ಯಾವಾಗ ಬರಲಿದೆ ‘ಮಜಾ ಟಾಕೀಸ್’ ಹೊಸ ಸೀಸನ್? ಉತ್ತರ ನೀಡಿದ ಸೃಜನ್ ಲೋಕೇಶ್
‘ನನ್ನಮ್ಮ ಸೂಪರ್ ಸ್ಟಾರ್ 3’ ಕಾರ್ಯಕ್ರಮದ ಸೆಟ್ನಲ್ಲಿ ಮಾತಿಗೆ ಸಿಕ್ಕ ಸೃಜನ್ ಲೋಕೇಶ್ ಅವರು ಹಲವು ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಮಜಾ ಟಾಕೀಸ್’ ಹೊಸ ಸೀಸನ್ ಯಾವಾಗ ಆರಂಭ ಆಗಲಿದೆ ಎಂಬ ಪ್ರಶ್ನೆ ಅವರಿಗೆ ಕೇಳಲಾಗಿದೆ. ಅದಕ್ಕೆ ಸೃಜನ್ ಲೋಕೇಶ್ ನೀಡಿದ ಉತ್ತರ ಏನು ಎಂಬುದನ್ನು ತಿಳಿಯಲು ಈ ವಿಡಿಯೋ ನೋಡಿ..
ನಟನಾಗಿ, ನಿರೂಪಕನಾಗಿ, ಕಿರುತೆರೆ ಕಾರ್ಯಕ್ರಮದ ಜಡ್ಜ್ ಆಗಿ ಸೃಜನ್ ಲೋಕೇಶ್ ಅವರು ಜನರಿಗೆ ಹತ್ತಿರ ಆಗಿದ್ದಾರೆ. ಈಗ ಅವರು ‘ನನ್ನಮ್ಮ ಸೂಪರ್ ಸ್ಟಾರ್ 3’ (Nannamma Super Star 3) ಶೋನಲ್ಲಿ ಜಡ್ಜ್ ಆಗಿದ್ದಾರೆ. ಈ ಕಾರ್ಯಕ್ರಮ ಫಿನಾಲೆ ಹಂತ ತಲುಪುತ್ತಿದೆ. ‘ನನ್ನಮ್ಮ ಸೂಪರ್ ಸ್ಟಾರ್ 3’ ಶೂಟಿಂಗ್ ಸೆಟ್ನಲ್ಲಿ ಸೃಜನ್ ಲೋಕೇಶ್ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಈ ವೇಳೆ ‘ಮಜಾ ಟಾಕೀಸ್’ (Majaa Talkies) ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. ‘ಅದರ ಬಗ್ಗೆ ಪ್ಲ್ಯಾನ್ ಇದೆ. ಆದರೆ ಯಾವಾಗ ಬರುತ್ತೆ ಅನ್ನೋದು ಗೊತ್ತಿಲ್ಲ. ಎಲೆಕ್ಷನ್ ನಡೆಯುತ್ತಿದೆ, ಐಪಿಎಲ್ ಇದೆ, ಟಿ20 ವಿಶ್ವಕಪ್ ಬರಲಿದೆ.. ಇವುಗಳ ನಡುವೆ ಯಾವ ಶೋ ಮೊದಲು ಮಾಡಬೇಕು ಎಂಬ ಬಗ್ಗೆ ವಾಹಿನಿಯವರು ರಿಸರ್ಚ್ ಮಾಡುತ್ತಿದ್ದಾರೆ. ಬಿಗ್ ಬಾಸ್ ಇರುತ್ತೆ, ಅನುಬಂಧ ಅವಾರ್ಡ್ಸ್ ಬರುತ್ತದೆ. ಇದೆಲ್ಲದರ ಬಗ್ಗೆ ವಾಹಿನಿಯವರು ನಿರ್ಧಾರ ಮಾಡಬೇಕು’ ಎಂದು ಸೃಜನ್ ಲೋಕೇಶ್ (Srujan Lokesh) ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.