Spandana Funeral Video: ಹರಿಶ್ಚಂದ್ರ ಘಾಟ್ನ ರುದ್ರಭೂಮಿಯಲ್ಲಿ ಸ್ಪಂದನಾ ವಿಜಯ್ ಮೃತದೇಹ ಅಂತ್ಯ ಸಂಸ್ಕಾರ
Spandana Vijay Cremation Live Streaming: ವಿಜಯ್ ರಾಘವೇಂದ್ರ ಅವರ ಮುದ್ದಿನ ಪತ್ನಿ ಸ್ಪಂದನಾ ವಿಜಯ್ ಇಹಲೋಕ ಯಾತ್ರೆ ತ್ಯಜಿಸಿದ್ದಾರೆ. ಸ್ಪಂದನಾ ಅವರ ಪಾರ್ಥಿವ ಶರೀರವನ್ನು ಹರಿಶ್ಚಂದ್ರ ಘಾಟ್ ರುದ್ರಭೂಮಿಯಲ್ಲಿ ಸಕಲ ವಿಧಿವಿಧಾನಗಳೊಂದಿಗೆ ಅಂತ್ಯ ಸಂಸ್ಕಾರ ಮಾಡಲಾಯಿತು. ಪತಿ ವಿಜಯ್ ರಾಘವೇಂದ್ರ, ಮಗ ಶೌರ್ಯ, ತಂದೆ ಬಿಕೆ ಶಿವರಾಂ, ಮಾವ ಎಸ್ಎ ಚಿನ್ನೇಗೌಡ, ಮೈದುನ ಶ್ರೀಮುರಳಿ, ನಟ ಶಿವಾರಜ್ಕುಮಾರ್ ಹಾಗೂ ಕುಟುಂಬದವರು, ಆಪ್ತರು ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ದು:ಖದ ಮಡುವಿನಲ್ಲೇ ಸ್ಪಂದನಾ ಅವರ ಮೃತದೇಹವನ್ನು ಹರಿಶ್ಚಂದ್ರ ಘಾಟ್ನ ರುದ್ರಭೂಮಿಯ ವಿದ್ಯುತ್ ಚಿತಾಗಾರದಲ್ಲಿ ದೇಹದಹನ ಮಾಡಲಾಯಿತು.
Spandana Vijay Cremation Live Streaming: ಸ್ಪಂದನಾ ವಿಜಯ್ ರಾಘವೇಂದ್ರ ಅವರ ಅಂತಿಮ ದರ್ಶನಕ್ಕೆ ಅವರ ತಂದೆ ಬಿಕೆ ಶಿವರಾಂ ಅವರ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ನಟ ರಾಘವೇಂದ್ರ ರಾಜ್ಕುಮಾರ್, ಯಶ್, ಧ್ರುವ ಸರ್ಜಾ, ಕೋಮಲ್ ಸೇರಿ ಅನೇಕರು ಸ್ಪಂದನಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ನಟ ಶಿವರಾಜ್ಕುಮಾರ್, ಶ್ರೀಮುರಳಿ, ವಿಜಯ್ ರಾಘವೇಂದ್ರ, ಮಗ ಶೌರ್ಯ ಸ್ಪಂದನಾ ಅವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಇದೀಗ ಸ್ಪಂದನಾ ಅವರ ಮೃತದೇಹವನ್ನು ಶ್ರೀರಾಂಪುರದ ಹರಿಶ್ಚಂದ್ರ ಘಾಟ್ನ ರುದ್ರಭೂಮಿಯ ವಿದ್ಯುತ್ ಚಿತಾಗಾರದಲ್ಲಿ ದೇಹದಹನ ಮಾಡಲಾಯಿತು.
Published on: Aug 09, 2023 07:19 AM
Latest Videos