50 years of Project Tiger: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೈಸೂರು ಭೇಟಿಗೆ ಮುನ್ನ ಎಸ್ ಪಿಜಿ ಪಡೆಯಿಂದ ಭದ್ರತಾ ಪರಿಶೀಲನೆ

|

Updated on: Apr 05, 2023 | 11:03 AM

ಹುಲಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿ ಅವುಗಳ ಸಂತತಿ ವಿನಾಶದ ಅಪಾಯ ಎದುರಿಸುತ್ತಿದ್ದಾಗ ಏಪ್ರಿಲ್ 1, 1973 ರಂದು ಆಗಿನ ಪ್ರಧಾನಿ ಇಂದಿರಾ ಗಾಂಧಿ ಪ್ರಾಜೆಕ್ಟ್ ಟೈಗರ್ ಜಾರಿಗೆ ತಂದಿದ್ದರು.

ಮೈಸೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಏಪ್ರಿಲ್ 8 ರಂದು ರಾಜ್ಯದ ಸಾಂಸ್ಕೃತಿಕ ರಾಜಧಾನಿಗೆ ಆಗಮಿಸಲಿದ್ದಾರೆ. ಬಂಡಿಪುರ ಹುಲಿ ಯೋಜನೆ (Project Tiger) ಅಸ್ತಿತ್ವಕ್ಕೆ ಬಂದು 50 ವರ್ಷ ಕಳೆದಿರುವ ಸಂದರ್ಭದಲ್ಲಿ ಹುಲಿಗಳ ಸಂರಕ್ಷಣೆಯಲ್ಲಿ ಭಾರತ ಸಾಧಿಸಿರುವ ಅಗಾಧ ಯಶಸ್ಸನ್ನು ವಿಶ್ವದಾದ್ಯಂತ ಸಾರುವ ಮೂರು ದಿನಗಳ ಒಂದು ದೊಡ್ಡ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಏಪ್ರಿಲ್ 9 ರಂದು ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮ ನಗರದ ಮುಕ್ತ ವಿಶ್ವವಿದ್ಯಾಲಯ ಆವರಣದಲ್ಲಿ ನಡೆಯಲಿದ್ದು ಭದ್ರತಾ ದೃಷ್ಟಿಯಿಂದ ಎಸ್ ಪಿ ಜಿ (SPG) ಪ ಸ್ಥಳ ಪರಿಶೀಲನೆ ನಡೆಸಿತು. ಹುಲಿ ಯೋಜನೆ ಸ್ಮರಣಾರ್ಥ ಪ್ರಧಾನಿ ಮೋದಿ ನಾಣ್ಯವೊಂದನ್ನು ಸಹ ಬಿಡುಗಡೆ ಮಾಡಲಿದ್ದಾರೆ. ಹುಲಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿ ಅವುಗಳ ಸಂತತಿ ವಿನಾಶದ ಅಪಾಯ ಎದುರಿಸುತ್ತಿದ್ದಾಗ ಏಪ್ರಿಲ್ 1, 1973 ರಂದು ಆಗಿನ ಪ್ರಧಾನಿ ಇಂದಿರಾ ಗಾಂಧಿ ಪ್ರಾಜೆಕ್ಟ್ ಟೈಗರ್ ಜಾರಿಗೆ ತಂದಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ