ಸಮಾಧಿ ಮೇಲೆ ಸ್ಪಂದನಾ ಇಷ್ಟದ ತಿಂಡಿ-ತಿನಿಸು ಇಟ್ಟ ಕುಟುಂಬ; ಭಾವುಕರಾಗಿ ನಿಂತ ವಿಜಯ್

ಸಮಾಧಿ ಮೇಲೆ ಸ್ಪಂದನಾ ಇಷ್ಟದ ತಿಂಡಿ-ತಿನಿಸು ಇಟ್ಟ ಕುಟುಂಬ; ಭಾವುಕರಾಗಿ ನಿಂತ ವಿಜಯ್

ರಾಜೇಶ್ ದುಗ್ಗುಮನೆ
|

Updated on: Aug 11, 2023 | 12:14 PM

ಕುಟುಂಬದವರು ಸ್ಪಂದನಾ ಸಮಾಧಿಗೆ ಪೂಜೆ ಮಾಡಿದ್ದಾರೆ. ಅವರಿಷ್ಟದ ತಿಂಡಿ-ತಿನಿಸುಗಳನ್ನು ಸಮಾಧಿ ಎದುರು ಇಡಲಾಗಿದೆ. ಪೂಜೆ ಬಳಿಕ ಕುಟುಂಬ ಶ್ರೀರಂಗಪಟ್ಟಣಕ್ಕೆ ತೆರಳಲಿದೆ. ಕಾವೇರಿ ನದಿಯಲ್ಲಿ ಸ್ಪಂದನಾ ಅಸ್ಥಿ ವಿಸರ್ಜನೆ ಮಾಡಲಾಗುತ್ತದೆ. ಕುಟುಂಬದ 50 ಜನರು ಇಲ್ಲಿಗೆ ತೆರಳಲಿದ್ದಾರೆ.

ಸ್ಪಂದನಾ (Spandana) ಅವರ ಅಂತ್ಯಸಂಸ್ಕಾರ ನೆರವೇರಿ ಇಂದಿಗೆ (ಆಗಸ್ಟ್ 11) ಮೂರು ದಿನ ಕಳೆದಿದೆ. ಅವರಿಲ್ಲ ಎಂಬ ಸತ್ಯವನ್ನು ಕುಟುಂಬದವರ ಬಳಿ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೇ ನೋವಿನಲ್ಲಿ ಕುಟುಂಬದವರು ಸ್ಪಂದನಾ ಸಮಾಧಿಗೆ ಪೂಜೆ ಮಾಡಿದ್ದಾರೆ. ಅವರಿಷ್ಟದ ತಿಂಡಿ-ತಿನಿಸುಗಳನ್ನು ಸಮಾಧಿ ಎದುರು ಇಡಲಾಗಿದೆ. ಪೂಜೆ ಬಳಿಕ ಕುಟುಂಬ ಶ್ರೀರಂಗಪಟ್ಟಣಕ್ಕೆ ತೆರಳಲಿದೆ. ಕಾವೇರಿ ನದಿಯಲ್ಲಿ ಸ್ಪಂದನಾ ಅಸ್ಥಿ ವಿಸರ್ಜನೆ ಮಾಡಲಾಗುತ್ತದೆ. ಕುಟುಂಬದ 50 ಜನರು ಇಲ್ಲಿಗೆ ತೆರಳಲಿದ್ದಾರೆ. ಬ್ಯಾಂಕಾಕ್​​ನಲ್ಲಿ ಸ್ಪಂದನಾ ನಿಧನ ಹೊಂದಿದರು. ಅವರಿಗೆ ಹೃದಯಾಘಾತ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ