ದರ್ಶನ್ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ; ಬೆಳ್ಳಿ ಪರ್ವಕ್ಕೆ ನಡೆದಿದೆ ಭರದ ಸಿದ್ಧತೆ
ದರ್ಶನ್ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು 25 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ರಜತ ಮಹೋತ್ಸವ ಆಚರಿಸಲಾಗುತ್ತಿದೆ. ಶನಿವಾರ (ಫೆಬ್ರವರಿ 17) ಸಂಜೆ 5ಕ್ಕೆ ಕಾರ್ಯಕ್ರಮ ಆರಂಭ ಆಗಲಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ರಂಗನಾಥ ಸ್ವಾಮಿ ದೇವಸ್ಥಾನದ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ದರ್ಶನ್ ಅವರನ್ನು ಅಭಿನಂದಿಸಲು ಫ್ಯಾನ್ಸ್ ರೆಡಿ ಆಗುತ್ತಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan Thoogudeepa) ಅವರು ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳು ಕಳೆದಿವೆ. ಬಾಕ್ಸ್ ಆಫೀಸ್ ಸುಲ್ತಾನ, ಚಾಲೆಂಜಿಂಗ್ ಸ್ಟಾರ್ ಸೇರಿ ಹಲವು ಬಿರುದುಗಳು ಅವರಿಗೆ ಇದೆ. ಅವರು 25 ವರ್ಷಗಳಲ್ಲಿ ಅಪಾರ ಅಭಿಮಾನಿ ಬಳಗ ಸಂಪಾದಿಸಿದ್ದಾರೆ. ಅವರನ್ನು ಆರಾಧಿಸುವ ಅಭಿಮಾನಿ ವರ್ಗ ದೊಡ್ಡದಿದೆ. ಈಗ ದರ್ಶನ್ ಅವರ ಫ್ಯಾನ್ಸ್ ‘ಬೆಳ್ಳಿ ಪರ್ವ’ ಆಚರಣೆಗೆ ಮುಂದಾಗಿದ್ದಾರೆ. ಅದ್ದೂರಿಯಾಗಿ ಈ ಕಾರ್ಯಕ್ರಮ ನಡೆಯಲಿದೆ.
1997ರಲ್ಲಿ ‘ಮಹಾಭಾರತ’ ಚಿತ್ರದಲ್ಲಿ ದರ್ಶನ್ ನಟಿಸಿದರು. 2000ನೇ ಇಸವಿಯಲ್ಲಿ ನಟ ದರ್ಶನ್ ಅವರು ಶಿವರಾಜ್ಕುಮಾರ್, ಅಂಬರೀಷ್ ನಟನೆಯ ‘ದೇವರ ಮಗ’ ಸಿನಿಮಾದಲ್ಲಿ ನಟಿಸಿದರು. ದರ್ಶನ್ ಹೆಸರಿನ ಪಾತ್ರದಲ್ಲಿಯೇ ಕಾಣಿಸಿಕೊಂಡರು ಚಾಲೆಂಜಿಂಗ್ ಸ್ಟಾರ್. ನಂತರ ‘ವಲ್ಲರಸು’ ಚಿತ್ರದಲ್ಲಿ ಅವರು ನಟಿಸಿದರು. ಇದು ತಮಿಳು ಸಿನಿಮಾ. ನಂತರ ಕೆಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದರು. ‘ಮೆಜೆಸ್ಟಿಕ್’ ಚಿತ್ರದಲ್ಲಿ ದರ್ಶನ್ ಹೀರೋ ಆಗಿ ಮಿಂಚಿದರು. ಅಲ್ಲಿಂದ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಹಲವು ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ.
ದರ್ಶನ್ ಕುರಿತ ಟ್ವೀಟ್..
ಚಾಲೆಂಜಿಂಗ್ ಸ್ಟಾರ್ “ದರ್ಶನ್ ತೂಗುದೀಪ” ರವರು ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿ ಯಶಸ್ವಿಯಾಗಿ 25 ವರ್ಷಗಳು ಪೂರೈಸಿದ ಸಲುವಾಗಿ ರಜತ ಮಹೋತ್ಸವದ ಸಂಭ್ರಮಾಚಾರಣೆ♥️
ಬೆಳ್ಳಿ ಪರ್ವ D-25 #DBoss #BossOfSandalwood #D25 #DevilTheHero@dasadarshan pic.twitter.com/zXx7xYM6Fk
— 𝗗𝗘𝗩𝗜𝗟 ᵗʰᵉ 𝙃𝙚𝙍𝙤 (@vikasDboss) February 12, 2024
ದರ್ಶನ್ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ರಜತ ಮಹೋತ್ಸವ ಆಚರಿಸಲಾಗುತ್ತಿದೆ. ಬರುವ ಶನಿವಾರ (ಫೆಬ್ರವರಿ 17) ಸಂಜೆ 5ಕ್ಕೆ ಈ ಕಾರ್ಯಕ್ರಮ ಆರಂಭ ಆಗಲಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ರಂಗನಾಥ ಸ್ವಾಮಿ ದೇವಸ್ಥಾನದ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ದರ್ಶನ್ ಅವರನ್ನು ಅಭಿನಂದಿಸಲು ಫ್ಯಾನ್ಸ್ ರೆಡಿ ಆಗುತ್ತಿದ್ದಾರೆ.
ಇದನ್ನೂ ಓದಿ: ಪತ್ನಿ, ಮಗನೊಡನೆ ತಿರುಪತಿ, ಕಾಳಹಸ್ತಿ ದೇವಾಲಯಗಳಿಗೆ ದರ್ಶನ್ ಭೇಟಿ
25ನೇ ವರ್ಷಕ್ಕೆ ದರ್ಶನ್ ಅವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಅವರ ನಟನೆಯ ‘ಕಾಟೇರ’ ಚಿತ್ರ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 200 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇತ್ತೀಚೆಗೆ ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ. ಈ ಚಿತ್ರದ ಮೂಲಕ ದರ್ಶನ್ ದೊಡ್ಡ ಗೆಲುವು ಕಂಡಿದ್ದಾರೆ. ಈ ಚಿತ್ರಕ್ಕೆ ತರುಣ್ ಸುಧೀರ್ ನಿರ್ದೇಶನ ಇದೆ. ಕಳೆದ ಡಿಸೆಂಬರ್ 29ರಂದು ಚಿತ್ರ ರಿಲೀಸ್ ಆಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:39 am, Mon, 12 February 24