Sonu Srinivas Gowda: ‘ಕ್ಯಾಮೆರಾ ಕಂಡ್ರೆ ನಾನು ಮೊದಲು ಪೋಸ್​ ಕೊಡೋದು ಹಿಂಗೆ’: ಸೋನು ಶ್ರೀನಿವಾಸ್​ ಗೌಡ

| Updated By: ಮದನ್​ ಕುಮಾರ್​

Updated on: Aug 13, 2022 | 6:18 PM

Bigg Boss Kannada OTT: ಸೋನು ಶ್ರೀನಿವಾಸ್​ ಗೌಡ ಏನೇ ಮಾಡಿದರೂ ಅದು ಚರ್ಚೆಗೆ ಕಾರಣ ಆಗುತ್ತಿದೆ. ಅವರ ಪ್ರತಿ ನಡೆ ಕೂಡ ಬಿಗ್​ ಬಾಸ್​ ಮನೆಯಲ್ಲಿ ಹೈಲೈಟ್​ ಆಗುತ್ತಿದೆ.

ಈ ಬಾರಿ ಬಿಗ್​ ಬಾಸ್​ ಮನೆಗೆ ಕಾಲಿಟ್ಟಿರುವ ಸ್ಪರ್ಧಿಗಳ ಪೈಕಿ ಅತಿ ಹೆಚ್ಚು ಚರ್ಚೆಗೆ ಒಳಗಾಗಿರುವುದು ಸೋನು ಶ್ರೀನಿವಾಸ್​ ಗೌಡ (Sonu Srinivas Gowda) ಎಂದರೆ ತಪ್ಪಿಲ್ಲ. ಖಾಸಗಿ ವಿಡಿಯೋ ಲೀಕ್​ ಆದ ಕಾರಣಕ್ಕೆ ಅವರನ್ನು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಮಾಡಲಾಗಿತ್ತು. ಈಗ ಅವರು ‘ಬಿಗ್​ ಬಾಸ್​ ಕನ್ನಡ ಒಟಿಟಿ’ (Bigg Boss Kannada OTT) ಶೋನಲ್ಲಿ ಅವರು ಸ್ಪರ್ಧಿಸುತ್ತಿದ್ದಾರೆ. ಯಾವುದೇ ಟಾಸ್ಕ್​ ಇಲ್ಲದ ಸಮಯದಲ್ಲಿ ಕ್ಯಾಮೆರಾಗೆ ಪೋಸ್​ ನೀಡುವುದು ಹೇಗೆ ಎಂದು ಸೋನು ಶ್ರೀನಿವಾಸ್​ ಗೌಡ, ಕಿರಣ್​ ಯೋಗೇಶ್ವರ್​ ಹಾಗೂ ಜಯಶ್ರೀ ಆರಾಧ್ಯ ರಿಹರ್ಸಲ್​ ಮಾಡಿ ತೋರಿಸಿದ್ದಾರೆ. ‘ನಾನು ಮೊದಲು ಪೋಸ್​ ನೀಡುವುದು ಹೀಗೆ’ ಎಂದು ಸೋನು ಶ್ರೀನಿವಾಸ್​ ಗೌಡ ಅವರು ತಮ್ಮ ಫೇವರಿಟ್​ ಪೋಸ್​ ಬಗ್ಗೆ ಮಾತಾಡಿದ್ದಾರೆ. ‘ವೂಟ್​ ಸೆಲೆಕ್ಟ್​’ (Voot Select) ಮೂಲಕ ಈ ಶೋ ಪ್ರಸಾರ ಆಗುತ್ತಿದೆ.