ದಾವಣಗೆರೆಯ ಹೆಬ್ಬಾಳ ಟೋಲ್ ಗೇಟ್ ಬಳಿ ನಿಶ್ಚಲ ಲಾರಿಗೆ ಗುದ್ದಿದ ಕಾರು, ಯಾವುದೇ ಪ್ರಾಣಾಪಾಯವಿಲ್ಲ

ಅರುಣ್​ ಕುಮಾರ್​ ಬೆಳ್ಳಿ

Updated on: Apr 17, 2025 | 11:06 AM

ರಾಜ್ಯಾದ್ಯಂತ ಲಾರಿ ಮುಷ್ಕರ ನಡೆಯುತ್ತಿರುವ ಕಾರಣ ಮಹಾರಾಷ್ಟ್ರದಿಂದ ಆಗಮಿಸಿದ್ದ ಲಾರಿಯನ್ನು ಹೆಬ್ಬಾಳದ ಟೋಲ್ ಪ್ಲಾಜಾ ಬಳಿ ತಡೆದು ನಿಲ್ಲಿಸಲಾಗಿತ್ತು. ನಾವು ಯಾವಾಗಲೂ ಹೇಳುವಂತೆ ರಸ್ತೆ ಅಪಘಾತಗಳು ಬೆಳಗಿನ ಜಾವ ಹೆಚ್ಚು ಸಂಭವಿಸುತ್ತವೆ. ರಾತ್ರಿಯೆಲ್ಲ ವಾಹನಗಳನ್ನು ಓಡಿಸಿದ ಚಾಲಕರಿಗೆ ಬೆಳಗಿನ ಜಾವ ನಿದ್ರೆಯ ಮಂಪರು ಆವರಿಸಿರುತ್ತದೆ, ಕೊಂಚ ಯಾಮಾರಿದರೆ ಅಪಾಯ ತಪ್ಪಿದ್ದಲ್ಲ.

ದಾವಣಗೆರೆ, ಏಪ್ರಿಲ್ 17: ಕಳೆದ ರಾತ್ರಿ ಪುಣೆ-ಬೆಂಗಳೂರು ಹೆದ್ದಾರಿಯಲ್ಲಿರುವ (Pune-Bengaluru National Highway) ದಾವಣಗೆರೆ ತಾಲೂಕಿನ ಹೆಬ್ಬಾಳದ ಟೋಲ್ ಗೇಟ್ ಬಳಿ ಅಪಘಾತವೊಂದು ಸಂಭವಿಸಿದ್ದು ಅದೃಷ್ಟವಶಾತ್ ಪ್ರಾಣಾಪಾಯ ಜರುಗಿಲ್ಲ. ಟೋಲ್ ಗೇಟ್ ಬಳಿ ನಿಂತಿದ್ದ ಲಾರಿಯೊಂದಕ್ಕೆ ಕಾರು ಢಿಕ್ಕಿ ಹೊಡೆದಿದೆ. ಪ್ರಾಯಶಃ ಕಾರಿನ ಚಾಲಕ ನಿದ್ರೆಯ ಮಂಪರಿನಲ್ಲಿದ್ದಿರಬೇಕು. ಚಿತ್ರದುರ್ಗ ಜಿಲ್ಲೆಯ ಕ್ಯಾಷಾಪುರ ನಿವಾಸಿ ಪ್ರದೀಪ್ ಕಾರು ಓಡಿಸುತ್ತಿದ್ದರು ಅಂತ ಗೊತ್ತಾಗಿದ್ದು ಚಿಕ್ಕ ಪುಟ್ಟ ಗಾಯಗಳಿಂದ ಅವರು ಪಾರಾಗಿದ್ದಾರೆ.

ಇದನ್ನೂ ಓದಿ:  ದೇವನಹಳ್ಳಿಯ ಕನ್ನಮಂಗಲಪಾಳ್ಯ ಗೇಟ್ ಬಳಿ ಮಿನಿಬಸ್-ಲಾರಿ ನಡುವೆ ಅಪಘಾತ, 7-8 ಜನರಿಗೆ ಗಾಯ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Apr 17, 2025 10:23 AM
Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.