ಭಗವದ್ಗೀತೆ, ಸಾತ್ವಿಕ ಆಹಾರ, ಯೋಗ: ಕರ್ನಾಟಕದಲ್ಲಿ ಶಿಕ್ಷಣ ಸುಧಾರಣೆಗೆ ಹಲವು ಸಲಹೆಗಳನ್ನು ಮುಂದಿಟ್ಟ ಮಠಾಧೀಶರು, ಶಿಕ್ಷಣ ತಜ್ಞರು

‘ಕರ್ನಾಟಕದಲ್ಲಿ ಮುಂದಿನ ವರ್ಷದಿಂದಲೇ ಮೌಲ್ಯ ಶಿಕ್ಷಣವು ಪಠ್ಯಕ್ರಮದ ಭಾಗವಾಗಲಿದೆ’ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ಭಗವದ್ಗೀತೆ, ಸಾತ್ವಿಕ ಆಹಾರ, ಯೋಗ: ಕರ್ನಾಟಕದಲ್ಲಿ ಶಿಕ್ಷಣ ಸುಧಾರಣೆಗೆ ಹಲವು ಸಲಹೆಗಳನ್ನು ಮುಂದಿಟ್ಟ ಮಠಾಧೀಶರು, ಶಿಕ್ಷಣ ತಜ್ಞರು
ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಆರ್ಚ್​ ಬಿಷಪ್ ಪೀಟರ್ ಮಚಾಡೊ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್Image Credit source: Tv9Kannada
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 10, 2023 | 12:34 PM

ಬೆಂಗಳೂರು: ಕರ್ನಾಟಕದ ಶಾಲೆಗಳಲ್ಲಿ ಮೌಲ್ಯಾಧರಿತ ಶಿಕ್ಷಣ (Value-Based Education) ಬೋಧಿಸುವ ಕುರಿತು ವಿಧಾನಸೌಧದಲ್ಲಿ ಸೋಮವಾರ (ಡಿ 9) ಮಹತ್ವದ ಸಭೆ ನಡೆಯಿತು. ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು, ಸಚಿವರಿದ್ದ ಸಭೆಯಲ್ಲಿ ವಿವಿಧ ಮಠಗಳ ಮಠಾಧೀಶರು, ಧಾರ್ಮಿಕ ಮುಖಂಡರು ಹಾಗೂ ಶಿಕ್ಷಣ ತಜ್ಞರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಭಾರತೀಯ ನಂಬಿಕೆಗಳು ಮತ್ತು ಶಿಕ್ಷಣ ನೀತಿಗೆ (NEP) ಅನುಗುಣವಾಗಿ ಶಿಕ್ಷಣ ಪದ್ಧತಿಯನ್ನು ಹೇಗೆ ರೂಪಿಸಬಹುದು ಎಂಬ ಬಗ್ಗೆ ಹಲವರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಮೌಲ್ಯ ಶಿಕ್ಷಣ ಬೋಧಿಸುವ ಸಾಮರ್ಥ್ಯವು ಶಿಕ್ಷಕರಲ್ಲಿ ಹೆಚ್ಚಾಗಬೇಕಿದೆ. ಇದಕ್ಕೆ ಅನುಗುಣವಾಗಿ ಶಿಕ್ಷಕರಿಗೆ ಅಗತ್ಯ ತರಬೇತಿ ನೀಡಿ, ನಿಯಮಿತವಾಗಿ ಮೌಲ್ಯಮಾಪನ ಮಾಡಬೇಕಿದೆ ಎಂಬ ಅಭಿಪ್ರಾಯವು ಸಭೆಯಲ್ಲಿ ವ್ಯಕ್ತವಾಯಿತು.

ಮೌಲ್ಯ ಶಿಕ್ಷಣವನ್ನು ಪಠ್ಯಕ್ರಮದ ಭಾಗವಾಗಿಸುವ ಚಿಂತನೆಯು ಕರ್ನಾಟಕ ಸರ್ಕಾರದ ಉನ್ನತ ವಲಯದಲ್ಲಿ ವ್ಯಕ್ತವಾಗುತ್ತಿತ್ತು. ಆದರೆ ಪಠ್ಯಪುಸ್ತಕಗಳಲ್ಲಿ ಈ ಸಂಬಂಧ ಯಾವುದೇ ಪಾಠಗಳು ಸೇರ್ಪಡೆಯಾಗಿರಲಿಲ್ಲ. ‘ಕರ್ನಾಟಕದಲ್ಲಿ ಮೌಲ್ಯ ಶಿಕ್ಷಣ ಜಾರಿಗೆ ವಿಶೇಷ ಸಮಿತಿಯನ್ನು ಶೀಘ್ರ ರಚಿಸಲಾಗುವುದು. ಮುಂದಿನ ವರ್ಷದಿಂದಲೇ ಮೌಲ್ಯ ಶಿಕ್ಷಣವು ಪಠ್ಯಕ್ರಮದ ಭಾಗವಾಗಲಿದೆ’ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ಸಭೆಯಲ್ಲಿ ಮಾತನಾಡಿದ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ‘ಭಗವದ್ಗೀತೆಯನ್ನು ಮೌಲ್ಯ ಶಿಕ್ಷಣದ ಭಾಗವಾಗಿ ಬೋಧಿಸಬೇಕು. ಮಕ್ಕಳಲ್ಲಿ ಕೋಪ ಮತ್ತಿತರ ಮಾನಸಿಕ ತುಮುಲಗಳ ನಿಯಂತ್ರಣಕ್ಕೆ ಸಾತ್ವಿಕ ಆಹಾರ ನೀಡಬೇಕು. ಮುಂಜಾನೆ ಯೋಗಾಭ್ಯಾಸ ನಡೆಯಬೇಕು. ಬೆಳಿಗ್ಗೆ ಬೇಗ ಎದ್ದು ಅಭ್ಯಾಸ ಆರಂಭಿಸುವುದರಿಂದ ಏಕಾಗ್ರತೆ ಹೆಚ್ಚಾಗುತ್ತದೆ. ಮಕ್ಕಳಲ್ಲಿ ಈ ಅಭ್ಯಾಸ ರೂಪುಗೊಳ್ಳಲು ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.

ಖ್ಯಾತ ಅಧ್ಯಾತ್ಮ ಗುರು ಶ್ರೀಶ್ರೀ ರವಿಶಂಕರ್ ಮಾತನಾಡಿ, ‘ಉತ್ತಮ ವ್ಯಕ್ತಿತ್ವ ರೂಪಿಸಲು ಮೌಲ್ಯ ಶಿಕ್ಷಣ ಅತ್ಯಗತ್ಯ. ಮಕ್ಕಳಿಗೆ ಪಾಠ ಮಾಡುವ ಶಿಕ್ಷಕರ ಸ್ಥಿತಿಗತಿಯನ್ನು ಮೊದಲು ಅರಿಯಬೇಕಿದೆ. ಅವರಿಗೆ ಪುನರ್​ಮನನ ಶಿಬಿರಗಳನ್ನು ಆಯೋಜಿಸಿ ಅವರ ವ್ಯಕ್ತಿತ್ವವನ್ನು ಸುಧಾರಿಸಬೇಕಿದೆ. ಅನಂತರವಷ್ಟೇ ಶಿಕ್ಷಕರು ಏಕತೆ, ಸೌಹಾರ್ದ ಮತ್ತು ಇತರ ನೈತಿಕ ಮೌಲ್ಯಗಳನ್ನು ಮಕ್ಕಳಿಗೆ ದಾಟಿಸಬಲ್ಲರು. ಉತ್ತರ ಭಾರತದ ಹಲವು ರಾಜ್ಯಗಳು, ಕರ್ನಾಟಕದ ನೆರೆಹೊರೆ ರಾಜ್ಯಗಳಲ್ಲಿ ವಿದ್ಯಾರ್ಥಿಗಳು ಡ್ರಗ್ಸ್​ ಸೇವಿಸಿ ಶಾಲೆಗಳಿಗೆ ಬರುತ್ತಿರುವ ವರದಿಗಳಿವೆ. ಬೆಂಗಳೂರಿನಲ್ಲಿಯೂ ಇಂಥ ಸಮಸ್ಯೆ ಕಾಣಿಸಿಕೊಂಡಿದೆ. ಈ ಸಾಮಾಜಿಕ ಪಿಡುಗಿಗೆ ಮೌಲ್ಯ ಶಿಕ್ಷಣದ ಮೂಲಕ ಕಡಿವಾಣ ಹಾಕಬೇಕಿದೆ’ ಎಂದು ಅವರು ತಿಳಿಸಿದರು.

ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಅನುಷ್ಠಾನಗೊಳಿಸಲು ಸಾಧ್ಯವಿರುವ, ಮಕ್ಕಳಿಗೆ ಇಷ್ಟವಾಗುವ ರೀತಿಯಲ್ಲಿ ಮೌಲ್ಯ ಶಿಕ್ಷಣ ಜಾರಿಗೊಳಿಸಬೇಕು. ಇದಕ್ಕಾಗಿ ವಿಶೇಷ ಕಾರ್ಟೂನ್, ನಾಟಕಗಳನ್ನು ರೂಪಿಸಬೇಕು. ತಮ್ಮ ಅಭಿಪ್ರಾಯವನ್ನು ಹಲವು ರೀತಿಯಲ್ಲಿ ವ್ಯಕ್ತಪಡಿಸಲು ಮಕ್ಕಳಿಗೂ ಅವಕಾಶ ಇರಬೇಕು ಎಂದು ಹೇಳಿದರು.

ಧರ್ಮಾತೀತ ಮೌಲ್ಯಗಳಿಗೆ ಒತ್ತು ಕೊಡಿ

ಸಭೆಯಲ್ಲಿ ಪಾಲ್ಗೊಂಡಿದ್ದ ಬೆಂಗಳೂರು ಆರ್ಚ್​ ಬಿಷಪ್ ರೆವರೆಂಡ್ ಪೀಟರ್ ಮಚಾಡೊ ಮಾತನಾಡಿ, ‘ಮೌಲ್ಯಗಳನ್ನು ಧರ್ಮಾತೀತವಾಗಿ ಬೋಧಿಸಬೇಕು. ಬಿ.ಇಡಿ. ಹಂತದಲ್ಲೇ ಮೌಲ್ಯಯುತ ಶಿಕ್ಷಣ ನೀಡಬೇಕು. ಇದರಿಂದ ಶಿಕ್ಷಕರಾಗುವವರ ವ್ಯಕ್ತಿತ್ವದಲ್ಲೂ ಬದಲಾವಣೆ ತರಲು ಸಾಧ್ಯ. ಮಕ್ಕಳಲ್ಲಿ ಸಹಿಷ್ಣುತೆ ಮತ್ತು ಸಹಬಾಳ್ವೆ ಬಗ್ಗೆ ಅರಿವು ಮೂಡಿಸಬೇಕು’ ಎಂದು ಸಲಹೆ ಮಾಡಿದರು.

‘ನೈತಿಕ ಶಿಕ್ಷಣ ಎನ್ನುವುದು ಚಟುವಟಿಕೆ ಆಧಾರಿತ ಕಲಿಕೆಯಾಗಬೇಕು. ಮೌಲ್ಯಗಳು ಸಾರ್ವತ್ರಿಕವಾಗಿರಬೇಕು. ಅದಕ್ಕೆ ಯಾವುದೇ ಬಣ್ಣ ಹಚ್ಚುವ ಪ್ರಯತ್ನ ಆಗಬಾರದು. ಪ್ರೀತಿ, ಸೌಹಾರ್ದ ಮೂಡಿಸುವ ಶಿಕ್ಷಣ ಇಂದಿನ ತುರ್ತು ಅಗತ್ಯ’ ಎಂದು ಮುಸ್ಲಿಂ ಧರ್ಮಗುರು ಅಬ್ದುಲ್‌ ರಹೀಂ ಹೇಳಿದರು.

‘ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಲ್ಲಿ ಹಿಂಜರಿಕೆ ಮನೋಭಾವ ಬೆಳೆಯುತ್ತಿದೆ. ಇದನ್ನು ದೂರ ಮಾಡಬೇಕು’ ಎಂದು ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು. ‘ಶೇ 70ರಷ್ಟು ವಿದ್ಯಾರ್ಥಿಗಳು ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದಾರೆ. ‘ನೀತಿ ಬೋಧಿಸುವವರು ಮೊದಲು ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. 10 ವರ್ಷಗಳಿಗೊಮ್ಮೆ ಶಿಕ್ಷಣ ಪದ್ಧತಿ ಬದಲಾಗಬೇಕು’ ಎಂದು ಅವರು ಪ್ರತಿಪಾದಿಸಿದರು.

ಇದನ್ನೂ ಓದಿ: ಧರ್ಮ ಸಭೆ ಅಲ್ಲ, ಶಿಕ್ಷಣದಲ್ಲಿ ಮೌಲ್ಯಗಳನ್ನು ನೀಡುವ ಪ್ರಯತ್ನ ಇದು: ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:28 pm, Tue, 10 January 23

ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ನವೆಂಬರ್ 29ರಿಂದ ರೇಣುಕಾಚಾರ್ಯ ತಂಡದಿಂದಲೂ ಒಂದು ಅಭಿಯಾನ!
ನವೆಂಬರ್ 29ರಿಂದ ರೇಣುಕಾಚಾರ್ಯ ತಂಡದಿಂದಲೂ ಒಂದು ಅಭಿಯಾನ!
ಬಂಡೀಪುರದಲ್ಲಿ ಆನೆ ಮರಿಗೆ ಹೊಂಚು ಹಾಕಿದ್ದ ಹುಲಿಯನ್ನು ಓಡಿಸಿದ ತಾಯಾನೆ
ಬಂಡೀಪುರದಲ್ಲಿ ಆನೆ ಮರಿಗೆ ಹೊಂಚು ಹಾಕಿದ್ದ ಹುಲಿಯನ್ನು ಓಡಿಸಿದ ತಾಯಾನೆ