ಸ್ಪಂದನ ವಿಜಯ್ಗೆ ಶ್ರದ್ಧಾಂಜಲಿ: ಕಿರುತೆರೆ ತಾರೆ ಅನುಶ್ರೀ ಅಂತಿಮ ದರ್ಶನ ಪಡೆದು ವಿಜಯರಾಘವೇಂದ್ರಗೆ ಧೈರ್ಯ ಹೇಳಿದರು
Ansushree pays homage: ವಿಜಯ ಜೊತೆ ಮಾತಾಡಿದ ಬಳಿಕ ಪಕ್ಕದಲ್ಲೇ ನಿಂತಿದ್ದ ಅವರ ಸಹೋದರ ಶ್ರೀಮುರಳಿ ಜೊತೆಯೂ ಅನು ಮಾತಾಡುತ್ತಾರೆ. ವಿಜಯ್ ಮತ್ತು ಮುರಳಿ ನಡುವಿನ ಬಾಂಧವ್ಯ ಪದಗಳಲ್ಲಿ ಹೇಳಲಾಗದು. ಚಿನ್ನೇಗೌಡ ಮತ್ತು ಅವರ ಮಕ್ಕಳೇ ಹಾಗೆ, ಅಪಾರ ಸಂಸ್ಕಾರವಂತರು, ಸುಸಂಸ್ಕೃತರು.
ಬೆಂಗಳೂರು: ನಗರದ ಮಲ್ಲೇಶ್ವರಂನಲ್ಲಿರುವ ನಿವೃತ್ತ ಪೊಲೀಸ್ ಅಧಿಕಾರಿ ಬಿಕೆ ಶಿವರಾಂ ಮನೆ ಮುಂದೆ ಅತ್ಯಂತ ಭಾವುಕ ಕ್ಷಣಗಳು. ಚಿರನಿದ್ರೆಗೆ ಜಾರಿರುವ ಸ್ಪಂದನ ವಿಜಯರಾಘವೇಂದ್ರ ಅವರ ಅಂತಿನ ದರ್ಶನ ಪಡೆಯಲು ಬರುತ್ತಿರುವ ಜನರೆಲ್ಲ ಕಂಬನಿ ಮಿಡಿಯುತ್ತಿದ್ದಾರೆ. ಸಿನಿಮಾ, ಕಿರತೆರೆ, ರಾಜಕೀಯ ಮತ್ತು ಇತರ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಅನೇಕರು ಅಗಲಿದ ಸ್ಪಂದನಗೆ ಒದ್ದೆ ಕಣ್ಣುಗಳಿಂದ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಕಿರುತೆರೆಯಲ್ಲಿ ದೊಡ್ಡ ಹೆಸರು ಮಾಡಿರುವ ಅನುಶ್ರೀ (Anushree) ಸ್ಪಂದನಗೆ ಅಂತಿಮ ನಮನ ಸಲ್ಲಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅನುಶ್ರೀ, ವಿಜಯರಾಘವೇಂದ್ರ (Vijay Raghavendra) ಅವರಿಗೆ ದೈರ್ಯ ಹೇಳುವ ದ್ರಶ್ಯ ನೋಡುಗರ ಮನಕಲಕುತ್ತದೆ. ವಿಜಯ ಜೊತೆ ಮಾತಾಡಿದ ಬಳಿಕ ಪಕ್ಕದಲ್ಲೇ ನಿಂತಿದ್ದ ಅವರ ಸಹೋದರ ಶ್ರೀಮುರಳಿ (Sri Murali) ಜೊತೆಯೂ ಅನು ಮಾತಾಡುತ್ತಾರೆ. ವಿಜಯ್ ಮತ್ತು ಮುರಳಿ ನಡುವಿನ ಬಾಂಧವ್ಯ ಪದಗಳಲ್ಲಿ ಹೇಳಲಾಗದು. ಚಿನ್ನೇಗೌಡ ಮತ್ತು ಅವರ ಮಕ್ಕಳೇ ಹಾಗೆ, ಅಪಾರ ಸಂಸ್ಕಾರವಂತರು, ಸುಸಂಸ್ಕೃತರು. ವಿಜಯ್ ಬಾಳಲ್ಲಿ ವಿಧಿ ಇಷ್ಟು ಕ್ರೂರ ಆಟವಾಡಿದ್ದು ಕುಟುಂಬವನ್ನು ತಲ್ಲಣಗೊಳಿಸಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ