ಸುದರ್ಶನ ಚಕ್ರಹಿಡಿದ ಕೃಷ್ಣನಿಗೆ ವಿಶೇಷ ಪೂಜೆ; ಸುದರ್ಶನ ಚಕ್ರ ಏರ್ ಡಿಫೆನ್ಸ್ ಸಾಧನ ಬಳಸಿ ಶತ್ರು ಕ್ಷಿಪಣಿಗಳ ನಾಶ!

ಅರುಣ್​ ಕುಮಾರ್​ ಬೆಳ್ಳಿ

Updated on: May 08, 2025 | 7:54 PM

ಗಮನಿಸಬೇಕಾದ ಅಂಶವೆಂದರೆ, ರಾಜ್ಯ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿಯವರು ಆದೇಶವೊಂದನ್ನು ಹೊರಡಿಸಿ ಭಾರತೀಯ ಸೈನಿಕರಿಗೆ ಬಲ ತುಂಬಲು ಎಲ್ಲ ಶಕ್ತಿದೇವತೆಗಳ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹೋಮ ಹವನ ನಡೆಸುವಂತೆ ಹೇಳಿದ್ದಾರೆ. ಅವರ ಸೂಚನೆಯ ಮೇರೆಗೆ ದುರ್ಗಾಮಾತೆ ಮತ್ತು ತಾಯಿ ಚಾಮುಂಡೇಶ್ವರಿಗೆ ಹೋಮ ಹವನಗಳನ್ನು ನೆರವೇರಿಸಲಾಗುತ್ತಿದೆ.

ಉಡುಪಿ, ಮೇ 8: ಭಾರತೀಯರೆಲ್ಲರ ಇಚ್ಛೆ, ಆಸೆ, ಆಕಾಂಕ್ಷೆ ಒಂದೇ. ಅಮಾಯಕ ಭಾರತೀಯರನ್ನು ಕೊಲ್ಲುತ್ತಿರುವ ಉಗ್ರರನ್ನು ಮತ್ತು ಅವರಿಗೆ ಬೆಂಬಲವಾಗಿ ನಿಂತಿರುವ ಪಾಕಿಸ್ತಾನವನ್ನು ಬಗ್ಗುಬಡಿಯಬೇಕು. ಸೇನೆ ಹೊರತು ಬೇರೆ ಯಾರೂ ಯುದ್ಧಕ್ಕೆ ಹೋಗಲಾಗದು. ಅದರೆ ನಮ್ಮ ಸೈನಿಕರ ಬಲಕ್ಕಾಗಿ, ಅವರ ಕ್ಷೇಮಕ್ಕಾಗಿ ಪೂಜೆ, ಪ್ರಾರ್ಥನೆಗಳನ್ನು ಮಾಡಬಹುದು. ಉಡುಪಿಯ ಶ್ರೀಕೃಷ್ಣ ದೇವಸ್ಥಾನದಲ್ಲಿ ಕೈಯಲ್ಲಿ ಸುದರ್ಶನ ಚಕ್ರ (Sudarshan Chakra) ಹಿಡಿದ ಕೃಷ್ಣ ಪರಮಾತ್ಮನಿಗೆ ಅರ್ಚಕರಿಂದ ವಿಶೇಷ ಪೂಜೆ. ಪರ್ಯಾಯ ಶ್ರೀ ಮತ್ತು ಪುತ್ತಿಗೆ ಶ್ರೀಗಳಿಂದ ಉಡುಪಿ ಕೃಷ್ಣನಿಗೆ ವಿಶೇಷ ಅಲಂಕಾರ. ಚಕ್ರಪಾಣಿ ಕೃಷ್ಣ ಅಲಂಕಾರ ದುಷ್ಟಶಕ್ತಿಗಳ ಸಂಹಾರದ ಸಂಕೇತ ಎನ್ನಲಾಗುತ್ತಿದೆ. ನಿನ್ನೆ ಭಾರತೀಯ ಸೇನೆ ಎಸ್- 400 ಸುದರ್ಶನ ಚಕ್ರ ಏರ್ ಡಿಫೆನ್ಸ್ ಸಾಧನ ಬಳಸಿ ಪಾಕಿಸ್ತಾನ ಫೈರ್ ಮಾಡಿದ ಕ್ಷಿಪಣಿಗಳನ್ನು ನಿಷ್ಕ್ರಿಯಗೊಳಿಸಿದ್ದು ಕಾಕತಾಳೀಯವಾಗಿರಲಾರದು!

ಇದನ್ನೂ ಓದಿ: Operation Sindoor: ಭಾರತ ಪಾಕ್​ ಮೇಲೆ ನಡೆಸಿದ ದಾಳಿಯಲ್ಲಿ 100 ಉಗ್ರರು ಹತರಾಗಿದ್ದಾರೆ: ರಾಜನಾಥ್​ ಸಿಂಗ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.