ಬೀದರ್: ಜನಿವಾರ ಧರಿಸಿದ್ದಕ್ಕೆ ಸಿಈಟಿ ಬರೆಯಲು ವಿದ್ಯಾರ್ಥಿಗೆ ನಿರಾಕರಣೆ, ನ್ಯಾಯ ಕೇಳುತ್ತಿರುವ ಯುವಕನ ಅಮ್ಮ

Updated on: Apr 18, 2025 | 2:23 PM

ಖಾಸಗಿ ಕಾಲೇಜುಗಳಲ್ಲಿ ಫೀಸ್ ಕಟ್ಟಲಾಗಲ್ಲ ನನ್ನ ಮಗನಿಗೆ ಸರ್ಕಾರೀ ಇಂಜಿನೀಯರಿಂಗ್ ಕಾಲೇಜಲ್ಲಿ ಸೀಟು ಕೊಡಲೇ ಬೇಕು ಅಂತ ಯುವಕನ ತಾಯಿ ಕಣ್ಣೀರು ಹಾಕುತ್ತಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಘಟನೆಯನ್ನು ಖಂಡಿಸಿದ್ದಾರೆ, ಅಕ್ಷಮ್ಯ ಪ್ರಮಾದವೆಸಗಿರುವ ಕಾಲೇಜು ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಮತ್ತು ಯವಕನಿಗೆ ತೊಂದರೆಯಾಗದಂತೆ ಆಧಿಕಾರಿಗಳ ಜೊತೆ ಮಾತಾಡಿ ಪರಿಹಾರ ಸೂಚಿಸುವುದಾಗಿ ಹೇಳಿದ್ದಾರೆ.

ಬೀದರ್, ಏಪ್ರಿಲ್ 18: ಬೀದರ್ ನಗರದ ಈ ನಿವಾಸಿಯ ಗೋಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (Karnataka Examination Authority)  ಅರ್ಥವಾದೀತೆ? ಅದು ನಡೆಸುವ ಸಿಈಟಿಯನ್ನು ಬಹಳಷ್ಟು ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳು ಬರೆದಿರುತ್ತಾರೆ, ಅದರೆ ಇವರ ಮಗನಿಗೆ ಆಗಿರುವ ಅನ್ಯಾಯ ಬೇರೆ ಯಾವುದೇ ಬ್ರಾಹ್ಮಣ ವಿದ್ಯಾರ್ಥಿಗೆ ಅಗಿರಲಾರದು. ಬೀದರ್ ಖಾಸಗಿ ಕಾಲೇಜೊಂದರ ಸಿಬ್ಬಂದಿಯ ಘೋರ ಮೂರ್ಖತನ ಇದು. ಇವರ ಮಗ ಜನಿವಾರ ಧರಿಸಿದ್ದ ಕಾರಣಕ್ಕೆ ಅವನಿಗೆ ಸಿಈಟಿ ಗಣಿತ ಪರೀಕ್ಷೆ ಬರೆಯಲು ಬಿಟ್ಟಿಲ್ಲ. ಜನಿವಾರ ತೆಗೆಯಲು ಒಪ್ಪದ ವಿದ್ಯಾರ್ಥಿಯನ್ನು ವಾಪಸ್ಸು ಕಳಿಸಲಾಗಿದೆಯಂತೆ.

ಇದನ್ನೂ ಓದಿ:  ಕರ್ನಾಟಕ ಸಿಇಟಿ ಪರೀಕ್ಷೆ ಮತ್ತು ಜನಿವಾರ ವಿವಾದ: ಈವರೆಗೆ ನಡೆದಿದ್ದೇನು? ಇಲ್ಲಿದೆ ವಿವರ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ