ತಾಯಿ ಕಳೆದುಕೊಂಡ ವಿಜಯ್​ ರಾಘವೇಂದ್ರ ಪುತ್ರ ಶೌರ್ಯನ ಜತೆ ನಿಂತು ಕಾಳಜಿ ತೋರಿದ ಶ್ರೀಮುರಳಿ ಪತ್ನಿ ವಿದ್ಯಾ

|

Updated on: Aug 16, 2023 | 6:13 PM

ಹೃದಯಾಘಾತದಿಂದ ನಿಧನರಾದ ಸ್ಪಂದನಾ ವಿಜಯ್​ ರಾಘವೇಂದ್ರ ಅವರ ಉತ್ತರ ಕ್ರಿಯೆ ಇಂದು (ಆಗಸ್ಟ್​ 16) ನಡೆದಿವೆ. ಸ್ಪಂದನಾ ತಂದೆ ಬಿ.ಕೆ. ಶಿವರಾಂ ಅವರ ಮನೆಯಲ್ಲಿ ಶಾಂತಿಹೋಮ ನಡೆಯಿತು. ಶ್ರೀಮುರಳಿ ಪತ್ನಿ ವಿದ್ಯಾ ಅವರು ಶೌರ್ಯನ ಜೊತೆ ನಿಂತು ಕಾಳಜಿ ವಹಿಸಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಸ್ಪಂದನಾ ವಿಜಯ್​ ರಾಘವೇಂದ್ರ (Spandana Vijay Raghavendra) ಅವರು ಹೃದಯಾಘಾತದಿಂದ ನಿಧನರಾಗಿದ್ದು ಬಹಳ ನೋವಿನ ಸಂಗತಿ. ಸ್ಪಂದನಾ ಅವರ ಅಗಲಿಕೆ ಬಳಿಕ ವಿಜಯ್​ ರಾಘವೇಂದ್ರ (Vijay Raghavendra) ಅವರ ಕುಟುಂಬದಲ್ಲಿ ದುಃಖ ಆವರಿಸಿದೆ. ವಿಜಯ್​ ರಾಘವೇಂದ್ರ ಮತ್ತು ಸ್ಪಂದನಾ ದಂಪತಿಯ ಮಗ ಶೌರ್ಯ ಕೂಡ ಕಣ್ಣೀರು ಹಾಕುತ್ತಿದ್ದಾನೆ. ಇಂದು (ಆಗಸ್ಟ್​ 16) ಸ್ಪಂದನಾ ವಿಜಯ್​ ರಾಘವೇಂದ್ರ ಅವರ ಉತ್ತರ ಕ್ರಿಯೆ ನಡೆದಿವೆ. ಈ ವೇಳೆ ಶೌರ್ಯನ ಜೊತೆ ನಿಂತು ಕಾಳಜಿ ವಹಿಸಿದ್ದಾರೆ ಶ್ರೀಮುರಳಿ ಪತ್ನಿ ವಿದ್ಯಾ (Vidya Srimurali). ಸ್ಪಂದನಾ ತಂದೆ ಬಿ.ಕೆ. ಶಿವರಾಂ ಅವರ ಮನೆಯಲ್ಲಿ ಶಾಂತಿಹೋಮ ನಡೆಯಿತು. ಬಳಿಕ ಮಲ್ಲೇಶ್ವರದ ಮೈದಾನದಲ್ಲಿ ಅಭಿಮಾನಿಗಳಿಗೆ ಭೋಜನ ವ್ಯವಸ್ಥೆ ಮಾಡಲಾಯಿತು.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.