ಸಂಪಾದನೆ ಮಾಡಿದ ಜ್ಞಾನ ಹಂಚಿದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಜೀವಂತ ದೈವವಾಗಿದ್ದರು: ಸಿದ್ದರಾಮಯ್ಯ, ಮುಖ್ಯಮಂತ್ರಿ

|

Updated on: Jan 02, 2024 | 5:45 PM

ಮಾನವರು ಹೇಗೆ ಬಾಳಬೇಕು ತಮ್ಮ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕೆಂದು ಸ್ವಾಮೀಜಿ ತಮ್ಮ ಪ್ರವಚನಗಳ ಮೂಲಕ ಬೋಧಿಸಿದರು ಎಂದು ಸಿದ್ದರಾಮಯ್ಯ ಹೇಳಿದರು. ಶ್ರೀ ಸಿದ್ದೇಶ್ವರ ಸ್ವಾಮೀಜಿ ತಾವು ಜ್ಞಾನವನ್ನು ಸಂಪಾದಿಸಿ ಅದನ್ನು ಹೇರಳವಾಗಿ ಹಂಚಿದರು, ಅವರು ಹಂಚಿದ್ದು ಮನುಷ್ಯತ್ವದ ಜ್ಞಾನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಜಯಪುರ: ಕಳೆದ ವರ್ಷ ಲಿಂಗೈಕ್ಯರಾದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ (Sri Siddeshwara Swamiji) ಮೊದಲ ಪುಣ್ಯತಿಥಿಯ ಅಂಗವಾಗಿ ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಏರ್ಪಡಿಸಲಾಗಿದ್ದ ಗುರು ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಸ್ವಾಮೀಜಿ ತಮ್ಮ ಬದುಕಿನ ಸಮಯದಲ್ಲಿ ಜೀವಂತ ದೈವವಾಗಿದ್ದರು (living god) ಎಂದು ಹೇಳಿದರು. ತಾನು ಬಸವಾದಿ ಶರಣರ ಅನುಯಾಯಿ, ಶರಣರು ಉಪದೇಶಿಸಿದ ಮತ್ತು ಬಯಸಿದ ಜಾತಿ ರಹಿತ ಮತ್ತು ವರ್ಗರಹಿತ ಸಮಾಜಕ್ಕಾಗಿ ಹಪಾಹಪಿ ಇರುವವನು ಅಂತ ಮುಖ್ಯಮಂತ್ರಿ ಹೇಳಿದರು. ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ತಮ್ಮ ವಿಲ್ ನಲ್ಲಿ ಬರೆದಿರುವುದನ್ನು ಸಚಿವ ಎಂಬಿ ಪಾಟೀಲ್ ಮೊದಲೊಮ್ಮೆ ತನಗೆ ತೋರಿಸಿದ್ದರು ಮತ್ತು ಈಗ ಪುನಃ ಅದನ್ನು ತನ್ನ ಮುಂದಿಟ್ಟಿದ್ದಾರೆ ಅಂತ ಹೇಳಿದ ಸಿದ್ದರಾಮಯ್ಯ, ಸ್ವಾಮೀಜಿ ಇಂಗ್ಲಿಷ್ ಭಾಷೆಯಲ್ಲಿ ಬರೆದಿರುವ ಕೆಲ ಸಾಲುಗಳನ್ನು ಓದಿದರು. For me life is a stream of experiences. It should be made rich by philosophical thinking and and scientific knowledge. Its is to be made noble and beautiful…Fine feelings free from hate and jealous, ego and attachment…ಸಾಧನೆ ಎಂದರೆ ಇದೇ, ನಮ್ಮ ಬದುಕಿನಲ್ಲಿ ಸಾಧಿಸಬೇಕಿರುವುದು ಇದನ್ನೇ ಅಂತ ಸ್ವಾಮೀಜಿ ಬರೆದಿದ್ದಾರೆ ಎಂದು ಸಿದ್ದರಾಮಯ್ಯ ಓದಿ ಹೇಳಿದರು.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ