SSLC Topper: ಉತ್ತಮ ರಿಸಲ್ಟ್ ಬರೋದು ಖಾತ್ರಿಯಿತ್ತು, ಅದರೆ ಶತ ಪತ್ರಿಶತ ಅಂಕ ಪಡೆಯುವ ನಿರೀಕ್ಷೆ ಇರಲಿಲ್ಲ!: ಭೂಮಿಕ ಪೈ, ಎಸ್ಎಸ್ಎಲ್ಸಿ ಟಾಪರ್
ಶಾಲೆಯಲ್ಲಿ ಶಿಕ್ಷಕರು ಬೋಧಿಸಿದ್ದನ್ನು ಆಯಾ ದಿನದಂದೇ ಓದಿಕೊಳ್ಳುತ್ತಿದ್ದೆ ಎಂದು ಹೇಳುವ ಭೂಮಿಕ ಪಿಯು ವ್ಯಾಸಂಗಕ್ಕೆ ವಿಜ್ಞಾನ ಸ್ಟ್ರೀಮ್ ಆಯ್ದುಕೊಳ್ಳುವುದಾಗಿ ಹೇಳುತ್ತಾಳೆ.
ಉಡುಪಿ: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಟಾಪರ್ ಅಗುವುದರ ಜೊತೆಗೆ ಶತ ಪ್ರತಿಶತದಷ್ಟು ಅಂಕ ಪಡೆದು ಪೋಷಕರನ್ನು ಹೆಮ್ಮೆಯಿಂದ ಬೀಗುವಂತೆ ಮಾಡಿರುವ ಭೂಮಿಕ ಪೈ (Bhumika) ತನ್ನ ಸಂಭ್ರಮವನ್ನು ಟಿವಿ9 ಕನ್ನಡ ವಾಹಿನಿಯೊಂದಿಗೆ ಹಂಚಿಕೊಂಡಿದ್ದಾಳೆ. ಉಡುಪಿಯಲ್ಲಿರುವ ಅಜ್ಜಿ (grandmother) ಮನೆಗೆ ಹೋಗಿರುವ ಭೂಮಿಕ ಬೆಂಗಳೂರಿನ ನ್ಯೂ ಮೆಕಾಲೆ ಇಂಗ್ಲಿಷ್ ಪ್ರೌಢ ಶಾಲೆಯ (New Macaulay School) ವಿದ್ಯಾರ್ಥಿನಿ. ಆಕೆಯ ತಂದೆತಾಯಿಗಳು ಉಡುಪಿಯವರು. ಬೆಂಗಳೂರಲ್ಲಿ ಓದಿದ್ದರೂ ಭೂಮಿಕಾ ಭಾಷೆ ಉಡುಪಿಯವರಂತಿದೆ. ಶಾಲೆಯಲ್ಲಿ ಶಿಕ್ಷಕರು ಬೋಧಿಸಿದ್ದನ್ನು ಆಯಾ ದಿನದಂದೇ ಓದಿಕೊಳ್ಳುತ್ತಿದ್ದೆ ಎಂದು ಹೇಳುವ ಭೂಮಿಕ ಪಿಯು ವ್ಯಾಸಂಗಕ್ಕೆ ವಿಜ್ಞಾನ ಸ್ಟ್ರೀಮ್ ಆಯ್ದುಕೊಳ್ಳುವುದಾಗಿ ಹೇಳುತ್ತಾಳೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಶಿಕ್ಷಣ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ