ನಟ ವಿಜಯ್ ರ‍್ಯಾಲಿಯಲ್ಲಿ ಕಾಲ್ತುಳಿತ: ದುರಂತಕ್ಕೆ ರಾಶಿಗಟ್ಟಲೇ ಚಪ್ಪಲಿಗಳು ಸಾಕ್ಷಿ!

Updated on: Sep 28, 2025 | 11:01 AM

ಕರೂರಿನಲ್ಲಿ ತಮಿಳು ನಟ ಮತ್ತು ತಮಿಳಿಗ ವಿಟ್ರಿ ಕಳಗಂ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ ಅವರ ರ‍್ಯಾಲಿಯಲ್ಲಿ ಶನಿವಾರ ಕಾಲ್ತುಳಿತ ಸಂಭವಿಸಿದೆ. ಈ ದುರ್ಘಟನೆಯಲ್ಲಿ 39 ಕ್ಕೂ ಅಧಿಕ ಸಾವುನೋವುಗಳು ಸಂಭವಿಸಿದ್ದು, ಎಲ್ಲೆಡೆ ಸ್ಮಶಾನ ಮೌನ ಆವರಿಸಿದೆ. ಈ ನಡುವೆ ದುಂತದ ಸಾಕ್ಷಿಯೆಂಬಂತೆ ಘಟನೆ ನಡೆದ ಸ್ಥಳದಲ್ಲಿ ಲೆಕ್ಕವಿಲ್ಲದಷ್ಟು ಚಪ್ಪಲಿಗಳ ರಾಶಿ ಕಂಡುಬಂದಿದೆ. ಅದ ವೀಡಿಯೋ ಇಲ್ಲಿದೆ ನೋಡಿ.

ತಮಿಳುನಾಡು, ಸೆಪ್ಟೆಂಬರ್ 28:ಶನಿವಾರ ಕರೂರಿನಲ್ಲಿ ಕಾಲಿವುಡ್ ನಟ ದಳಪತಿ ವಿಜಯ್ ಚುನಾವಣಾ ರ‍್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ ಸುಮಾರು 39ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಸಾಕಷ್ಟು ಜನರು ಗಾಯಗೊಂಡಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುರಂತ ಸಂಭವಿಸಿದ ಸ್ಥಳದಲ್ಲಿ ರಾಶಿಗಟ್ಟಲೇ ಚಪ್ಪಲಿಗಳು ಕಂಡುಬಂದವು. ಈ ದೃಶ್ಯ ನೋಡುತ್ತಿದ್ದರೆ ಸಾವಿನ ಕಥೆ ಹೇಳುವಂತಿದೆ. ವಿಡಿಯೋ ನೋಡಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Sep 28, 2025 10:59 AM