ಐದು ದಶಕಗಳ ಸುದೀರ್ಘ ರಾಜಕೀಯ ಬದುಕಿನಲ್ಲಿ ಶ್ರೀನಿವಾಸ ಪ್ರಸಾದ್ ಶೋಷಿತವರ್ಗದ ಧ್ವನಿಯಾಗಿದ್ದರು: ಜಿಟಿ ದೇವೇಗೌಡ

ಐದು ದಶಕಗಳ ಸುದೀರ್ಘ ರಾಜಕೀಯ ಬದುಕಿನಲ್ಲಿ ಶ್ರೀನಿವಾಸ ಪ್ರಸಾದ್ ಶೋಷಿತವರ್ಗದ ಧ್ವನಿಯಾಗಿದ್ದರು: ಜಿಟಿ ದೇವೇಗೌಡ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 29, 2024 | 11:34 AM

ಕಳೆದ ವರ್ಷವಷ್ಟೇ ಅವರು ಮೈಸೂರಲ್ಲಿ ಪುಸ್ತಕವೊಂದನ್ನು ಬಿಡುಗಡೆ ಮಾಡಿ ತಮ್ಮ ಸುದೀರ್ಘ ರಾಜಕೀಯ ಬದುಕಿಗೆ ವಿದಾಯ ಹೇಳಿದ್ದರು. ವಿದ್ಯಾರ್ಥಿಯಿಂದ ದೆಸೆಯಿಂದಲೇ ರಾಜಕೀಯಕ್ಕೆ ಧುಮುಕಿದ ಶ್ರೀನಿವಾಸ ಪ್ರಸಾದ್, 1980 ರಲ್ಲಿ ಮೊದಲ ಬಾರಿಗೆ ಲೋಕಸಭೆಯನ್ನು ಪ್ರವೇಶಿಸಿದರು ಎಂದು ದೇವೇಗೌಡ ಹೇಳಿದರು.

ಮೈಸೂರು: ಇಂದು ಬೆಳಗ್ಗೆ ವಿಧಿವಶರಾದ ಸಂಸದ ವಿ ಶ್ರೀನಿವಾಸ ಪ್ರಸಾದ್ (V Srinivas Prasad) ಅವರೊಂದಿಗೆ ದಶಕಗಳ ಕಾಲ ಒಡನಾಟ ಹೊಂದಿದ್ದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ (GT Devegowda) ಇಂದು ನಗರದಲ್ಲಿರುವ ಪ್ರಸಾದ ಮನೆಗೆ ತೆರಳಿ ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ದೇವೇಗೌಡರು, 50 ವರ್ಷಗಳಷ್ಟು ಕಾಲ ಜನನಾಯಕನಾಗಿ ಕೆಲಸ ಮಾಡಿದ ಪ್ರಸಾದ್ ಅವರು ಶೋಷಿತರ ಧ್ವನಿಯಾಗಿದ್ದರು (voice of downtrodden) ಮತ್ತು ಅವರಲ್ಲಿ ಶಕ್ತಿ ತುಂಬವ ಕೆಲಸ ಮಾಡಿದ್ದರು, ಅವರ ಸಾವು ಆಘಾತವನ್ನುಂಟು ಮಾಡಿದೆ ಎಂದರು. ಕಳೆದ ವರ್ಷವಷ್ಟೇ ಅವರು ಮೈಸೂರಲ್ಲಿ ಪುಸ್ತಕವೊಂದನ್ನು ಬಿಡುಗಡೆ ಮಾಡಿ ತಮ್ಮ ಸುದೀರ್ಘ ರಾಜಕೀಯ ಬದುಕಿಗೆ ವಿದಾಯ ಹೇಳಿದ್ದರು. ವಿದ್ಯಾರ್ಥಿಯಿಂದ ದೆಸೆಯಿಂದಲೇ ರಾಜಕೀಯಕ್ಕೆ ಧುಮುಕಿದ ಶ್ರೀನಿವಾಸ ಪ್ರಸಾದ್, 1980 ರಲ್ಲಿ ಮೊದಲ ಬಾರಿಗೆ ಲೋಕಸಭೆಯನ್ನು ಪ್ರವೇಶಿಸಿದರು ಎಂದು ದೇವೇಗೌಡ ಹೇಳಿದರು. 2013 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಕಂದಾಯ ಸಚಿವರಾಗಿದ್ದ ಅವರು ರೈತರಿಗೆ ನೆರವಾಗುವ ಅನೇಕ ಕೆಲಸ ಮಾಡಿದರಲ್ಲದೆ ಮೈಸೂರು ನಗರದಲ್ಲಿ ಹೊಸ ಜಿಲ್ಲಾಧಿಕಾರಿಗಳ ಕಟ್ಟಡ ತಲೆಯೆತ್ತುವಲ್ಲಿ ಪ್ರಮುಖ ಪಾತ್ರವಹಿಸಿದರೆಂದು ದೇವೇಗೌಡ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಓದಿ:   ಕುಮಾರಸ್ವಾಮಿ ಧರಿಸಿದ್ದು ಬಿಜೆಪಿ ಚಿಹ್ನೆಯಿರುವ ಕೇಸರಿ ಶಲ್ಯ ಅಲ್ಲವೇ ಅಲ್ಲ, ನಮ್ಮ ತತ್ವಸಿದ್ಧಾಂತಗಳೇ ಬೇರೆ: ಜಿಟಿ ದೇವೇಗೌಡ