Temple Tour: ಸಾಲಿಗ್ರಾಮ ಶಕ್ತಿಯಿಂದ ಭಕ್ತರ ಕಷ್ಟ ಬಗೆಹರಿಸುತ್ತಿದೆ ಭಜರಂಗಿ

| Updated By: ಆಯೇಷಾ ಬಾನು

Updated on: Oct 24, 2021 | 7:55 AM

ದೇವಸ್ಥಾನ ನುಗ್ಗಿಕೇರಿ ಕೆರೆಯ ತಟದಲ್ಲಿ ನಿರ್ಮಿತವಾಗಿದೆ. ಕೆರೆಯ ಸುತ್ತಲೂ ಹಸಿರು ಹೊದ್ದ ವೃಕ್ಷ ರಾಶಿ ಕಣ್ಮನ ಸೆಳೆಯುತ್ತದೆ. ನೂರಾರು ವರ್ಷಗಳ ಇತಿಹಾಸವೂ ಈ ದೇವಾಲಯಕ್ಕಿದೆ.

ರಾಜ್ಯದ ನಾನಾ ಭಾಗಗಳಲ್ಲಿ ಇರುವಂತಾ ದೇಗುಲಗಳು ಸ್ಥಳೀಯವಾಗಿ ಮತ್ತು ರಾಜ್ಯ ವ್ಯಾಪಿಯಲ್ಲಿ ಸಾಕಷ್ಟು ಪ್ರಸಿದ್ಧಿಯನ್ನ ಪಡೆದಿವೆ. ಅಂತಾ ದೇಗುಲಗಳ ವಿಶೇಷತೆಗಳ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲುವ ವಿಶೇಷ ಕಾರ್ಯವನ್ನು ಟಿವಿ9 ಟೆಂಪಲ್ ಟೂರ್ ಮಾಡುತ್ತಿದೆ. ಧಾರವಾಡದಿಂದ ಕಲಘಟಗಿ ರಸ್ತೆ ಕಡೆಗೆ ಹೋಗುವಾಗ ದಟ್ಟ ಹಸಿರಿನ ಮಧ್ಯೆ ಬರುವ ಗ್ರಾಮವೇ ನುಗ್ಗಿಕೇರಿ. ಧಾರವಾಡ ತಾಲೂಕಿನ ಈ ಗ್ರಾಮ ಇಲ್ಲಿನ ಆಂಜನೇಯನಿಂದಲೇ ಪ್ರಸಿದ್ಧಿ ಪಡೆದಿದೆ. ಧಾರವಾಡ ಹಾಗೂ ಸುತ್ತಮುತ್ತ ನೆಲೆಸಿರುವ ಜನರಿಗಷ್ಟೇ ಅಲ್ಲ ನಾಡಿನ ಅನೇಕರಿಗೆ ನುಗ್ಗಿಕೇರಿ ದೇವಸ್ಥಾನದ ಮಹಿಮೆ ಬಗ್ಗೆ ಗೊತ್ತಿದೆ. ದೇವಸ್ಥಾನ ನುಗ್ಗಿಕೇರಿ ಕೆರೆಯ ತಟದಲ್ಲಿ ನಿರ್ಮಿತವಾಗಿದೆ. ಕೆರೆಯ ಸುತ್ತಲೂ ಹಸಿರು ಹೊದ್ದ ವೃಕ್ಷ ರಾಶಿ ಕಣ್ಮನ ಸೆಳೆಯುತ್ತದೆ. ನೂರಾರು ವರ್ಷಗಳ ಇತಿಹಾಸವೂ ಈ ದೇವಾಲಯಕ್ಕಿದೆ.