My India My Life Goals: ಪೃಥ್ವಿಯನ್ನು ಆರೋಗ್ಯವಾಗಿಡಲು ಪರಿಸರಸ್ನೇಹಿ ವಸ್ತುಗಳ ಬಳಕೆಗೆ ಆದ್ಯತೆ ನೀಡಿ!
ತರಕಾರಿಗಳನ್ನು ಅಡುಗೆಗೆ ಬಳಸುತ್ತೇವೆ, ಅದರೆ ಅವುಗಳನ್ನು ಹಿತಮಿತವಾಗಿ ಬಳಸಿದರೆ ಒಳ್ಳೆಯದು. ಹೆಚ್ಚೆಚ್ಚು ಬಳಸಿ ಚೆಲ್ಲುವುದು, ಹಾಳು ಮಾಡುವುದು ಬೇಡ.
My India My Life Goals: ನಾವು ವಾಸಮಾಡುವ ಪೃಥ್ವಿಯ ಬಗ್ಗೆ ಕೆಲವರಷ್ಟೇ ಯೋಚನೆ ಮಾಡಿದರೆ ಸಾಲದು, ಎಲ್ಲರೂ ಮಾಡಬೇಕು. ಅದಕ್ಕಾಗಿ ನಾವು ಹೆಚ್ಚೇನೂ ಮಾಡಬೇಕಿಲ್ಲ. ಪ್ಲಾಸ್ಟಿಕ್ ಬಳಕೆಯಿಂದ ದೂರವಿದ್ದು ಪರಿಸರ ಸ್ನೇಹಿ ಬಟ್ಟೆ ಮತ್ತು ಕಾಗದದ ಬ್ಯಾಗ್ ಗಳನ್ನು (paper bags) ಬಳಸೋಣ. ರೀಸೈಕ್ಲಿಂಗ್ (recycling) ಅಗಬಹುದಾದ ವಸ್ತುಗಳನ್ನು ಬಳಸಿದರೆ ಪರಿಸರ (environment) ಆರೋಗ್ಯಕರವಾಗಿರುತ್ತದೆ. ಪರಿಸರಸ್ನೇಹಿ ಬ್ಯಾಗ್ ಗಳು ಈಗ ಎಲ್ಲ ಕಡೆ ಸಿಗುತ್ತವೆ. ತರಕಾರಿಗಳನ್ನು ಅಡುಗೆಗೆ ಬಳಸುತ್ತೇವೆ, ಅದರೆ ಅವುಗಳನ್ನು ಹಿತಮಿತವಾಗಿ ಬಳಸಿದರೆ ಒಳ್ಳೆಯದು. ಹೆಚ್ಚೆಚ್ಚು ಬಳಸಿ ಚೆಲ್ಲುವುದು, ಹಾಳು ಮಾಡುವುದು ಬೇಡ. ಕರ್ನಾಟಕ ಸರ್ಕಾರ 200 ಯೂನಿಟ್ ವರೆಗೆ ವಿದ್ಯುತ್ ಬಳಕೆ ಉಚಿತ ಮಾಡಿದೆ ಅಂತ ಯದ್ವಾತದ್ವಾ ವಿದ್ಯುತ್ ಬಳಕೆ ಬೇಡ, ಬಳಕೆಗೆ ಮಿತಿಯಿರಲಿ ಮತ್ತು ಸಾಧ್ಯವಾಗುವಗವಷ್ಟು ಜಾಸ್ತಿ ಎಲ್ ಇಡಿ ಬಲ್ಬ್ ಗಳನ್ನು ಬಳಸಿ. ನಿಮಗೆ ಸಾಧ್ಯವಿದ್ದಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸಿಕೊಂಡು ಸೋಲಾರ್ ಶಕ್ತಿ ಬಳಕೆಗೆ ಆದ್ಯತೆ ನೀಡಿ. ನಿಷ್ಪ್ರಯೋಜಕ ಇಲೆಕ್ಟ್ರಾನಿಕ್ ಉಪಕರಣಗಳನ್ನು ಈ-ವೇಸ್ಟ್ ಪದ್ಧತಿಯ ಮೂಲಕ ವಿಲೇವಾರಿ ಮಾಡಿದರೆ ಪರಿಸರ ಮಾಲಿನ್ಯ ತಡೆದಂತಾಗುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ