Temple Tour: 56 ಬಗೆಯ ನೈವೇದ್ಯ ಸ್ವೀಕರಿಸಿದ ಮಹಾತಾಯಿ

| Updated By: shruti hegde

Updated on: Oct 15, 2021 | 8:12 AM

ಪಂಚಾಮೃತ ಅಭಿಷೇಕ ಪೂರ್ಣಗೊಂಡ ಬಳಿಕ ತಾಯಿಯ ಕಠೋರ ರೂಪ ಅನಾವರಣಗೊಳ್ಳುತ್ತೆ. ಮೂರು ತಲೆಮಾರುಗಳ ಇತಿಹಾಸ ಹೊಂದಿರುವ ಅಂಬಾ ಭವಾನಿ ಸೋಮವಂಶ ಕ್ಷತ್ರಿಯ ಸಮಾಜದವರ ಕುಲದೇವತೆ.

ಉತ್ತರ ಕರ್ನಾಟಕದಲ್ಲಿ ಸ್ಥಳೀಯವಾಗಿ ಪ್ರಸಿದ್ಧಿ ಪಡೆದಿರುವ ಸಾಕಷ್ಟು ದೇವಾಲಯಗಳಿವೆ. ಅಂತ ದೇಗುಲಗಳ ಪೈಕಿ ಬಾಗಲಕೋಟೆಯ ಅಂಬಾ ಭವಾನಿ ದೇಗುಲ ಕೂಡ ಒಂದು. 56 ಬಗೆಯ ನೈವೇದ್ಯವನ್ನು ಸ್ವೀಕರಿಸುವ ತಾಯಿ ಸನ್ನಿಧಿಯಾಗಿ ಪ್ರಸಿದ್ಧವಾಗಿದೆ ಅಂಬಾ ಭವಾನಿ ದೇಗುಲ. ಮಕ್ಕಳಾಗದವರಿಗೆ ಮಕ್ಕಳನ್ನ ಕರುಣಿಸುವ ವರದಾಯಿನಿ. ಮದುವೆಯಾಗದವರು ಹರಕೆ ಹೊತ್ತರೆ ವಿವಾಹ ಭಾಗ್ಯ ನೀಡುವ ಜಗಜ್ಜನನಿ. ನಂಬಿ ಬರುವ ಭಕ್ತರ ಕಷ್ಟ ಪರಿಹರಿಸುವ ಮಾತೃ ಸ್ವರೂಪಿಣಿ. ಪ್ರತಿ ದಿನ ಈ ದೇವಿಗೆ ಪೂಜೆ ನಡೆಯುತ್ತೆ. ಪಂಚಾಮೃತ ಅಭಿಷೇಕ ಪೂರ್ಣಗೊಂಡ ಬಳಿಕ ತಾಯಿಯ ಕಠೋರ ರೂಪ ಅನಾವರಣಗೊಳ್ಳುತ್ತೆ. ಮೂರು ತಲೆಮಾರುಗಳ ಇತಿಹಾಸ ಹೊಂದಿರುವ ಅಂಬಾ ಭವಾನಿ ಸೋಮವಂಶ ಕ್ಷತ್ರಿಯ ಸಮಾಜದವರ ಕುಲದೇವತೆ. ಆದರೂ ಕೂಡ ತಾಯಿಯ ಮುಂದೆ ಜಾತಿ ಬೇಧಗಳ ಹಂಗಿಲ್ಲ. ಪ್ರತಿಯೊಬ್ಬರು ಈ ತಾಯಿಯ ಆಲಯದಲ್ಲಿ ಭಕ್ತಿ ಭಾವದಿಂದ ನಡೆದುಕೊಳ್ತಾರೆ. ಅಕ್ಕಪಕ್ಕದ ರಾಜ್ಯಗಳಿಂದಲೂ ಅಂಬಾ ಭವಾನಿ ಆಲಯಕ್ಕೆ ಬಂದು ಆಶೀರ್ವಾದ ಪಡೀತಾರೆ.