ಒಡೆಯಿತು ಸ್ಪಂದನಾ ಮಗ ಶೌರ್ಯನ ಕಣ್ಣೀರ ಕಟ್ಟೆ; ಸಮಾಧಾನ ಮಾಡಲು ವಿಜಯ್-ಮುರಳಿ ಹರಸಾಹಸ

Updated on: Aug 09, 2023 | 9:53 AM

ಸ್ಪಂದನಾ ಪಾರ್ಥಿವ ಶರೀರದ ಎದುರು ಕುಳಿತು ಶೌರ್ಯ ಕಣ್ಣೀರು ಹಾಕುತ್ತಿದ್ದಾನೆ. ಆತನನ್ನು ಸಮಾಧಾನ ಮಾಡಲು ವಿಜಯ್ ಹಾಗೂ ಶ್ರೀಮುರಳಿ ಪ್ರಯತ್ನಿಸಿದ್ದಾರೆ. ಆದರೆ, ಶೌರ್ಯನ ಕಣ್ಣೀರು ನಿಲ್ಲುತ್ತಿಲ್ಲ.

ಸ್ಪಂದನಾ-ವಿಜಯ್ ರಾಘವೇಂದ್ರ ದಂಪತಿಗೆ ಶೌರ್ಯ (Shourya) ಹೆಸರಿನ ಮಗ ಇದ್ದಾನೆ. ಅಮ್ಮನ ಪ್ರೀತಿಯಲ್ಲಿ ಬೆಳೆದ ಈತನಿಗೆ ತಾಯಿ ಇಲ್ಲ ಎಂಬ ನೋವು ಅತೀವವಾಗಿ ಕಾಡುತ್ತಿದೆ. ಸ್ಪಂದನಾ ಪಾರ್ಥಿವ ಶರೀರದ ಎದುರು ಕುಳಿತು ಶೌರ್ಯ ಕಣ್ಣೀರು ಹಾಕುತ್ತಿದ್ದಾನೆ. ಆತನನ್ನು ಸಮಾಧಾನ ಮಾಡಲು ವಿಜಯ್ ಹಾಗೂ ಶ್ರೀಮುರಳಿ ಪ್ರಯತ್ನಿಸಿದ್ದಾರೆ. ಆದರೆ, ಶೌರ್ಯನ ಕಣ್ಣೀರು ನಿಲ್ಲುತ್ತಿಲ್ಲ. ಇಂದು ಸಂಜೆ ವೇಳೆಗೆ ಸ್ಪಂದನಾ ಅಂತ್ಯ ಸಂಸ್ಕಾರ ನೆರವೇರಲಿದೆ. ಅಲ್ಲಿಯವರೆಗೆ ಸ್ಪಂದನಾ ಅಂತಿಮ ದರ್ಶನಕ್ಕೆ ವ್ಯವಸ್ಥೆ ಇರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More