‘ಆ ಪ್ರಶ್ನೆಗಳಿಗೆ ದಿಟ್ಟ ಉತ್ತರ ಸಿಗಲ್ಲ’: ಸ್ಪಂದನಾ ವಿಜಯ್​ ರಾಘವೇಂದ್ರ ನಿಧನಕ್ಕೆ ರಮೇಶ್​ ಅರವಿಂದ್​ ಪ್ರತಿಕ್ರಿಯೆ

Updated on: Aug 07, 2023 | 11:01 PM

‘ವಿಜಯ್ ರಾಘವೇಂದ್ರ ಅವರಿಗೆ ದೊಡ್ಡ ಶೂನ್ಯ ಆವರಿಸಿಕೊಳ್ಳುತ್ತದೆ. ಅದರಿಂದ ಪಾರಾಗುವ ಶಕ್ತಿಯು ಅವರಿಗೆ ಸಿಗಲಿ. ಸ್ಪಂದನಾ ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ರಮೇಶ್ ಅರವಿಂದ್​ ಅವರು ಸಾಂತ್ವನದ ನುಡಿಗಳನ್ನು ತಿಳಿಸಿದ್ದಾರೆ.

ಸ್ಪಂದನಾ ವಿಜಯ್​ ರಾಘವೇಂದ್ರ (Spandana Vijay Raghavendra) ಅವರ ನಿಧನದ ಸುದ್ದಿ ಕನ್ನಡ ಚಿತ್ರರಂಗಕ್ಕೆ ಆಘಾತ​ ತಂದಿದೆ. ಅನೇಕ ಸೆಲೆಬ್ರಿಟಿಗಳು ಸ್ಪಂದನಾ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. ವಿಜಯ್​ ರಾಘವೇಂದ್ರ (Vijay Raghavendra) ಅವರಿಗೆ ಸಾಂತ್ವನ ಹೇಳಲಾಗುತ್ತಿದೆ. ರಮೇಶ್​ ಅರವಿಂದ್​ ಕೂಡ ತಮ್ಮ ಸಾಂತ್ವನದ ನುಡಿಗಳನ್ನು ತಿಳಿಸಿದ್ದಾರೆ. ‘ಈ ಸುದ್ದಿ ಕೇಳಿ ಶಾಕಿಂಗ್​ ಎನಿಸಿತು. ವಿಜಯ್​ ರಾಘವೇಂದ್ರ ಮತ್ತು ಸ್ಪಂದನಾ ಅವರನ್ನು ಜೋಡಿಯಾಗಿ ನೋಡಿದಾಗ ಬಹಳ ಖುಷಿ ಆಗುತ್ತಿತ್ತು. ಒಬ್ಬರಿಗೊಬ್ಬರು ಸಪೋರ್ಟ್​ ಮಾಡುತ್ತಿದ್ದರು. ಆ ರೀತಿ ಇದ್ದಂತಹ ಹುಡುಗಿಗೆ ದಿಢೀರ್​ ಅಂತ ಈ ವಯಸ್ಸಿನಲ್ಲಿ ಯಾಕೆ ಹೀಗಾಯಿತು ಎಂಬ ಪ್ರಶ್ನೆ ನಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಆದರೆ ಆ ರೀತಿಯ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ. ಇದು ಬಹಳ ದುಃಖದ ವಿಚಾರ. ಯಾರಿಗೂ ಹೀಗೆ ಆಗಬಾರದು’ ಎಂದು ರಮೇಶ್​ ಅರವಿಂದ್ (Ramesh Aravind) ಅವರು ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More