜಿ ಶಾಸಕ ಯಡಿಯೂರಪ್ಪ ಸಂಭಂದಿ ಮಾಜಿ ಶಾಸಕ ಚಿಕ್ಕನಗೌಡರ ಶೆಟ್ಟರ್ ಬಗಳದಲ್ಲಿ ಗುರುತಿಸಿಕೊಂಡವರು. ಶೆಟ್ಟರ್ ಘರವಾಪ್ಸಿ ಬೆನ್ನಲ್ಲೆ ಬಣಗಳ ಬಗ್ಗೆಯೂ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟು ಹಾಕಿದೆ.
ಯಾವಾಗ ಶೆಟ್ಟರ್ ಲಿಂಗಾಯತ ಅಸ್ತ್ರ ಉಪಯೋಗಿಸಿದರೋ,ಇದಕ್ಕೆ ಜೋಶಿ ಕೂಡಾ ಬ್ರಹ್ಮಾಸ್ತ್ರವನ್ನ ರೆಡಿ ಮಾಡಿದ್ದಾರೆ.ಇದಕ್ಕೆ ಶೆಟ್ಟರ್ ಘರವಾಪ್ಸಿ ಸಾಕ್ಷಿ. ಎಸ್ ನಿನ್ನೆ ಶೆಟ್ಟರ್ ಘರವಾಪ್ಸಿ ಸಮಯದಲ್ಲಿ ಜೋಶಿ ಹಾಗೂ ಶಾಸಕ ಅರವಿಂದ ಬೆಲ್ಲದ್ ದೆಹಲಿಯಲ್ಲಿದ್ರೂ ಕಾರ್ಯಕ್ರಮದಿಂದ ದೂರ ಉಳಿದಿದ್ರು. ಇದು ಹಲವು ಅನುಮಾನವನ್ಮೂ ಹುಟ್ಟು ಹಾಕಿದೆ.
ಹಾಗಾದ್ರೆ ಏನಿದು ಜೋಶಿ ಬ್ರಹ್ಮಾಸ್ತ್ರ – ಅಕಸ್ಮಾತ್ ಶೆಟ್ಟರ್ ಧಾರವಾಡ ಟಿಕೆಟ್ ಲಿಂಗಾಯತರಿಗೆ ಟಿಕೆಟ್ ಕೊಡಬೇಕು ಎಂದು ಪಟ್ಟು ಹಿಡಿದಿದ್ರೆ, ಜೋಶಿ ಮತ್ತೊಂದು ದಾಳ ಉರುಳಿಸಲು ರೆಡಿಯಾಗಿದ್ದಾರೆ. ಅದು ತನ್ನ ಆಪ್ತ ಅರವಿಂದ ಬೆಲ್ಲದ್ ಮೂಲಕ. ಹೌದು ಅರವಿಂದ ಬೆಲ್ಲದ್ ಧಾರವಾಡ ಲೋಕಸಭೆ ಅಭ್ಯರ್ಥಿಯಾಗ್ತಾರಾ ಅನ್ನೋ ಅನುಮಾನ ದಟ್ಟವಾಗಿದೆ. ಜೋಶಿ ಪಾಳಯದಲ್ಲಿ ಗುರುತಿಸಿಕೊಂಡಿರೋ ಅರವಿಂದ ಬೆಲ್ಲದ್, ನಿನ್ನೆ ದೆಹಲಿಯಲ್ಲಿದ್ರೂ ಕಾರ್ಯಕ್ರಮದಿಂದ ದೂರ ಇದ್ರು. ಶೆಟ್ಟರ್ ಲಿಂಗಾಯತ ಅಸ್ತ್ರಕ್ಕೆ ಜೋಶಿ ಕೌಂಟರ್ ಅಟ್ಯಾಕ್ ನೀಡಲು ಮುಂದಾಗಿದ್ದಾರೆ. ಲಿಂಗಾಯತರನ್ನೆ ಅಭ್ಯರ್ಥಿ ಮಾಡೋದಾದ್ರೆ ಅರವಿಂದ ಬೆಲ್ಲದ್ ಪರ ಜೋಶಿ ಒಲವು ತೋರಲಿದ್ದಾರೆ ಎನ್ನಲಾಗಿದೆ. ಲೋಕಸಭೆ ಚುನಾವಣೆಗೆ ನೀವು ಅಭ್ಯರ್ಥಿಯಾಗ್ತೀರಾ ಅಂದಿದ್ದಕ್ಕೆ ನನಗೂ ದೆಹಲಿ ಇಂದ ಕಾಲ್ ಬಂದಿತ್ತು ಅನ್ನೋ ಮೂಲಕ ಬೆಲ್ಲದ್ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ.
ಒಟ್ಟಾರೆ ಶೆಟ್ಟರ್ ಘರವಾಪ್ಸಿಯಾದ ಬಳಿಕ ಇಡೀ ಧಾರವಾಡ ಲೋಕಸಭೆ ಚಿತ್ರಣವೇ ಬದಲಾಗಿ ಹೋಗಿದೆ. ವಿಧಾನಸಬಾ ಚುನಾವಣೆ ವೇಳೆ ರಾಜ್ಯ ರಾಜಕಾರಣದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದ ಹುಬ್ಬಳ್ಳಿ, ಲೋಕಸಭೆ ಚುನಾವಣೆ ಸಮಯದಲ್ಲೂ ಪೊಲಿಟಿಕಲ್ ಪವರ್ ಹೌಸ್ ಆಗೋದರಲ್ಲಿ ಅನುಮಾನ ಇಲ್ಲ. ಮೂರು ದಶಕ ಒಟ್ಟಿಗೆ ರಾಜಕಾರಣ ಮಾಡಿದ್ದ ಜೋಶಿ-ಶೆಟ್ಟರ್ ವೈರತ್ವ ಮರೆತು ಒಂದಾಗ್ತಾರಾ, ಅಥವಾ ಲಿಂಗಾಯತ ವರ್ಸಸ್ ಬ್ರಾಹ್ಮಣ ಅನ್ನೋ ಚರ್ಚೆಗೆ ವೇದಿಕೆಯಾಗ್ತಾರಾ ಅನ್ನೋದು ಕಾದು ನೋಡಬೇಕಿದೆ.