ಮಾಂಗಲ್ಯದೊಂದಿಗೆ ಧರಿಸುವ ಕರಿಮಣಿಯ ಮಹತ್ವವೇನು? ತಿಳಿಯಿರಿ

ಮಾಂಗಲ್ಯದೊಂದಿಗೆ ಧರಿಸುವ ಕರಿಮಣಿಯ ಮಹತ್ವವೇನು? ತಿಳಿಯಿರಿ

ಆಯೇಷಾ ಬಾನು
|

Updated on: Oct 03, 2024 | 7:20 AM

ರಿಮಣಿ ಸರ ಸ್ತ್ರೀಯರು ಮದುವೆಯಾಗಿರುವುದರ ಸಂಕೇತ. ಮಂಗಳಕರವಾದ, ಸೌಭಾಗ್ಯವಾದ ಆಭರಣ. ಕರಿಮಣಿ ಸರದ ಮಹತ್ವದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಮತ್ತಷ್ಟು ಮಾಹಿತಿಯನ್ನು ಈ ವಿಡಿಯೋದಲ್ಲಿ ನೀಡಿದ್ದಾರೆ.

ನಮ್ಮ ಭಾರತೀಯ ಸಂಪ್ರದಾಯದಲ್ಲಿ ಪ್ರತಿಯೊಂದು ಆಚರಣೆಗೂ ಒಂದೊಂದು ಸಾಂಪ್ರದಾಯಿಕ ಮಹತ್ವವಿದೆ. ಹಾಗೆಯೇ ಅದರ ಹಿಂದೆ ವೈಜ್ಞಾನಿಕ ಪ್ರಜ್ಞೆಯೂ ಇರುತ್ತೆ. ಕರಿಮಣಿ ಸರ ಸ್ತ್ರೀಯರು ಮದುವೆಯಾಗಿರುವುದರ ಸಂಕೇತ. ಮಂಗಳಕರವಾದ, ಸೌಭಾಗ್ಯವಾದ ಆಭರಣ. ಕರಿಮಣಿಸರದ ವೈಶಿಷ್ಟ್ಯವೆಂದರೆ ಎದೆಯ ಭಾಗದಲ್ಲಿ ಉಂಟಾಗುವ ಉಷ್ಣತೆಯನ್ನು ಅದು ಹೀರಿಕೊಳ್ಳುತ್ತೆ. ಇದರ ಅತಿ ಮುಖ್ಯವಾದ ಉಪಯುಕ್ತತೆ ಹಾಲುಣಿಸುವ ತಾಯಿಯಲ್ಲಿ ಎದೆಹಾಲಿನ ಉಷ್ಣತೆಯನ್ನು ಹೀರಿಕೊಂಡು ಎದೆಹಾಲು ಕೆಡದಂತೆ ಕಾಪಾಡುತ್ತೆ. ಈ ಮೂಲಕ ಎದೆಹಾಲು ಶಿಶುವಿಗೆ ಸಮ ಉಷ್ಣತೆಯಲ್ಲಿರಲು ಸಹಾಯ ಮಾಡುತ್ತೆ.

ಆಧ್ಯಾತ್ಮಿಕವಾಗಿ ಕರಿಮಣಿಸರ ಕತ್ತಿನ ಸುತ್ತ ಸುಷುಮ್ನಾ ನಾಡಿಗೆ, ಸಮ್ಮಿಲನ ಚಕ್ರಗಳ ಆಧಾರವಾದ ಬೆನ್ನೆಲುಬಿನ ಮೇಲ್ಭಾಗ ವಿಶುದ್ಧ ಚಕ್ರಕ್ಕೆ ಹೊಂದಿಕೊಂಡಂತೆ ಇರುತ್ತೆ. ಅಲ್ಲದೇ, ಇದು ಹೃದಯದ ಭಾಗದಲ್ಲಿರುವ ಅನಾಹತ ಚಕ್ರದಲ್ಲಿ ಸಮ್ಮಿಲನಗೊಳ್ಳುತ್ತೆ. ಹೃದಯ ಜ್ಯೋತಿಯು ಸದಾ ದರ್ಶನೀಯವೆಂದು ಸೂಚಿಸುವುದೇ ಮಾಂಗಲ್ಯದ ಸಂಕೇತ. ಕರಿಮಣಿ ಸರದ ಮಹತ್ವದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಮತ್ತಷ್ಟು ಮಾಹಿತಿಯನ್ನು ಈ ವಿಡಿಯೋದಲ್ಲಿ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ