ಮಜಾ ಟಾಕೀಸ್ ಆಧಾರ ಸ್ತಂಭವಾಗಿದ್ದ ಅಪರ್ಣಾ ಪಾರ್ಥೀವ ಶರೀರದ ಮುಂದೆ ಸೃಜನ್ ಲೋಕೇಶ್ ಭಾವುಕ!

|

Updated on: Jul 12, 2024 | 1:41 PM

ಶ್ವಾಸಕೋಶದ ಕ್ಯಾನ್ಸರ್ ನಿಂದ ನರಳಿ ಅದರೊಂದಿಗೆ ಧೈರ್ಯದಿಂದ ಹೋರಾಡಿ ಕೊನೆಗೆ ಸೋಲನ್ನಪ್ಪಿದ ಅಪರ್ಣಾ ಅವರ ಕನ್ನಡ ನಿರೂಪಣೆಗೆ ಮರುಳಾಗದವರಿಲ್ಲ. ಭಾಷೆಯ ಮೇಲೆ ಅವರಿಗಿದ್ದ ಹಿಡಿತ, ಶಬ್ದಗಳ ಸ್ಪಷ್ಟ ಉಚ್ಛಾರಣೆ ಕೇಳುಗರನ್ನು ಮಂತ್ರಮುಗ್ಧಗೊಳಿಸುತಿತ್ತು. ಅವರ ನಿರೂಪಣೆಯಲ್ಲಿ ಕಿರುಚಾಟ ಇರುತ್ತಿರಲಿಲ್ಲ. ಹೇಳಬೇಕಾಗಿದ್ದನ್ನು ಸೌಮ್ಯವಾಗಿ ಮನಮುಟ್ಟುವಂತೆ ಹೇಳುತ್ತಿದ್ದರು.

ಬೆಂಗಳೂರು: ನಿರೂಪಣೆ ಕೆಲಸ ಎಲ್ಲೇ ಅಗಲಿ ಯಾವುದೇ ಆಗಿರಲಿ ಅದಕ್ಕೊಂದು ಹೊಸ ಭಾಷ್ಯ ಬರೆದ ಅಪರ್ಣಾ ಅವರ ಅಗಲಿಕೆಯಿಂದ ಕನ್ನಡನಾಡು ಶೋಕಸಾಗರದಲ್ಲಿ ಮುಳುಗಿದೆ. ಕನ್ನಡ ವಾಹಿನಿಯೊಂದರಲ್ಲಿ ಬಿತ್ತರವಾಗುವ ಮಜಾ ಟಾಕೀಸ್ ಗೆ ಅವರ ಸೇರ್ಪಡೆಯಾದ ಬಳಿಕ ಅದರ ಜನಪ್ರಯತೆ ಮುಗಿಲು ಮುಟ್ಟಿದ್ದು ಸುಳ್ಳಲ್ಲ. ಮಜಾ ಟಾಕೀಸ್ ತಂಡದ ಸೃಜನ್ ಲೋಕೇಶ್, ಶ್ವೇತಾ ಚೆಂಗಪ್ಪ ಮತ್ತು ಇತರರು ಅಪರ್ಣಾ ಅವರ ಅಂತಿಮ ಶರೀರದ ಅಂತಿಮ ದರ್ಶನ ಪಡೆಯುವಾಗ ತೀರ ಭಾವುಕರಾಗಿಬಿಟ್ಟರು. ದೃಶ್ಯಗಳಲ್ಲಿ ಸೃಜನ್ ಲೋಕೇಶ್ ಅವರು ತದೇಕ ದೃಷ್ಟಿಯಿಂದ ಅಪರ್ಣಾರ ಕಳೇಬರದ ಕಡೆ ನೋಡುತ್ತಿರುವುದನ್ನು ಗಮನಿಸಬಹುದು. ಖ್ಯಾತ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಸಹ ಅಗಲಿದ ಅಪರೂಪದ ಕಲಾವಿದೆಗೆ ಶ್ರದ್ಧಾಂಜಲಿ ಸಲ್ಲಿಸಿದರು. ಸೃಜನ್ ಅವರು ನಾಗರಾಜ್ ಅವರಿಗೆ ಪ್ರಾಯಶಃ ಮಜಾ ಟಾಕೀಸ್ ಸೆಟ್ ನಲ್ಲಿ ಹೇಗೆ ಅಪರ್ಣಾ ಚೈತನ್ಯದ ಚಿಲುಮೆಯಾಗಿ ಲವಲವಿಕೆಯಿಂದ ಓಡಾಡುತ್ತಿದ್ದರು ಅನ್ನೋದನ್ನು ವಿವರಿಸುತ್ತಿರಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಅಪರ್ಣಾ ದೊಡ್ಡ ಸಿನಿಮಾ ನಟಿ ಆಗಬಹುದಿತ್ತು, ಆದರೆ…: ಬಾಲ್ಯದ ಗೆಳೆಯ ರವೀಂದ್ರನಾಥ್ ಮಾತು