Temple Tour: ಬೀದರ್ನಲ್ಲಿದೆ ಸಿಖ್ಖರ ಪವಿತ್ರ ಯಾತ್ರಾ ಸ್ಥಳ
ಹಿಂದೂ ಧರ್ಮಕ್ಕೆ ಮಾತ್ರವಲ್ಲ, ಎಲ್ಲಾ ಧರ್ಮಗಳನ್ನೂ ದೇಶ ಮತ್ತು ರಾಜ್ಯ ಹಿಂದೂ ಧರ್ಮದಷ್ಟೇ ಸಮಾನ ದೃಷ್ಟಿಯಲ್ಲಿ ನೋಡಿದೆ. ರಾಜ್ಯದಲ್ಲೂ ಹಿಂದೂ ಧರ್ಮ ಹೊರತಾದ ಅನೇಕ ಮಂದಿರಗಳು ಖ್ಯಾತಿಯನ್ನ ಪಡೆದಿವೆ.
ನಾಡಿನಲ್ಲಿ ಹಿಂದೂ ಧರ್ಮದಷ್ಟೇ ಪ್ರಾಮುಖ್ಯತೆಯನ್ನ ಇತರೆ ಧರ್ಮಗಳಿಗೂ ನೀಡಲಾಗಿದೆ. ಆ ಪ್ರಕಾರದಲ್ಲಿ ಬೀದರ್ ನಾಡಿನ ಮಿನಿ ಪಂಜಾಬ್ ಅಂತ ಕರೆಸಿಕೊಂಡಿದೆ. ಅದಕ್ಕೆ ಕಾರಣ ಏನು ಗೊತ್ತಾ? ಬೀದರ್ನಲ್ಲಿ ಸಿಖ್ಖರ ಪವಿತ್ರ ಯಾತ್ರಾ ಸ್ಥಳವಾಗಿ ಗುರುತಿಸಿಕೊಂಡಿರುವ ಗುರುನಾನಕ ಝೀರಾ ಮಂದಿರ. ಭಾರತ ಸರ್ವ ಧರ್ಮ ಸಹಿಷ್ಣುತೆಯ ನಾಡು. ಹಿಂದೂ ಧರ್ಮಕ್ಕೆ ಮಾತ್ರವಲ್ಲ, ಎಲ್ಲಾ ಧರ್ಮಗಳನ್ನೂ ದೇಶ ಮತ್ತು ರಾಜ್ಯ ಹಿಂದೂ ಧರ್ಮದಷ್ಟೇ ಸಮಾನ ದೃಷ್ಟಿಯಲ್ಲಿ ನೋಡಿದೆ. ರಾಜ್ಯದಲ್ಲೂ ಹಿಂದೂ ಧರ್ಮ ಹೊರತಾದ ಅನೇಕ ಮಂದಿರಗಳು ಖ್ಯಾತಿಯನ್ನ ಪಡೆದಿವೆ. ಅಂತಾ ದೇಗುಲಗಳ ಸಾಲಿಗೆ ಸೇರುತ್ತೆ ರಾಜ್ಯದಲ್ಲಿರುವ ಸಿಖ್ಖರ ಒಂದು ಪವಿತ್ರ ಯಾತ್ರಾ ಸ್ಥಳ. ಆ ಯಾತ್ರಾ ಸ್ಥಳಕ್ಕೆ ಸಿಖ್ಖರು ಅಮೃತ್ಸರ್ನಲ್ಲಿರುವ ಸ್ವರ್ಣ ಮಂದಿರಕ್ಕೆ ನಡೆದುಕೊಂಡಷ್ಟೇ ಭಕ್ತಿ ಭಾವದಿಂದ ನಡೆದುಕೊಳ್ತಾರೆ. ಮತ್ತೊಂದು ಗುರುದ್ವಾರ ಎಂದೇ ನಂಬಿರುವ ಸಿಖ್ಖರ ಈ ಪ್ರಸಿದ್ಧ ಯಾತ್ರಾ ಸ್ಥಳ ಇರೋದು ಬೀದರ್ ಜಿಲ್ಲೆಯಲ್ಲಿ.