Temple Tour: ಹೊಯ್ಸಳ ಸಾಮ್ರಾಜ್ಯದ ಅಧಿದೇವತೆ ಎಲ್ಲಿದ್ದಾಳೆ ಗೊತ್ತಾ?
ಹೊಯ್ಸಳ ಸಾಮ್ರಾಜ್ಯದ ಸ್ಥಾಪನೆಗೆ ಕಾರಣವಾದ ಆ ದೇವಿಯನ್ನ ಇಂದಿಗೂ ಭಕ್ತಿ ಭಾವದಿಂದ ಪೂಜಿಸುತ್ತಿದೆ ಈ ನಾಡು. ಒಂದು ಇಡೀ ಸಾಮ್ರಾಜ್ಯವನ್ನ ಹರಸಿ ಇಂದಿಗೂ ನಂಬಿರುವ ಭಕ್ತರನ್ನ ಕಾಯುತ್ತಿರುವ ದೇವಿ ಮತ್ತಾರು ಅಲ್ಲ ವಸಂತಿಕಾ ದೇವಿ.
ಚಿಕ್ಕಮಗಳೂರು ಸಾಕಷ್ಟು ಪುರಾಣ ಪ್ರಸಿದ್ಧ ಕ್ಷೇತ್ರಗಳಿಗೆ ಹೆಸರುವಾಸಿಯಾಗಿದೆ. ಅಂತಾ ಒಂದು ಕ್ಷೇತ್ರ ಹೊಯ್ಸಳ ಸಾಮ್ರಾಜ್ಯದ ಅಧಿದೇವತೆಯಾದ ವಸಂತಿಕ ದೇವಿಯ ಸನ್ನಿಧಿ. ಅಂಗಡಿಯಲ್ಲಿ ಸಪ್ತ ಮಾತೃಕೆಯರ ರೂಪದಲ್ಲಿ ನೆಲೆ ನಿಂತ ದೇವಿ ಒಂದು ಸಾಮ್ರಾಜ್ಯವನ್ನೇ ಹರಸಿದ ಕಥೆ ಇದು. ಚಿಕ್ಕಮಗಳೂರು ಜಿಲ್ಲೆ ರಾಜ್ಯದಲ್ಲೇ ನಿಸರ್ಗ ಸೌಂದರ್ಯಕ್ಕೆ ಹೆಸರುವಾಸಿ. ಪ್ರಕೃತಿಯ ಸೊಬಗನ್ನೆಲ್ಲಾ ತನ್ನೊಳಗೆ ಸೆಳೆದಿಟ್ಟುಕೊಂಡಿರುವ ಚಿಕ್ಕಮಗಳೂರು ಇತಿಹಾಸ ಪ್ರಸಿದ್ಧ ಕ್ಷೇತ್ರಗಳಿಗೂ ಹೆಸರುವಾಸಿ. ಇಲ್ಲಿ ಸ್ಥಾಪನೆಯಾದ ಹೊಯ್ಸಳ ಸಾಮ್ರಾಜ್ಯ ನಾಡು ನುಡಿಯ ಚರಿತ್ರೆಯಲ್ಲಿ ತನ್ನದೇ ಅದ ಪ್ರಾಮುಖ್ಯತೆಯನ್ನ ಪಡೆದಿದೆ. ಹೊಯ್ಸಳ ಸಾಮ್ರಾಜ್ಯದ ಸ್ಥಾಪನೆಗೆ ಕಾರಣವಾದ ಆ ದೇವಿಯನ್ನ ಇಂದಿಗೂ ಭಕ್ತಿ ಭಾವದಿಂದ ಪೂಜಿಸುತ್ತಿದೆ ಈ ನಾಡು. ಒಂದು ಇಡೀ ಸಾಮ್ರಾಜ್ಯವನ್ನ ಹರಸಿ ಇಂದಿಗೂ ನಂಬಿರುವ ಭಕ್ತರನ್ನ ಕಾಯುತ್ತಿರುವ ದೇವಿ ಮತ್ತಾರು ಅಲ್ಲ ವಸಂತಿಕಾ ದೇವಿ.