ಜೈಲಿನಿಂದ ಹೊರಬಂದ ಶ್ರೀಕಾಂತ್ ಪೂಜಾರಿ ತನ್ನ ಬಂಧನ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿದ್ದು ಗೊತ್ತಿಲ್ಲವೆಂದರು!

ಜೈಲಿನಿಂದ ಹೊರಬಂದ ಶ್ರೀಕಾಂತ್ ಪೂಜಾರಿ ತನ್ನ ಬಂಧನ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿದ್ದು ಗೊತ್ತಿಲ್ಲವೆಂದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 06, 2024 | 6:21 PM

ಜೈಲಿನಿಂದ ಹೊರಬಂದ ಶ್ರೀಕಾಂತ್ ಪೂಜಾರಿ ಅವರನ್ನು ಪಕ್ಷದ ಹುಬ್ಬಳ್ಳಿ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಸ್ವಾಗತಿಸಿದರು. ಪತ್ರಕರ್ತರೊಂದಿಗೆ ಮಾತಾಡುವಾಗ ಶ್ರೀಕಾಂತ್, ತಾನು ಯಾವತ್ತಿಗೂ ರಾಮ ಭಕ್ತನೇ, ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯುವ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ನಿಶ್ಚಿತವಾಗಿ ಭಾಗಿವಹಿಸುವುದಾಗಿ ಅವರು ಹೇಳಿದರು.

ಹುಬ್ಬಳ್ಳಿ: 32-ವರ್ಷಗಳ ಹಿಂದಿನ ಪ್ರಕರನವೊಂದರಲ್ಲಿ ಹುಬ್ಬಳ್ಳಿ ಪೊಲೀಸರಿಂದ ಬಂಧನಕ್ಕೊಗಾಗಿದ್ದ ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿಗೆ (Srikanth Pujari) ಜಾಮೀನು ಸಿಕ್ಕಿದ್ದು ಜೈಲಿನಿಂದ ಹೊರಬಂದಿದ್ದಾರೆ. ಶ್ರೀಕಾಂತ್ ಹೊರಕಂಡ ಕೂಡಲೇ ಮಾಧ್ಯಮ ಪ್ರತಿನಿಧಿಗಳು ಅವರನ್ನು ಸುತ್ತಿವರಿದಿದ್ದು ಸಹಜವಾಗಿತ್ತು. ಆದರೆ, ಪತ್ರಕರ್ತರು ಎಡೆಬಿಡದೆ ಪ್ರಶ್ನೆ ಕೇಳಲಾರಂಭಿಸಿದಾಗ ಅವರು ಗಾಬರಿಗೊಂಡಿದ್ದೂ ಸತ್ಯ. ಸ್ವಲ್ಪ ಹೊತ್ತಿನ ಬಳಿಕ ಸಾವರಿಸಿಕೊಂಡ ಶ್ರೀಕಾಂತ್ ಎಲ್ಲ ಪ್ರಶ್ನೆಗಳಿಗೆ ಸಮಂಜಸ ಉತ್ತರ ನೀಡಿದರು. ತಮ್ಮನ್ನು ಮಾರ್ಕೆಟ್ ಗೆ ಕರೆದೊಯ್ಯುವ ನೆಪದಲ್ಲಿ ಪೊಲೀಸರು ಠಾಣೆಗೆ (police station) ಒಯ್ದರು ಎಂದು ಹೇಳಿದ ಶ್ರೀಕಾಂತ್ ತನ್ನ ಬಂಧನಕ್ಕೆ ಅವರಲ್ಲಿ ವಾರಂಟ್ (warrant), ಸಮನ್ಸ್ (summons) ಯಾವುದೂ ಇರಲಿಲ್ಲ ಎಂದರು. ತನ್ನ ಬಂಧನ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿರುವ ವಿಷಯ ಗೊತ್ತಿಲ್ಲ ಮತ್ತು ಬಂಧನವನ್ನು ಖಂಡಿಸಿ ರಾಜ್ಯ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿದ್ದೂ ಸಹ ಗೊತ್ತಿಲ್ಲ ಎಂದು ಶ್ರೀಕಾಂತ್ ಹೇಳಿದರು. ಕಾಂಗ್ರೆಸ್ ಸರ್ಕಾರ ನಿಮ್ಮನ್ನ ಉದ್ದೇಶಪೂರ್ವಕವಾಗಿ ಬಂಧಿಸಿತೇ? ಎಂದು ಕೇಳಿದ ಪ್ರಶ್ನೆಗೂ ಅವರು ಗೊತ್ತಿಲ್ಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ