ಶ್ರೀರಂಗಪಟ್ಟಣದಲ್ಲಿ ರಸ್ತೆಬದಿ ಅಂಗಡಿಗೆ ಗುದ್ದಿದ ಕಾರು, ಅದೃಷ್ಟವಶಾತ್ ಪಾದಚಾರಿಗಳು ಪಾರು

Updated on: May 05, 2025 | 10:28 AM

ಜಖಂಗೊಂಡಿರುವ ಸ್ಕೂಟರ್ ಮಾಲೀಕ ಮತ್ತು ಅಂಗಡಿಯ ಮಾಲೀಕ ಆಗಿರುವ ನಷ್ಟವನ್ನು ಭರಿಸಿಕೊಡುವಂತೆ ಕಾರಿನ ಚಾಲಕನಿಗೆ ಹೇಳುತ್ತಿರುವುದನ್ನು ಕೇಳಿಸಿಕೊಳ್ಳಬಹುದು. ಕಾರಿನ ಬಲಭಾಗದ ಮುಂಭಾಗ ಬಹಳಷ್ಟು ಹಾನಿಗೊಳಗಾಗಿದೆ. ಅಂದರೆ ಭಾರೀ ವೇಗದಲ್ಲಿ ವಾಹನಕ್ಕೆ ಮತ್ತು ಅಂಗಡಿಯ ಶೆಡ್​​ಗೆ ಕಾರು ಗುದ್ದಿರುವುದು ಖಚಿತವಾಗುತ್ತದೆ. ಶ್ರೀರಂಗಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಂಡ್ಯ, ಮೇ 5: ರಸ್ತೆ ಬದಿ ಅಂಗಡಿ ಇಟ್ಟುಕೊಂಡವರು ಇಂಥ ಪರಿಸ್ಥಿತಿಯನ್ನೂ ಎದುರಿಸಬೇಕಾಗುತ್ತದೆ. ದೃಶ್ಯವನ್ನೊಮ್ಮೆ ನೋಡಿ. ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ (Srirangapatna) ಕಿರಂಗೂರು ಬಳಿ ನಡೆದಿರುವ ಘಟನೆ ಇದು. ಇಂದು ಬೆಳಗ್ಗೆ ಶ್ರೀರಂಗಪಟ್ಟಣ ಮತ್ತು ಜೇವರ್ಗಿ ನಡುವಿನ ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಅಂಗಡಿಗಳ ನುಗ್ಗಿದೆ. ಅದೃಷ್ಟವಶಾತ್ ಚಾಲಕ ಸೇರಿದಂತೆ ಯಾರಿಗೂ ಗಾಯಗಳಾಗಿಲ್ಲ. ಅಂಗಡಿಗಳು ಇನ್ನೂ ಓಪನ್ ಅಗಿರಲಿಲ್ಲ. ಒಂದು ಅಂಗಡಿಯ ಶೆಡ್ ಮತ್ತು ಅಲ್ಲೇ ನಿಂತಿದ್ದ ದ್ವಿಚಕ್ರ ವಾಹನವೊಂದು ಜಖಂಗೊಂಡಿವೆ.

ಇದನ್ನೂ ಓದಿ:  ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ  

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ