ಹೌಸ್ಫುಲ್ ಪ್ರದರ್ಶನಕ್ಕೆ ಸರ್ಕಾರದ ಗ್ರೀನ್ ಸಿಗ್ನಲ್; ಶ್ರೀನಿ, ಡಾರ್ಲಿಂಗ್ ಕೃಷ್ಣ ಮೊದಲ ಪ್ರತಿಕ್ರಿಯೆ ಇಲ್ಲಿದೆ..
ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಕ್ಯುಪೆನ್ಸಿಗೆ ಅವಕಾಶ ನೀಡಿರುವುದು ‘ಓಲ್ಡ್ ಮಾಂಕ್’, ‘ಲವ್ ಮಾಕ್ಟೇಲ್ 2’ ಮುಂತಾದ ಚಿತ್ರತಂಡಗಳಿಗೆ ಖುಷಿ ನೀಡಿದೆ. ಆ ಬಗ್ಗೆ ಶ್ರೀನಿ, ಡಾರ್ಲಿಂಗ್ ಕೃಷ್ಣ ಪ್ರತಿಕ್ರಿಯಿಸಿದ್ದಾರೆ.
ಕೊರೊನಾ ವೈರಸ್ ಕಾರಣದಿಂದ ಚಿತ್ರರಂಗ ಸಂಕಷ್ಟಕ್ಕೆ ಸಿಲುಕಿತ್ತು. ಚಿತ್ರಮಂದಿರದಲ್ಲಿ ಕೇವಲ ಶೇ.50ರಷ್ಟು ಆಕ್ಯುಪೆನ್ಸಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ ಈಗ ಮೂರನೇ ಅಲೆಯ ಹಾವಳಿ ಕಡಿಮೆ ಆಗುತ್ತಿರುವುದರಿಂದ ಆ ನಿರ್ಬಂಧವನ್ನು ತೆಗೆದು ಹಾಕಲಾಗಿದೆ. ಹೌಸ್ಫುಲ್ ಪ್ರದರ್ಶನಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ಸಂಭ್ರಮದಲ್ಲಿ ‘ಓಲ್ಡ್ ಮಾಂಕ್’ ಸಿನಿಮಾದ ನಿರ್ದೇಶಕ/ನಟ ಶ್ರೀನಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ‘ಲವ್ ಮಾಕ್ಟೇಲ್ 2’ ಚಿತ್ರದ ನಟ ಕಮ್ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಅವರು ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಫೆ.11ರಂದು ‘ಲವ್ ಮಾಕ್ಟೇಲ್ 2’ ಬಿಡುಗಡೆ ಆಗುತ್ತಿದೆ. ‘ಓಲ್ಡ್ ಮಾಂಕ್’ ಚಿತ್ರ ಫೆ.25ರಂದು ಎಲ್ಲಡೆ ತೆರೆಕಾಣುತ್ತಿದೆ. ಈ ಸಂದರ್ಭದಲ್ಲಿ ಚಿತ್ರಮಂದಿರಗಳು ತುಂಬ ಸೇಫ್ ಆಗಿವೆ ಎಂದು ಶ್ರೀನಿ ಹೇಳಿದ್ದಾರೆ. ‘ನೆಮ್ಮದಿಯಿಂದ ಜನರು ಸಿನಿಮಾ ನೋಡಬಹುದು. ಶೇ.100 ಆಕ್ಯುಪೆನ್ಸಿಗೆ ಅವಕಾಶ ನೀಡಿದ್ದಾರೆ ಎಂದರೆ ಕೇಸ್ ಕಡಿಮೆ ಆಗಿದೆ ಎಂದೇ ಅರ್ಥ. ಪಿವಿಆರ್ ಚಿತ್ರಮಂದಿರದಲ್ಲಿ ವೈರಸ್ ಬಾರದಂತೆ ವ್ಯವಸ್ಥೆ ಮಾಡಿರುವುದನ್ನು ನಾನು ಕಂಡಿದ್ದೇನೆ’ ಎಂದು ಶ್ರೀನಿ ಹೇಳಿದ್ದಾರೆ.
ಇದನ್ನೂ ಓದಿ:
‘ಓಲ್ಡ್ ಮಾಂಕ್’ ಬಿಡುಗಡೆಗೆ ದಿನಾಂಕ ಫಿಕ್ಸ್; ಫೆ.25ಕ್ಕೆ ತೆರೆಕಾಣಲಿದೆ ಶ್ರೀನಿ, ಅದಿತಿ ಪ್ರಭುದೇವ ಸಿನಿಮಾ
ಪುನೀತ್ ನೋಡಿ ಮೆಚ್ಚಿದ್ರು ಕನ್ನಡದ ‘ಓಲ್ಡ್ ಮಾಂಕ್’ ಟ್ರೇಲರ್; ಇದರಲ್ಲಿದೆ ಹತ್ತಾರು ವಿಶೇಷತೆ