Video: ಪರೀಕ್ಷಾರ್ಥ ಹಾರಾಟ ವೇಳೆ ಸಮುದ್ರಕ್ಕೆ ಅಪ್ಪಳಿಸಿದ ಸ್ಪೇಸ್​ಎಕ್ಸ್ನ ಅತ್ಯಂತ ಶಕ್ತಿಶಾಲಿ ರಾಕೆಟ್

Updated on: May 28, 2025 | 7:52 AM

ಎಲಾನ್ ಮಸ್ಕ್​ ಅವರ ಬಾಹ್ಯಾಕಾಶ ಕಂಪನಿ ಸ್ಪೇಸ್​ಎಕ್ಸ್(SpaceX)​ ಬುಧವಾರ ಮುಂಜಾನೆ 9ನೇ ಬಾರಿಗೆ ಚಂದ್ರ ಹಾಗೂ ಮಂಗಳ ಗ್ರಹಕ್ಕೆ ಮನುಷ್ಯರನ್ನು ಮತ್ತು ಸರಕುಗಳನ್ನು ಸಾಗಿಸಲು ವಿನ್ಯಾಸಗೊಳಿಸಲಾದ ದೈತ್ಯ ರಾಕೆಟ್​ ಅನ್ನು ಪರೀಕ್ಷಿಸಿತು. ಭಾರತೀಯ ಕಾಲಮಾನ ಬೆಳಗ್ಗೆ 5 ಗಂಟೆಗೆ ವಿಮಾನ ಹೊರಟಿತ್ತು ಅದಕ್ಕೆ ಸ್ಟಾರ್​ಶಿಪ್​ ಫ್ಲೈಟ್ 9 ಎಂದು ಹೆಸರಿಸಲಾಯಿತು. ರಾಕೆಟ್ ಎರಡು ಭಾಗಗಳಲ್ಲಿತ್ತು. ಮೇಲಿನ ಭಾರವಾದ ಭಾಗವನ್ನು ಸೂಪರ್ ಹೆವಿ ಎಂದು ಕರೆಯಲಾಗುತ್ತದೆ ಮತ್ತು ಕೆಳಗಿನ ಭಾಗವನ್ನು ಸ್ಟಾರ್​ಶಿಪ್ ಎಂದು ಕರೆಯಲಾಗುತ್ತದೆ.

ರಾಕೆಟ್​ನ ಮೇಲ್ಭಾಗ ವಿಫಲವಾಗಿದೆ. ಯಶಸ್ವಿಯಾಗಿ ಉಡಾವಣೆಯಾದ ನಂತರ ಭಾರವಾದ ರಾಕೆಟ್‌ನ ಕೆಳಗಿನ ಭಾಗವು ಸಮುದ್ರದಲ್ಲಿ ಇಳಿಯಿತು. ಎರಡೂ ಭಾಗಗಳನ್ನು ಬೇರ್ಪಡಿಸುವ ಪ್ರಕ್ರಿಯೆಯೂ ಸರಿಯಾಗಿ ಪೂರ್ಣಗೊಂಡಿತು. ಸಮುದ್ರದಲ್ಲಿ ಇಳಿಯಬೇಕಿದ್ದ ರಾಕೆಟ್‌ನ ಮೇಲ್ಭಾಗವು ಹಾರಾಟದ ಸುಮಾರು 30 ನಿಮಿಷಗಳ ನಂತರ ನಿಯಂತ್ರಣ ತಪ್ಪಿತು. ಈ ಭಾಗವು ತಿರುಗಲು ಪ್ರಾರಂಭಿಸಿತು ಮತ್ತು ಅಂತಿಮವಾಗಿ ಹಿಂದೂ ಮಹಾಸಾಗರಕ್ಕೆ ಬಿದ್ದು ನಾಶವಾಯಿತು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ