ವಂದೇ ಭಾರತ್ ರೈಲಿನಲ್ಲಿ ಸಸ್ಯಹಾರಿ ಪ್ರಯಾಣಿಕನಿಗೆ ಮಾಂಸಾಹಾರ ನೀಡಿದ ಸಿಬ್ಬಂದಿಗೆ ಕಪಾಳಮೋಕ್ಷ
ವಂದೇ ಭಾರತ್ ರೈಲಿನಲ್ಲಿ ಸಸ್ಯಹಾರಿ ಪ್ರಯಾಣಿಕನಿಗೆ ಮಾಂಸಾಹಾರ ನೀಡಿದ ಘಟನೆಯೊಂದು ನಡೆದಿದೆ, ತಪ್ಪಾಗಿ ಮಾಂಸಾಹಾರ ತಂದುಕೊಟ್ಟಿದ್ದು, ಅದನ್ನು ಪ್ರಯಾಣಿಕ ತಿಂದಿದ್ದಾರೆ. ಇದರಿಂದ ಕೋಪಗೊಂಡ ಪ್ರಯಾಣಿಕ ಕಪಾಳಮೋಕ್ಷ ಮಾಡಿದ್ದಾರೆ. ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಂದೇ ಭಾರತ್ ಎಕ್ಸ್ಪ್ರಸ್ ರೈಲಿನಲ್ಲಿ ಪ್ರಯಾಣಿಕರು ಮತ್ತು ಆಹಾರ ವಿತರಕ ಸಿಬ್ಬಂದಿ ನಡುವೆ ದೊಡ್ಡ ಜಗಳ ನಡೆದಿದೆ. ಪ್ರಯಾಣಿಕರೊಬ್ಬರು ಆಹಾರ ಬಡಿಸುತ್ತಿದ್ದ ಆಹಾರ ವಿತರಕ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ್ದಾರೆ. ಇದೀಗ ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಜುಲೈ 26ರಂದು ನಡೆದಿದ್ದು, ಆದರೆ ಈ ವಿಡಿಯೋ ಈಗ ವೈರಲ್ ಆಗಿದೆ. ಹೌರಾ ಮತ್ತು ರಾಂಚಿ ನಡುವೆ ಪ್ರಯಾಣಿಸುತ್ತಿದ್ದ ವಂದೇ ಭಾರತ್ ಎಕ್ಸ್ಪ್ರಸ್ ರೈಲಿನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಸಿಬ್ಬಂದಿ ಸಸ್ಯಹಾರಿ ಪ್ರಯಾಣಿಕರೊಬ್ಬರಿಗೆ ತಪ್ಪಾಗಿ ಮಾಂಸಾಹಾರಿ ಊಟವನ್ನು ಬಡಿಸಿದ್ದು, ಸಸ್ಯಹಾರಿ ಪ್ರಯಾಣಿಕ ಗೊತ್ತಿಲ್ಲದೆ ಅದನ್ನು ತಿನ್ನಲು ಪ್ರಾರಂಭಿಸಿದ್ದಾರೆ. ನಂತರ ಅದು ಸಸ್ಯಹಾರಿ ಅಲ್ಲ ಮಾಂಸ ಎಂದು ತಿಳಿದು ಕೋಪಗೊಂಡ ಪ್ರಯಾಣಿಕ ಸಿಬ್ಬಂದಿ ಮೇಲೆ ಕೈ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸಿಬ್ಬಂದಿ ಪ್ರಯಾಣಿಕರ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ. ಆದರೆ ಇದರಿಂದ ವೆಟರ್ ಕಣ್ಣೀರು ಹಾಕಿದ್ದಾರೆ, ನಂತರ ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ

ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್ಗೇನು ಗೊತ್ತು: ಕಾಶಪ್ಪನವರ್, ಶಾಸಕ

ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್

ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
