ಹಾಸನ: ಜೀವಭಯದ ಆತಂಕ ಹೊರಹಾಕಿದ ಬೇಲೂರು ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮಿ
ಭಕ್ತರೊಬ್ಬರು ಮಾತಾಡುವಾಗ ಸ್ವಾಮೀಜಿ ನೂರ್ಕಾಲ ಬಾಳಲಿ ಅಂತ ಹಾರೈಸಿದರು ಅಂತ ಹೇಳಿದ ಸ್ವಾಮೀಜಿ, ತಮಗೆ ಅಷ್ಟೆಲ್ಲ ವರ್ಷ ಬದುಕುವ ಆಸೆಯಿಲ್ಲ, ಮಠದ ಸಾರಥ್ಯ ವಹಿಸಿಕೊಂಡ 15 ವರ್ಷಗಳಿಗೆ ಸಾಕಾಗಿ ಹೋಗಿದೆ, ಹೊರಗಡೆ ಕಾಣಿಸಿದರೆ ಕೊಚ್ಚಿಹಾಕ್ತೀವಿ ಅಂತ ಹೇಳುವವರಿದ್ದಾರೆ. ಹಾಗಾಗಿ ಭಗವಂತನ ಸೇವೆ ಮಾಡುತ್ತಾ ಅದಷ್ಟು ಬೇಗ ಆತನ ಪಾದ ಸೇರುವುದೇ ವಾಸಿ ಅಂತ ಹೇಳುತ್ತಾರೆ.
ಹಾಸನ: ಸರ್ವವನ್ನು ತ್ಯಜಿಸಿ ಪರಿತ್ಯಾಗಿಗಳಾಗಿ ಸಮಾಜದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮಠಾಧೀಶರಿಗೂ (pontiff) ಜೀವ ಬೆದರಿಕೆ ಅಂತಾದರೆ ನಮ್ಮ ನಾಡಿನಲ್ಲಿ ಯಾರು ಸ್ವಾಮಿ ಸೇಫು ಅಂತ ಆತಂಕ ಕಾಡದಿರಲಾರದು. ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ, ಜಿಲ್ಲೆಯ ಬೇಲೂರು ತಾಲ್ಲೂಕಿನ ಹಳೇಬೀಡುನಲ್ಲಿರುವ ಶ್ರೀಕ್ಷೇತ್ರ ಪುಷ್ಟಗಿರಿ ಮಠದ (Pushpagiri Mutt) ಪೀಠಾಧ್ಯಕ್ಷರಾಗಿರುವ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ (Sri Somashekhar Shivacharya) ಅವರು ತಮಗೆ ಜೀವ ಬೆದರಿಕೆ ಇರುವ ಆತಂಕವನ್ನು ಹೊರಹಾಕಿದ್ದಾರೆ. ಮಠದಲ್ಲಿ ಮಂಗಳವಾರ ರಾತ್ರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಯಶಸ್ವೀಯಾಗಿ ಪೂರ್ಣಗೊಂಡ ಬಳಿಕ ಮಾತಾಡಿದ ಅವರು ಪುಷ್ಪಗಿರಿ ಮಠದ ಖ್ಯಾತಿಯನ್ನು ವಿಶ್ವಮಟ್ಟಕ್ಕೆ ಹಬ್ಬುವ ತಮ್ಮ ಹೆಬ್ಬಯಕೆಯನ್ನು ನೆರೆದ ಭಕ್ತಗಣದ ಮುಂದಿಟ್ಟರು. ಮುಂದುವರಿದು ಮಾತಾಡಿದ ಸ್ವಾಮೀಜಿ, ಭಕ್ತರೊಬ್ಬರು ಮಾತಾಡುವಾಗ ಸ್ವಾಮೀಜಿ ನೂರ್ಕಾಲ ಬಾಳಲಿ ಅಂತ ಹಾರೈಸಿದರು ಅಂತ ಹೇಳಿ, ತಮಗೆ ಅಷ್ಟೆಲ್ಲ ವರ್ಷ ಬದುಕುವ ಆಸೆಯಿಲ್ಲ, ಮಠದ ಸಾರಥ್ಯ ವಹಿಸಿಕೊಂಡ 15 ವರ್ಷಗಳಿಗೆ ಸಾಕಾಗಿ ಹೋಗಿದೆ, ಹೊರಗಡೆ ಕಾಣಿಸಿದರೆ ಕೊಚ್ಚಿಹಾಕ್ತೀವಿ ಅಂತ ಹೇಳುವವರಿದ್ದಾರೆ. ಹಾಗಾಗಿ ಭಗವಂತನ ಸೇವೆ ಮಾಡುತ್ತಾ ಅದಷ್ಟು ಬೇಗ ಆತನ ಪಾದ ಸೇರುವುದೇ ವಾಸಿ ಅಂತ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ