ಕೇಂದ್ರ ಸರ್ಕಾರದಿಂದ ನೆರವು ಪಡೆಯಲು ರಾಜ್ಯ ಸರ್ಕಾರದ ಅಪ್ರೋಚ್ ಸರಿಯಿರಬೇಕು: ಹೆಚ್ ಡಿ ಕುಮಾರಸ್ವಾಮಿ

|

Updated on: Feb 15, 2024 | 2:59 PM

ಮಾತು ಮುಂದುವರಿಸಿದ ಕುಮಾರಸ್ವಾಮಿ, ಅಗಲೂ ನರೇಂದ್ರ ಮೋದಿಯವರೇ ಪ್ರಧಾನ ಮಂತ್ರಿಯಾಗಿದ್ದರು ಮತ್ತು ಯಾವುದೇ ಸಮಸ್ಯೆಯಿಲ್ಲದೆ 100 ನರೇಗಾ ಕೆಲಸದ ದಿನಗಳನ್ನು 150 ಕ್ಕೆ ವಿಸ್ತರಿಸಿಕೊಂಡು ಬಂದಿದ್ದಾಗಿ ಹೇಳಿದರು. ಆಗ ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಈಗ್ಯಾಕೆ ನೀಡುತ್ತಿಲ್ಲ, ಅಂತ ಕೇಳಿದಾಗ, ಅದನ್ನು ನೀವು ಕೇಂದ್ರ ಸರ್ಕಾರವನ್ನು ಕೇಳಬೇಕು ಅನ್ನುತ್ತಾರೆ.

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿಯವರು (HD Kumaraswamy) ಸದನದಲ್ಲಿ ಮಾತಾಡಲು ಎದ್ದು ನಿಂತರೆ ಹಲವಾರು ವಿಷಯಗಳ ಬಗ್ಗೆ ಸುದೀರ್ಘವಾಗಿ ಮಾತಾಡುತ್ತಾರೆ. ಕೆಲ ಸಲ ಅವರ ಮಾತುಗಳು ಅತಾರ್ಕಿಕ ಅನಿಸುತ್ತವೆ. ಇವತ್ತು ನರೇಗಾ ಯೋಜನೆ (MGNREGA) ಅಡಿ ಕೆಲಸದ ದಿನಗಳನ್ನು 100 ರಿಂದ 150 ದಿನಗಳಿಗೆ ವಿಸ್ತರಿಸುವಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮಾಡಿರುವ ಮನವಿ ಬಗ್ಗೆ ಪ್ರಸ್ತಾಪಿಸಿ ಹಿಂದೆ ತಾನು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ (Congress-JDS alliance government) ಮುಖ್ಯಮಂತ್ರಿಯಾಗಿದ್ದಾಗ ಇದೇ ಪ್ರಸ್ತಾವನೆ ತೆಗೆದುಕೊಂಡು ದೆಹಲಿಗೆ ಹೋಗಿದ್ದೆ ಎಂದು ಹೇಳಿದರು. ಮಾತು ಮುಂದುವರಿಸಿದ ಕುಮಾರಸ್ವಾಮಿ, ಅಗಲೂ ನರೇಂದ್ರ ಮೋದಿಯವರೇ ಪ್ರಧಾನ ಮಂತ್ರಿಯಾಗಿದ್ದರು ಮತ್ತು ಯಾವುದೇ ಸಮಸ್ಯೆಯಿಲ್ಲದೆ 100 ನರೇಗಾ ಕೆಲಸದ ದಿನಗಳನ್ನು 150 ಕ್ಕೆ ವಿಸ್ತರಿಸಿಕೊಂಡು ಬಂದಿದ್ದಾಗಿ ಹೇಳಿದರು. ಆಗ ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಈಗ್ಯಾಕೆ ನೀಡುತ್ತಿಲ್ಲ, ಅಂತ ಕೇಳಿದಾಗ, ಅದನ್ನು ನೀವು ಕೇಂದ್ರ ಸರ್ಕಾರವನ್ನು ಕೇಳಬೇಕು ಅನ್ನುತ್ತಾರೆ.

ಅದ್ಹೇಗೆ ಬೇರೆ ಬೇರೆ ಮಾನದಂಡಗಳು ಸರ್? ಅನ್ನುತ್ತಾ ಎದ್ದು ನಿಂತು ಮಾತಾಡಿದ ಖರ್ಗೆ ರಾಜ್ಯ ಸರ್ಕಾರ ಮಾಡಿರುವ ಪ್ರಯತ್ನಗಳ ಬಗ್ಗೆ ವಿವರಿಸಿದರು. ಕೇಂದ್ರದ ಅಧಿಕಾರಿಗಳ ತಮ್ಮ ಮನವಿ ಪರಿಶೀಲನೆಯಲ್ಲಿದೆ ಅಂತ ಪತ್ರ ಕೂಡ ಬರೆದಾಗ್ಯೂ, ಇದೇ ವಿಷಯವನ್ನು ಮಂಡ್ಯದ ಸಂಸದೆ ಸಂಸತ್ತಿನಲ್ಲಿ ಪ್ರಸ್ತಾಪಿಸಿದಾಗ ಸಂಬಂಧಪಟ್ಟ ಸಚಿವರು, ಕರ್ನಾಟಕದಿಂದ ಯಾವುದೇ ಮನವಿ ಬಂದಿಲ್ಲ ಎಂದರು ಅಂತ ಹೇಳಿದರು ಎಂದರು. ಅದಕ್ಕೆ ಉತ್ತರಿಸಿದ ಕುಮಾರಸ್ವಾಮಿ, ರಾಜ್ಯ ಸರ್ಕಾರದ ಧೋರಣೆ, ಅಪ್ರೋಚ್ ಸರಿ ಇಲ್ಲ, ದಿನಬೆಳಗಾದರೆ ಕೇಂದ್ರ ಸರ್ಕಾರವನ್ನು ಟೀಕಿಸುತ್ತಿದ್ದರೆ ಯಾವ ಮಂಜೂರಾತಿಗಳೂ ಸಿಗಲ್ಲ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on