‘ದರ್ಶನ್ ನನ್ನ ಪಾಲಿನ ದೇವರು’: ಟ್ಯಾಟೂ ಹಾಕಿಸಿಕೊಂಡ ಅಭಿಮಾನಿಯ ರಿಯಾಕ್ಷನ್
‘ಇದೆಲ್ಲ ಯಾಕೆ ಹಾಕಿಸಿದ್ದೀಯ ಚಿನ್ನ? ಅಪ್ಪ-ಅಮ್ಮನ ಟ್ಯಾಟೂ ಹಾಕಿಸಿಕೊಳ್ಳಬೇಕಲ್ಲವೇ ಅಂತ ದರ್ಶನ್ ಅವರು ನನಗೆ ಬುದ್ಧಿ ಹೇಳಿದರು. ನಂತರ ಚೆನ್ನಾಗಿ ಮಾತನಾಡಿ ಕಳಿಸಿದರು. 2003ರಿಂದಲೂ ನಾನು ಅವರ ದೊಡ್ಡ ಅಭಿಮಾನಿ. ನನ್ನ ಹೆಂಡತಿ ಕೂಡ ಅವರ ಅಭಿಮಾನಿ. ‘ಕಾಟೇರ’ ಹಿಟ್ ಆಗಿರುವುದರಿಂದ ಇದೇ ಡಿಸೈನ್ನಲ್ಲಿ ಟ್ಯಾಟೂ ಹಾಕಿಸಿಕೊಂದ್ದೇನೆ’ ಎಂದು ಅಭಿಮಾನಿ ಅಭಿಷೇಕ್ ಹೇಳಿದ್ದಾರೆ.
‘ಚಾಲೆಂಜಿಂಗ್ ಸ್ಟಾರ್’ ದರ್ಶನ್ (Darshan) ಅವರ ಅಭಿಮಾನಿಯಾಗಿರುವ ಅಭಿಷೇಕ್ ಅವರು ಮೈಮೇಲೆ ತಮ್ಮ ನೆಚ್ಚಿನ ನಟನ ಭಾವಚಿತ್ರದ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಫೆಬ್ರವರಿ 16ರಂದು ದರ್ಶನ್ ಅವರ ಜನ್ಮದಿನ (Darshan Birthday). ಆ ಪ್ರಯುಕ್ತ ಗಿಫ್ಟ್ ರೂಪದಲ್ಲಿ ಅಭಿಷೇಕ್ ಅವರು ಈ ಟ್ಯೂಟೂ ಹಾಕಿಸಿಕೊಂಡಿದ್ದಾರೆ. ಆ ಬಗ್ಗೆ ಅವರು ರಿಯಾಕ್ಷನ್ ನೀಡಿದ್ದಾರೆ. ‘ದರ್ಶನ್ ಅವರು ಮಾಡುವ ದಾನ ಧರ್ಮ, ಪ್ರಾಣಿ ಪಕ್ಷಿಗಳ ಬಗ್ಗೆ ಅವರಿಗೆ ಇರುವ ಕಾಳಜಿ. ಪ್ರಾಣಿಗಳನ್ನು ದತ್ತು ಪಡೆಯಿರಿ ಅಂತ ಅವರು ನೀಡಿದ ಸಂದೇಶ.. ಹೀಗೆ ಅನೇಕ ಕಾರಣಗಳಿಂದಾಗಿ ದರ್ಶನ್ ಅವರು ನನಗೆ ಇಷ್ಟ. ಅವರನ್ನು ಪ್ರತಿ ದಿನ ನೆನಪಿಸಿಕೊಳ್ಳುತ್ತೇವೆ. ನನ್ನ ಪಾಲಿಗೆ ಅವರು ದೇವರು’ ಎಂದು ಅಭಿಮಾನಿ ಅಭಿಷೇಕ್ ಹೇಳಿದ್ದಾರೆ. ‘ಕಾಟೇರ’ ಸಿನಿಮಾದ ಪೋಸ್ಟರ್ನ ರೀತಿಯಲ್ಲಿ ಈ ಟ್ಯಾಟೂ ಮೂಡಿಬಂದಿದೆ. ಕಲಾವಿದ ವಿನೋದ್ ಅವರು ಈ ಟ್ಯಾಟೂ (Darshan Tattoo) ಹಾಕಿದ್ದಾರೆ. ಈ ಬಾರಿ ದರ್ಶನ್ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ