10 ಹುದ್ದೆಗೆ ನೂರಾರು ಯುವಕರ ನೂಕುನುಗ್ಗಲು; ಇಂಟರ್​ವ್ಯೂ ವೇಳೆ ಕಾಲ್ತುಳಿತದ ವಿಡಿಯೋ ವೈರಲ್

Updated on: Jul 11, 2024 | 10:00 PM

ಗುಜರಾತಿನ ಭರೂಚ್‌ನಲ್ಲಿ ಕೇವಲ 10 ಖಾಲಿ ಹುದ್ದೆಗಳಿಗೆ ಕೆಮಿಕಲ್ ಸಂಸ್ಥೆ ಥರ್ಮಾಕ್ಸ್ ಕಂಪನಿ ಆಯೋಜಿಸಿದ್ದ ಉದ್ಯೋಗ ಸಂದರ್ಶನಕ್ಕೆ ನೂರಾರು ಯುವಕರು ಆಗಮಿಸಿದ್ದರಿಂದ ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾಗಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ.

ಭರೂಚ್: ಗುಜರಾತ್​ನಲ್ಲಿ ಇಂಟರ್​ವ್ಯೂಗೆ ಬಂದಿದ್ದ ನಿರುದ್ಯೋಗಿಗಳ ತಳ್ಳಾಟದಿಂದ ನೂಕುನುಗ್ಗಲು ಉಂಟಾಗಿರುವ ಘಟನೆಯೊಂದು ನಡೆದಿದೆ. ಅಂತರ್ಜಾಲದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಹೆಚ್ಚಿನ ಸಂಖ್ಯೆಯ ಅರ್ಜಿದಾರರು ಹೋಟೆಲ್‌ಗೆ ಪ್ರವೇಶಿಸಲು ಹೆಣಗಾಡುತ್ತಿರುವುದನ್ನು ಕಾಣಬಹುದು. ಅಲ್ಲಿ ವಾಕ್-ಇನ್ ಸಂದರ್ಶನಗಳನ್ನು ನಡೆಸಲಾಯಿತು. ಈ ವೇಳೆ ಕೆಲವು ಯುವಕರು ಸೈಡ್ ರೇಲಿಂಗ್ ಮೇಲೆ ನಿಂತ ಕಾರಣ ಅದು ಮುರಿದುಹೋಯಿತು.

ಥರ್ಮಾಕ್ಸ್ ಅವರು ಅಂಕಲೇಶ್ವರದ ಲಾರ್ಡ್ಸ್ ಪ್ಲಾಜಾ ಹೋಟೆಲ್‌ನಲ್ಲಿ ಶಿಫ್ಟ್-ಇನ್-ಚಾರ್ಜ್, ಪ್ಲಾಂಟ್ ಆಪರೇಟರ್, ಸೂಪರ್‌ವೈಸರ್, ಫಿಟ್ಟರ್-ಮೆಕ್ಯಾನಿಕಲ್ ಮತ್ತು ಎಕ್ಸಿಕ್ಯೂಟಿವ್ (ಇಟಿಪಿ) ಹುದ್ದೆಗಳಿಗೆ ಸಂದರ್ಶನಗಳನ್ನು ನಡೆಸುತ್ತಿದ್ದರು. ಈ ವೇಳೆ ಈ ಘಟನೆ ನಡೆದಿದೆ. ಈ ವಿಡಿಯೋ ನಿರುದ್ಯೋಗದ ಸಮಸ್ಯೆಯನ್ನು ಎತ್ತಿ ತೋರಿಸುವಂತಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jul 11, 2024 09:48 PM
Follow Us
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More