Chikmagalur News: ಅಪಾಯಕಾರಿ ಸ್ಥಿತಿಯಲ್ಲಿ ಶೃಂಗೇರಿ-ಕಸಳ ಸಂಪರ್ಕ ರಸ್ತೆ, ಭಾಗದ ನಾಯಕರ ನಿರ್ಲಕ್ಷ್ಯ ಗಾಬರಿ ಹುಟ್ಟಿಸುತ್ತದೆ!
ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುವುದರಿಂದ ಜಿಲ್ಲಾಡಳಿತ ಮತ್ತು ಸ್ಥಳೀಯ ರಾಜಕಾರಣಿಗಳು ಕೂಡಲೇ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗಬೇಕಿದೆ.
ಚಿಕ್ಕಮಗಳೂರು: ಈ ರಸ್ತೆ ಅನಾಹುತ ಸೃಷ್ಟಿಸಲ ಬಾಯ್ದೆರದು ಕೂತಿರೋದು ಈ ಭಾಗದ ರಾಜಕಾರಣಿಗಳನ್ನು (politicians) ಬಿಟ್ಟು ಬೇರೆಲ್ಲರಿಗೂ ಕಾಣಿಸುತ್ತಿದೆ. ಯಾಕೆ ಹೀಗೆ ಹೇಳಬೇಕಾಗಿದೆಯೆಂದರೆ, ರಸ್ತೆಯು ಕಳೆದ ಬಾರಿಯ ಮಳೆಗಾಲದಲ್ಲೇ ಕುಸಿದಿತ್ತು. ಮತ್ತೊಂದು ಮಳೆಗಾಲ (monsoon season) ಬಂದರೂ ರಸ್ತೆಗೆ ಕಾಯಕಲ್ಪ ಕಲ್ಪಿಸಬೇಕೆನ್ನುವ ಯೋಚನೆ ರಾಜಕಾರಣಗಳಿಗೆ ಬಂದಿಲ್ಲ. ಅಂದಹಾಗೆ, ಇದು ಶೃಂಗೇರಿಯಿಂದ ಕಳಸಕ್ಕೆ ಸಂಪರ್ಕ ಒದಗಿಸುವ ಹೆಗ್ಗಾರು ಕುಡಿಗೆ (Heggaru Kudige) ಹೆಸರಿನ ಗ್ರಾಮದ ಬಳಿಯ ರಸ್ತೆ. ಈ ಊರು ಹೊರನಾಡು ಮತ್ತು ಶೃಂಗೇರಿ ಮಧ್ಯಭಾಗದಲ್ಲಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಭಾಗದಲ್ಲಿ ಮಳೆ ಸತತವಾಗಿ ಸುರಿಯುತ್ತಿರುವುದರಿಂದ ರಸ್ತೆ ಯಾವುದೇ ಸಮಯ ಕುಸಿಯುವಂತಿದೆ. ಲೋಕೋಪಯೋಗಿ ಇಲಾಖೆ ಒಳಚರಂಡಿ ವ್ಯವಸ್ಥೆ ಮಾಡದ ಕಾರಣ ರಸ್ತೆಯ ಸ್ಥಿತಿಯ ಹೀಗಾಗಿದೆ ಎಂದು ಒಬ್ಬ ಸ್ಥಳೀಯ ಹೇಳುತ್ತಾರೆ. ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುವುದರಿಂದ ಜಿಲ್ಲಾಡಳಿತ ಮತ್ತು ಸ್ಥಳೀಯ ರಾಜಕಾರಣಿಗಳು ಕೂಡಲೇ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗಬೇಕಿದೆ.
ಮತ್ತಷ್ಟು ವಿಡಿಯೋಅ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ