Bengaluru Rains: ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆ; ರಸ್ತೆಗಳು ಜಲಾವೃತ
ಸಿಲಿಕಾನ್ ಸಿಟಿ ಬೆಂಗಳೂರಿನ ವಿಧಾನಸೌಧ, ಶಾಂತಿನಗರ, ಕೆ.ಆರ್.ವೃತ್ತದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಇನ್ನು ಮನೆ ಕಡೆ ಹೊರಟಿದ್ದ ದ್ವಿಚಕ್ರ ವಾಹನ ಸವಾರರು ಪರದಾಟ ನಡೆಸುತ್ತಿದ್ದು, ಕೆಲ ಸವಾರರು ಮಹಾರಾಣಿ ಕಾಲೇಜು ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದಾರೆ. ಅರ್ಧ ಗಂಟೆ ಸುರಿದ ಮಳೆಗೆ ಮಲ್ಯ ಆಸ್ಪತ್ರೆ ಮುಂದಿನ ರಸ್ತೆ ಜಲಾವೃತವಾಗಿದೆ.
ಬೆಂಗಳೂರು, ಅ.02: ಮಹಾನಗರದ ಹಲವೆಡೆ ವರ್ಷಧಾರೆ ಆರಂಭವಾಗಿದ್ದು, ವಿಧಾನಸೌಧ, ಶಾಂತಿನಗರ, ಕೆ.ಆರ್.ವೃತ್ತದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಇನ್ನು ಮನೆ ಕಡೆ ಹೊರಟಿದ್ದ ದ್ವಿಚಕ್ರ ವಾಹನ ಸವಾರರು ಪರದಾಟ ನಡೆಸುತ್ತಿದ್ದು, ಕೆಲ ಸವಾರರು ಮಹಾರಾಣಿ ಕಾಲೇಜು ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದಾರೆ. ಅರ್ಧ ಗಂಟೆ ಸುರಿದ ಮಳೆಗೆ ಮಲ್ಯ ಆಸ್ಪತ್ರೆ ಮುಂದಿನ ರಸ್ತೆ ಜಲಾವೃತವಾಗಿದೆ. ಪೀಣ್ಯ, ದಾಸರಹಳ್ಳಿ, ಬಾಗಲಗುಂಟೆ, ಶೆಟ್ಟಿಹಳ್ಳಿ, ಹೆಸರಘಟ್ಟ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲೂ ಭಾರಿ ಮಳೆ ಆಗುತ್ತಿದ್ದು, ಜನರು ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗುವ ಆತಂಕದಲ್ಲಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos