ಮಡಿಕೇರಿಯಂತಾದ ಕೋಲಾರ; ಒಣಗುತ್ತಿರುವ ಬೆಳೆಗೆ ಮಂಜಿನಾಸರೆ, ವಿಡಿಯೋ ನೋಡಿ

ಕೋಲಾರದಲ್ಲಿ ಮಳೆಗಾಲದಲ್ಲಿ ಮಂಜಿನ ವಾತಾವರಣ ನಿರ್ಮಾಣವಾಗಿದೆ. ಹಿಬ್ಬನಿ ಬಂದ್ರೆ ಮಳೆ ಬರಲ್ಲ ಅನ್ನೋ ಸಂಪ್ರದಾಯವಿದೆ. ರಾಜ್ಯದೆಲ್ಲೆಡೆ ಮಳೆಯ ಆರ್ಭಟ ಜೋರಾಗಿದೆ. ಆದ್ರೆ ಕೋಲಾರ ಜಿಲ್ಲೆಯಲ್ಲಿ ಮಾತ್ರ ಬರದ ಛಾಯೆ ಆವರಿಸಿದೆ. ಬರ ಹಾಗೂ ಬೆಳೆ ನಷ್ಟ ಅಂದಾಜಿಗೆ ಜಿಲ್ಲಾಡಳಿತ ಮುಂದಾಗಿದೆ. ಸದ್ಯ ಇದೀಗ ಮಂಜು ಆವರಿಸಿದ ವಾತಾವರಣ ಕಂಡುಬಂದಿದೆ.

ಮಡಿಕೇರಿಯಂತಾದ ಕೋಲಾರ; ಒಣಗುತ್ತಿರುವ ಬೆಳೆಗೆ ಮಂಜಿನಾಸರೆ, ವಿಡಿಯೋ ನೋಡಿ
| Updated By: ಆಯೇಷಾ ಬಾನು

Updated on: Oct 01, 2024 | 9:01 AM

ಕೋಲಾರ, ಅ.01: ಕೋಲಾರ ಜಿಲ್ಲೆಯ ಹಲವೆಡೆ ಬರದ ಮಧ್ಯೆ ಮಂಜಿನ ಮಳೆ ಸುರಿದಿದೆ. ಕೆಲ ದಿನಗಳ ಹಿಂದೆ ಜಿಲ್ಲೆಯ ಜನ ಮಳೆಗಾಗಿ ಇನ್ನಿಲ್ಲದ ಪೂಜೆ ಮಾಡಿ ದೇವರ ಮೊರೆ ಹೋಗಿದ್ದರು. ಇತ್ತ ಮಳೆ ಬದಲಾಗಿ ಮಂಜು ಆವರಿಸಿದ್ದು ಜಿನಿ ಜಿನಿ ಮಳೆ ಬಿದ್ದಿದೆ. ತೀವ್ರ ಬರದ ಮಧ್ಯೆ ಒಣಗುತ್ತಿರುವ ಬೆಳೆಗೆ ಮಂಜಿನಾಸರೆಯಾಗಿದೆ. ಸಧ್ಯ ಕೋಲಾರದಲ್ಲಿ ಮಳೆಗಾಲದಲ್ಲಿ ಮಂಜಿನ ವಾತಾವರಣ ನಿರ್ಮಾಣವಾಗಿದೆ.

ಹಿಬ್ಬನಿ ಬಂದ್ರೆ ಮಳೆ ಬರಲ್ಲ ಅನ್ನೋ ಸಂಪ್ರದಾಯವಿದೆ. ರಾಜ್ಯದೆಲ್ಲೆಡೆ ಮಳೆಯ ಆರ್ಭಟ ಜೋರಾಗಿದೆ. ಆದ್ರೆ ಕೋಲಾರ ಜಿಲ್ಲೆಯಲ್ಲಿ ಮಾತ್ರ ಬರದ ಛಾಯೆ ಆವರಿಸಿದೆ. ಈಗಾಗಲೇ ರಾಗಿ ಸೇರಿದಂತೆ ವಿವಿಧ ಬೆಳೆಗಳು ಒಣಗಲಾರಂಭಿಸಿವೆ. ಜಿಲ್ಲೆಯಲ್ಲಿ ಕಳೆದ 6 ವಾರದಿಂದ ಮಳೆ ಬಂದಿಲ್ಲ. ಬರ ಹಾಗೂ ಬೆಳೆ ನಷ್ಟ ಅಂದಾಜಿಗೆ ಜಿಲ್ಲಾಡಳಿತ ಮುಂದಾಗಿದೆ. ಸದ್ಯ ಇದೀಗ ಮಂಜು ಆವರಿಸಿದ ವಾತಾವರಣ ಕಂಡುಬಂದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Follow us