ಒಂದೇ ದಿನ ಪ್ರೇಮಿ ಮತ್ತು ವಿಲನ್ ಆದ ಶ್ರೀನಗರ ಕಿಟ್ಟಿ; ಹೇಗಿದೆ ರೆಸ್ಪಾನ್ಸ್?

Updated By: ಮದನ್​ ಕುಮಾರ್​

Updated on: Jun 06, 2025 | 10:48 PM

ಇಂದು (ಜೂ.6) ‘ಸಂಜು ವೆಡ್ಸ್​ ಗೀತಾ 2’ ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ರಚಿತಾ ರಾಮ್, ಶ್ರೀನಗರ ಕಿಟ್ಟಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಶ್ರೀನಗರ ಕಿಟ್ಟಿ ಅವರು ಫ್ಯಾನ್ಸ್ ಜೊತೆ ಕುಳಿತು ಮೊದಲ ದಿನ ಮೊದಲ ಶೋ ವೀಕ್ಷಿಸಿದ್ದಾರೆ. ಮೊದಲ ದಿನ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದಕ್ಕೆ ಶ್ರೀನಗರ ಕಿಟ್ಟಿ ಅವರಿಗೆ ಸಂತಸ ಆಗಿದೆ.

‘ಸಂಜು ವೆಡ್ಸ್​ ಗೀತಾ 2’ (Sanju Weds Geetha 2) ಸಿನಿಮಾ ಇಂದು (ಜೂ.6) ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ (Srinagara Kitty), ರಚಿತಾ ರಾಮ್ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಶ್ರೀನಗರ ಕಿಟ್ಟಿ ಅವರು ಅಭಿಮಾನಿಗಳ ಜೊತೆ ಕುಳಿತು ಮೊದಲ ದಿನ ಮೊದಲ ಶೋ ನೋಡಿದ್ದಾರೆ. ಮೊದಲ ದಿನ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದಕ್ಕೆ ಶ್ರೀನಗರ ಕಿಟ್ಟಿ ಅವರಿಗೆ ಖುಷಿ ಆಗಿದೆ. ಇನ್ನು ‘ಮಾದೇವ’ ಸಿನಿಮಾ (Maadeva Movie) ಕೂಡ ಇದೇ ದಿನ ಬಿಡುಗಡೆ ಆಗಿದೆ. ಆ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಅವರು ನೆಗೆಟಿವ್ ಶೇಡ್ ಇರುವ ಪಾತ್ರ ಮಾಡಿದ್ದಾರೆ. ಒಂದು ಸಿನಿಮಾದಲ್ಲಿ ಪ್ರೇಮಿಯಾಗಿ, ಇನ್ನೊಂದು ಸಿನಿಮಾದಲ್ಲಿ ವಿಲನ್ ಆಗಿದ್ದಾರೆ. ಆ ಬಗ್ಗೆ ಜನರಿಂದ ಸಿಕ್ಕ ಪ್ರತಿಕ್ರಿಯೆ ಬಗ್ಗೆ ಅವರು ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.