VIDEO: ಎರಡನೇ ಬಾರಿ 6 ಎಸೆತಗಳಲ್ಲಿ ಪಂದ್ಯ ಗೆಲ್ಲಿಸಿದ ಸೋಫಿ ಡಿವೈನ್

Updated on: Jan 28, 2026 | 8:53 AM

Sophie Devine : ಸೋಫಿ ಡಿವೈನ್ ಗುಜರಾತ್ ಜೈಂಟ್ಸ್ ತಂಡಕ್ಕೆ ಕೊನೆಯ ಓವರ್​ನಲ್ಲಿ ರೋಚಕ ಗೆಲುವು ತಂದು ಕೊಡುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಂದರೆ ಸೋಫಿ ಡಿವೈನ್ ಅವರನ್ನು ಹೊರತುಪಡಿಸಿ ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಯಾವುದೇ ಬೌಲರ್ ಎರಡು ಬಾರಿ ಕೊನೆಯ ಓವರ್​ನಲ್ಲಿ 10 ಕ್ಕಿಂತ ಕಡಿಮೆ ರನ್ ನಿಯಂತ್ರಿಸಿ ಗೆಲುವು ತಂದು ಕೊಟ್ಟಿಲ್ಲ.  

ವುಮೆನ್ಸ್ ಪ್ರೀಮಿಯರ್ ಲೀಗ್​ನ 17ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡ ಗೆಲುವು ದಾಖಲಿಸಿದೆ. ಈ ಗೆಲುವಿನ ರೂವಾರಿ ಸೋಫಿ ಡಿವೈನ್. ವಡೋದರಾದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಜೈಂಟ್ಸ್ ತಂಡವು 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 174 ರನ್​​ ಬಾರಿಸಿದ್ದರು.

ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 18 ಓವರ್​ಗಳ ಮುಕ್ತಾಯದ ವೇಳೆಗೆ 146 ರನ್​ ಮಾತ್ರ ಕಲೆಹಾಕಿದ್ದರು. ಆದರೆ 19ನೇ ಓವರ್​ನಲ್ಲಿ ಸ್ನೇಹ್ ರಾಣಾ ಹಾಗೂ ನಿಕ್ಕಿ ಪ್ರಸಾದ್ ಜೊತೆಗೂಡಿ ಆ್ಯಶ್ಲಿ ಗಾರ್ಡ್ನರ್ ಓವರ್​ನಲ್ಲಿ ಬರೋಬ್ಬರಿ 20 ರನ್​ ಚಚ್ಚಿದರು.

ಪರಿಣಾಮ ಕೊನೆಯ ಓವರ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕೇವಲ 9 ರನ್​ಗಳ ಅವಶ್ಯಕತೆ. ಈ ಹಂತದಲ್ಲಿ ನಾಯಕಿ ಗಾರ್ಡ್ನರ್ ಅನುಭವಿ ಆಲ್​ರೌಂಡರ್ ಸೋಫಿ ಡಿವೈನ್ ಕೈಗೆ ಚೆಂಡು ನೀಡಿದರು. ನಾಯಕಿನ ವಿಶ್ವಾಸವನ್ನು ಹುಸಿಗೊಳಿಸದ ಸೋಫಿ ಕೇವಲ 5 ರನ್ ನೀಡಿ 2 ವಿಕೆಟ್ ಕಬಳಿಸುವ ಮೂಲಕ ಗುಜರಾತ್ ಜೈಂಟ್ಸ್ ತಂಡಕ್ಕೆ 3 ರನ್​ಗಳ ರೋಚಕ ಗೆಲುವು ತಂದುಕೊಟ್ಟರು.

ಕುತೂಹಲಕಾರಿ ವಿಷಯ ಎಂದರೆ ಸೋಫಿ ಡಿವೈನ್ ಹೀಗೆ ಕೊನೆಯ ಓವರ್​ನಲ್ಲಿ ಗುಜರಾತ್ ಜೈಂಟ್ಸ್ ತಂಡಕ್ಕೆ ರೋಚಕ ಗೆಲುವು ತಂದುಕೊಡುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಸೋಫಿ ಡಿವೈನ್ ಕೊನೆಯ ಓವರ್​ನಲ್ಲಿ ಕೇವಲ 2 ರನ್ ನೀಡಿ 4 ರನ್​ಗಳ ಜಯ ತಂದುಕೊಟ್ಟಿದ್ದರು.

ಇದೀಗ ಮತ್ತೊಮ್ಮೆ ಗುಜರಾತ್ ಜೈಂಟ್ಸ್ ತಂಡಕ್ಕೆ ಕೊನೆಯ ಓವರ್​ನಲ್ಲಿ ರೋಚಕ ಗೆಲುವು ತಂದು ಕೊಡುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಂದರೆ ಸೋಫಿ ಡಿವೈನ್ ಅವರನ್ನು ಹೊರತುಪಡಿಸಿ ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಯಾವುದೇ ಬೌಲರ್ ಎರಡು ಬಾರಿ ಕೊನೆಯ ಓವರ್​ನಲ್ಲಿ 10 ಕ್ಕಿಂತ ಕಡಿಮೆ ರನ್ ನಿಯಂತ್ರಿಸಿ ಗೆಲುವು ತಂದು ಕೊಟ್ಟಿಲ್ಲ.