ಶಿರೂರು ಗುಡ್ಡ ಕುಸಿತ: ಟ್ರಕ್ ನದಿಯ 24 ಅಡಿ ಆಳದಲ್ಲಿದೆ, ಅದರಲ್ಲೊಂದು ದೇಹವಿದೆ: ಸ್ವಾಮೀಜಿ ಸ್ಫೋಟಕ ಭವಿಷ್ಯ
ಶಿರೂರು ಗುಡ್ಡ ದುರಂತ ಸ್ಥಳಕ್ಕೆ ಉಡುಪಿಯ ದ್ವಾರಕಾಮಯಿ ಮಠದ ಸಾಯಿ ಈಶ್ವರ್ ಗುರೂಜಿ ಭೇಟಿ ನೀಡಿದ್ದು, ಈ ವೇಳೆ ಪೆಂಡೋಲಮ್, ಎಲೆಕ್ಟ್ರಾನಿಕ್ ಸ್ಕ್ಯಾನಿಂಗ್ ಮೂಲಕ ಪರೀಕ್ಷಿಸಿದ್ದಾರೆ. ಬಳಿಕ ಲಾರಿ ಎಲ್ಲಿದೆ? ಎಷ್ಟು ಆಳದಲ್ಲಿ ಎನ್ನುವ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಕಾರವಾರ, (ಜುಲೈ 29): ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಈಗಾಗಲೇ 8 ಮೃತದೇಹಗಳು ಪತ್ತೆಯಾಗಿದ್ದು, ಇನ್ನು ಮೂವರ ಪತ್ತೆಗಾಗಿ ಕಳೆದ 15ದಿನಗಳಿಂದ ಹುಟುಕಾಟ ನಡೆಸಿದ್ದಾರೆ. ಇನ್ನು ದುರಂತ ಸ್ಥಳಕ್ಕೆ ಉಡುಪಿಯ ದ್ವಾರಕಾಮಯಿ ಮಠದ ಸಾಯಿ ಈಶ್ವರ್ ಗುರೂಜಿ ಭೇಟಿ ನೀಡಿ, 17 ಮೃತದೇಹ ಇವೆ. ಸದ್ಯ 8 ಮೃತದೇಹಗಳು ಪತ್ತೆ, ಇನ್ನೂ 9 ಶವಗಳು ಪತ್ತೆ ಆಗಬೇಕಿದೆ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. ಇನ್ನು ಇದೇ ವೇಳೆ ಕೇರಳದ ಅರ್ಜುನ ಚಲಾಯಿಸುತ್ತಿದ್ದ ಲಾರಿ ಎಲ್ಲಿದೆ ಎಂದು ಎಲೆಕ್ಟ್ರಾನಿಕ್ ಸ್ಕ್ಯಾನರ್ ಮೂಲಕ ನೋಡಿದ ಸ್ವಾಮೀಜಿ, ಗಂಗಾವಳಿ ನದಿಯಲ್ಲಿ 24 ಅಡಿ ಆಳದಲ್ಲಿ ಲಾರಿ ಇದೆ. ಟ್ರಕ್ ಇರುವ ಜಾಗದ ಬಳಿ ಒಂದು ಮೃತದೇಹ ಇದೆ. ಇನ್ನುಳಿದವರ ಮೃತದೇಹ ನದಿಯಲ್ಲಿ ಕೊಚ್ಚಿಹೋಗಿವೆ ಎಂದು ಸ್ವಾಮೀಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos