ಫಿನಾಲೆ ಹಂತದಲ್ಲಿ ‘ನನ್ನಮ್ಮ ಸೂಪರ್ ಸ್ಟಾರ್ 3’; ಏನಂತಾರೆ ಸೃಜನ್ ಲೋಕೇಶ್?
‘ನನ್ನಮ್ಮ ಸೂಪರ್ ಸ್ಟಾರ್ 3’ ಈಗ ಫಿನಾಲೆ ಹಂತವನ್ನು ಸಮೀಪಿಸಿದೆ. ಕಾರ್ಯಕ್ರಮದ ಜಡ್ಜಸ್ ಆದಂತಹ ಸೃಜನ್ ಲೋಕೇಶ್, ಅನು ಪ್ರಭಾಕರ್, ತಾರಾ ಅನುರಾಧಾ ಅವರು ಈ ಬಗ್ಗೆ ಮಾತನಾಡಿದ್ದಾರೆ. ಶೂಟಿಂಗ್ ಸೆಟ್ನಲ್ಲೇ ಶೋ ಬಗ್ಗೆ ಕೆಲವು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ. ಆ ವಿಡಿಯೋ ಇಲ್ಲಿದೆ..
ಮಕ್ಕಳ ಮೂಲಕ ಮನರಂಜನೆ ನೀಡುವ ‘ನನ್ನಮ್ಮ ಸೂಪರ್ ಸ್ಟಾರ್’ (Nannamma Super Star) ಶೋಗೆ ದೊಡ್ಡ ಪ್ರೇಕ್ಷಕ ವರ್ಗ ಇದೆ. ಈಗ ಇದರ ಮೂರನೇ ಸೀಸನ್ ನಡೆಯುತ್ತಿದೆ. ‘ಕಲರ್ಸ್ ಕನ್ನಡ’ (Colors Kannada) ವಾಹಿನಿಯ ಈ ಜನಪ್ರಿಯ ಕಾರ್ಯಕ್ರಮ ಈಗ ಫಿನಾಲೆ ಸಮೀಪಿಸುತ್ತಿದೆ. ‘ಮೂರು ಸೀಸನ್ಗಳನ್ನು ಮಾಡಿರುವುದು ಸುಲಭವಲ್ಲ. ಒಂದೇ ಮಾದರಿಯ ಕಾರ್ಯಕ್ರಮವನ್ನು ಜನರು ನೋಡಿ ಒಪ್ಪಿಕೊಂಡಿದ್ದಾರೆ ಎಂದಾಗ ಅವರಿಗೆ ಇನ್ನೂ ಜಾಸ್ತಿ ಮನರಂಜನೆ ನೀಡಬೇಕು ಎಂಬ ನಮ್ಮ ಜವಾಬ್ದಾರಿ ಹೆಚ್ಚಾಗುತ್ತದೆ. ಈ ಸೀಸನ್ನಲ್ಲಿ ನಮಗೆ ಸಿಕ್ಕ ಮಕ್ಕಳು ತುಂಬ ಚೂಟಿ ಆಗಿದ್ದಾರೆ. ಫಿನಾಲೆ ಹಂತಕ್ಕೆ ಬಂದಿದ್ದೇವೆ. ಆರು ಜನ ಯಾರು ಫೈನಲಿಸ್ಟ್ ಆಗುತ್ತಾರೆ ಎಂಬ ಕುತೂಹಲ ನಮಗೂ ಇದೆ’ ಎಂದು ಸೃಜನ್ ಲೋಕೇಶ್ (Srujan Lokesh) ಹೇಳಿದ್ದಾರೆ. ‘ಇಲ್ಲಿ ಮಕ್ಕಳ ಜೊತೆ ಇರಲು ಯಾವಾಗಲೂ ಖುಷಿ ಆಗುತ್ತದೆ. ಮಕ್ಕಳ ಜೊತೆ ಇದ್ದಾಗ ಒಂದಲ್ಲಾ ಒಂದು ಹೊಸದು ಕಲಿಯುತ್ತೇವೆ. ಮೂರು ಸೀಸನ್ನಲ್ಲೂ ಕಲಿತಿದ್ದೇನೆ. ಆ ಬಗ್ಗೆ ನನಗೆ ಸಾರ್ಥಕ ಭಾವನೆ ಇದೆ’ ಎಂದು ನಟಿ ತಾರಾ ಅನುರಾಧಾ ಹೇಳಿದ್ದಾರೆ. ‘ಇದು ನನಗೆ ತುಂಬ ಒಳ್ಳೆಯ ಅನುಭವ. ಹಲವು ವರ್ಷಗಳ ಬಳಿಕ ನಾನು ಕಿರುತೆರೆಗೆ ವಾಪಸ್ ಬಂದಿದ್ದೇ ಈ ಶೋ ಮೂಲಕ. ಮೂರು ಸೀಸನ್ ಮೂಲಕ ಕರುನಾಡಿನ ಜನರ ಮನಸ್ಸು ಗೆದ್ದಿದ್ದೇವೆ’ ಎಂದು ನಟಿ ಅನು ಪ್ರಭಾಕರ್ ಹೇಳಿದ್ದಾರೆ. ನಟಿ ಸುಷ್ಮಾ ಕೆ. ರಾವ್ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.